ರಾಜ್ಯದ ಯಾವದೇ ಜಿಲ್ಲೆಗೆ ಸಮರ್ಪಕವಾಗಿ ಅನುದಾನ ನೀಡದ ಸರ್ಕಾರ

ಬೈಲಹೊಂಗಲ : ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡುವದು ಯಾವ ನ್ಯಾಯ? ಅಧಿಕಾರದ‌ ಆಸೆಯಿಂದ ಉಚಿತ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದವರು ಇಂದು ಕೇಂದ್ರ ಸರ್ಕಾರದ ಮುಂದೆ ನಮಗೇನು ಕೊಟ್ಟಿಲ್ಲ ಎನ್ನುತ್ತಿರುವದು ವಿಪರ್ಯಾಸವೆಂದರೆ ಸರಿ.

promotions

ಅಧಿಕಾರದ ಮದವೇರಲು ಸಿಕ್ಕಾಪಟ್ಟೆ ಘೋಷಣೆ ಮಾಡಿ, ಈಡೇರಿಸಲು ಅಸಾಧ್ಉವಾದಾಗ ಮತ್ತೊಬ್ಬರ‌ ಕಡೆಗೆ ಬೆರಳು ತೋರಿಸುವದು ಎಷ್ಟರ ಮಟ್ಟಿಗೆ ಸರಿ. 

promotions

ರಾಜ್ಯದ ಸುತ್ತಮುತ್ತಲಿನ ಇತರೇ ರಾಜ್ಯಗಳ ವ್ಯವಹಾರಿಕ ಪರಿಸ್ಥಿತಿ ಗಮನಿಸಿದಾಗ ನಮ್ಮ ರಾಜ್ಯದ ಸ್ಥಿತಿ ಚಿಂತಾಜನಕವಾಗಿದೆ. ಅತ್ಯಂತ ದುಸ್ತರವಾಗಿ ರಾಜ್ಯದ ಜನತೆ ಜೀವನ ಮಾಡುವಂತೆ ಈ ಸರ್ಕಾರ ನಡೆಸಿಕೊಳ್ಳುತ್ತಿದೆ.

ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಮಾಡುತ್ತಿರುವದು ಯಾವ ಪುರುಷಾರ್ಥಕ್ಕಾಗಿ ? 'ಜನರ ಹಿತ ಕಾಪಾಡಲು ಸಾದ್ಯವಾಗದ‌ ರಾಜ್ಯ ಸರ್ಕಾರ‌, ಕೇಂದ್ರ ಸರ್ಕಾರದ ಬಜೆಟ್ ಘೋಷಣೆ ಮೇಲೆ ಅವಲಂಬಿತವಾಗಿರುವದು ಹಾಸ್ಯಾಸ್ಪದ.

ವರದಿ  : ರವಿಕಿರಣ್  ಯಾತಗೇರಿ

Read More Articles