ಬಿಪಿಎಲ್ ಕಾರ್ಡುದಾರರ ಮೇಲೆ ಕಣ್ಣಿಟ್ಟಿರುವ ಸರ್ಕಾರ ! ಮಧ್ಯಮ ವರ್ಗದ ಅಣ್ಣ ಕಸಿಯುವ ಹುನ್ನಾರ
- shivaraj B
- 7 Sep 2024 , 11:13 PM
- Bailhongal
- 350
ಬೈಲಹೊಂಗಲ : ಕೇಂದ್ರ ಸರ್ಕಾರ ಕೊಡುತ್ತಿರುವ ಅಕ್ಕಿಯ ಮೇಲೆ ಕಣ್ಣ ಹಾಕಿರುವ ಸಿದ್ದರಾಮಯ್ಯನ ಸರ್ಕಾರ, ಬಿಪಿಎಲ್ ಕಾರ್ಡ ಬಂದ ಮಾಡಿ ತಿನ್ನುವ ಅನ್ನಕ್ಕೂ ಕಣ್ಣ ಹಾಕೂವ ಯೋಚನೆಯಲ್ಲಿದೆ.
ಬಿಪಿಎಲ್ ಕಾರ್ಡ ಹೊಂದಿರುವ ಕುಟುಂಬದ ಸದಸ್ಯರ ಹೆಸರಿನಲ್ಲಿ ಕಾರು, ಫ್ರಿಡ್ಜ್ ಇತರೇ ಐಶಾರಾಮಿ ವಸ್ತುಗಳು ಇದ್ದರೆ ಅಂತಹವರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಎಪಿಎಲ್ ಗೆ ಪರಿವರ್ತನೆ ಮಾಡುವ ಬಗ್ಗೆ ಚಿಂತನೆ ನಡೆಸಿರುವ ಸಚಿವ ಕೆ.ಎಚ್.ಮುನಿಯಪ್ಪನವರ ನಡೆಗೆ ರಾಜ್ಯಾದ್ಯಂತ ಜನ ಬೀದಿಗೆ ಇಳಿಯುವ ದಿನಗಳು ದೂರಿಲ್ಲ.
ಕೇಂದ್ರ ಸರ್ಕಾರ ಉಚಿತವಾಗಿ ಪೂರೈಸುವ ಯೋಜನೆಗೂ ಕಣ್ಣ ಹಾಕಿ ತಮ್ಮ ಪುಕ್ಕಟೆ ಭರವಸೆಗಳನ್ನು ಈಡೇರಿಸಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರ ತನ್ನ ಸ್ವಾರ್ಥಿತನ ಮೆರೆಯುತ್ತಿದೆ.
ಕೋವಿಡ್ -19 ನ ಮೊದಲ ಹಂತದಿಂದಲೂ ದೇಶದ ಕೋಟ್ಯಾಂತರ ಕುಟುಂಬಗಳಿಗೆ ಉಚಿತವಾಗಿ ಪಡಿತರ ಧಾನ್ಯ ವಿತರಿಸುತ್ತಿರುವ ಕೇಂದ್ರ ಸರ್ಕಾರ ತನ್ನ ಯೋಜನೆ ಮುಂದುವರೆಸಿದ್ದರೂ ಸಹ ರಾಜ್ಯ ಸರ್ಕಾರಗಳು ಅವುಗಳ ಅನುಷ್ಠಾನಕ್ಕೆ ಅಡೆತಡೆ ಉಂಟು ಮಾಡುತ್ತಿರುವದು ತನ್ನ ಸ್ವಾರ್ಥಕ್ಕಾಗಿ ಎನ್ನುವ ವಿಷಯ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ವರದಿ : ರವಿಕಿರಣ್ ಯಾತಗೇರಿ