ಜೈನ್ ಮುನಿಗಳ ಹತ್ಯೆ ಮಾಡಿದ್ದು ಖಂಡನೀಯ: ಹುಕ್ಕೇರಿ ಶ್ರೀ

ಬೆಳಗಾವಿ : ಕಳೆದ 15 ವರ್ಷಗಳಿಂದ 'ಅಹಿಂಸೆ ಪರಮೋಧರ್ಮ' ಎಂದು ಶಾಂತಿ ಮಂತ್ರ ಸಾರುತ್ತ ಧರ್ಮ ಪ್ರಚಾರ ಮಾಡಿದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಅವರ ಹತ್ಯೆ ಮಾಡಿದ್ದು ಖಂಡನೀಯ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

promotions

ಸಮಾಜಕ್ಕೆ ಶಾಂತಿ ಮಂತ್ರ ಸಾರುವ ಸಾಧುಗಳು, ಜೈನ ಮುನಿಗಳ ಇಂಥ ಹತ್ಯೆ ಮಾಡುವುದು ಸರಿಯಲ್ಲ. ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಗಳು ಅಪಾರ ಭಕ್ತಗಣವನ್ನು ಹೊಂದಿದ್ದರು. ಅವರ ಹತ್ಯೆ ಮಾಡಿದ್ದು ಖಂಡನೀಯ. ಅವರ ಭಕ್ತರಿಗೆ ದುಃಖ ಭರಿಸುವ ಶಕ್ತಿ ದೇವರು ದಯಪಾಲಿಸಲಿ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಂತಾಪ ಸೂಚಿಸಿದ್ದಾರೆ.

promotions

Read More Articles