ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕ ಸಭೆ ಕರೆಯಲು ಪುರಸಭೆಯ ಮಾಜಿ ಅಧ್ಯಕ್ಷ ಮನವಿ

ಬೈಲಹೊಂಗಲ : ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಲ್ಲದಕೂಟ, ಅಂಬೇಡ್ಕರ ಉದ್ಯಾನವನದ ವರೆಗೂ ಇಕ್ಕಟ್ಟಾದ ರಸ್ತೆಯಿದ್ದು ಪ್ರತಿದಿನ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ಎದುರಿಸುವಂತಾಗಿದೆ. ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದು ದೇವಸ್ಥಾನಗಳು, ಶಾಲಾ, ಕಾಲೇಜುಗಳು ಮಠಮಾನ್ಯಗಳು ಈ ರಸ್ತೆಯಲ್ಲಿವೆ. ಅಲ್ಲದೆ ಪ್ರತಿ ಶುಕ್ರವಾರ ಸಂತೆ ನಡೆಯುವ ಪ್ರದೇಶ ಇದಾಗಿದ್ದು ವಾಹನ ಸಂಚಾರಕ್ಕೆ ಅಸ್ತವ್ಯಸ್ತತೆ ಕಾಡುತ್ತಿದೆ. 

promotions

ರಸ್ತೆ ಅಗಲೀಕರಣಕ್ಕೆ ಬಹಳ ದಿನಗಳಿಂದ ಬೇಡಿಕೆ ಇದ್ದು, ಕೆಲವರ ಸ್ವಹಿತಾಸಕ್ತಿಯಿಂದ ಅಗಲೀಕರಣ ಕಾರ್ಯ ನಿಂತು ಹೋಗಿದೆ. ಈ ರಸ್ತೆಯು ಸುಮಾರು ಒಂದುವರೆ ಕಿ.ಮೀ ಇದ್ದು ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಪ್ರದೇಶವಾಗಿದೆ. ಈ ರಸ್ತೆಯು ರಾಯಣ್ಣ ವೃತ್ತದಿಂದ ಕಲಗುಡಿವರೆಗೆ 200 ಮೀ ಮಾತ್ರ ದೊಡ್ಡದಿದ್ದು ನಂತರ ಅಂಬೇಡ್ಕರ್ ಉದ್ಯಾನವನದವರೆಗೂ ತುಂಬಾ ಚಿಕ್ಕದಿದೆ. ಒಂದು ವಾಹನ ಸಂಚರಿಸುವಾಗ ಎದುರಿಗೆ ಬರುವ ವಾಹನಗಳಿಗೆ ಅಡಚಣೆ ಉಂಟಾಗಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಈ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ನಡೆದಿಲ್ಲ. ಪುರಸಭೆ ವತಿಯಿಂದ ಸರ್ವೇ ಕಾರ್ಯ ಮುಗಿದರೂ ರಸ್ತೆ ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿದೆ. 

promotions

ಅಭಿವೃದ್ಧಿಯ ದೃಷ್ಟಿಯಿಂದ ಪುರಸಭೆಯ ಮಾಜಿ ಅಧ್ಯಕ್ಷ ಈ ರಸ್ತೆ ಅಗಲೀಕರಣ ಅತೀ ಅವಶ್ಯಕ ಇದ್ದು ಕೂಡಲೇ ಸಾರ್ವಜನಿಕ ಸಭೆ ಕರೆಯುವಂತೆ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿರುವ ಅವರ ಪೋಸ್ಟ್ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. 

ಈ ಕುರಿತು ನಮ್ಮ ಮಾಧ್ಯಮದ ಜೊತೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ , ಪಟ್ಟಣದ ಅಭಿವೃದ್ಧಿ, ಸಾರ್ವಜನಿಕರ ಅನೂಕೂಲದ   ದೃಷ್ಟಿಯಿಂದ ಈ ರಸ್ತೆ ಅಗಲೀಕರಣ ಆಗಬೇಕಾಗಿದೆ. ಆದಷ್ಟು ಬೇಗ ಈ ಕುರಿತು ಪುರಸಭೆ ಗಮನಹರಿಸಿ ಸಾರ್ವಜನಿಕರ ಸಭೆ ಕರೆದು ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕು ಎಂದರು.

ವರದಿ  : ರವಿಕಿರಣ್  ಯಾತಗೇರಿ 

Read More Articles