ಬೆಳಗಾವಿಯನ್ನು ಬೆಚ್ಚಿಬೀಳಿಸಿದ್ದ ಮರ್ಡರ ಕೇಸ್ : 2 ಆರೋಪಿಗಳು ಅಂದರ
- Krishna Shinde
- 15 Jan 2024 , 12:29 AM
- Belagavi
- 393
ಬೆಳಗಾವಿ :ದಿನಾಂಕ:30.08.2023 ರಂದು ರಾತ್ರಿ ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿವಬಸವ ನಗರದಲ್ಲಿ ನಾಗರಾಜ ಈರಪ್ಪ ಗಾಡಿವಡ್ಡರ ಎಂಬ ಯುವಕನನ್ನು ಯಾರೋ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದು, ಈ ಪ್ರಕರಣವು ಒಂದು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಈ ಪ್ರಕರಣವನ್ನು ಭೇಧಿಸಲು ಶೇಖರ, ಹೆಚ್.ಟಿ, ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು, (ಕಾ&ಸು) ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ ಎನ್.ವಿ. ಭರಮನಿ, ಎಸಿಪಿ ಮಾರ್ಕೆಟ್ ಉಪ ವಿಭಾಗ ಮತ್ತು ಜೆ.ಎಂ. ಕಾಲಿಮಿರ್ಚಿ, ಪಿ.ಐ. ಮಾಳಮಾರುತಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.

ಈ ತಂಡವು ಸಂಶಯಾಸ್ಪದ ಆರೋಪಿತರ ಬಗ್ಗೆ ಮಹತ್ತರ ಸುಳಿವನ್ನು ಪಡೆದು, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರದ ಎಲ್.ಸಿ.ಬಿ. ಪೊಲೀಸರ ಸಹಕಾರದೊಂದಿಗೆ ದಿನಾಂಕ:01.09.2023 ಆರೋಪಿತರಾದ
1) ಪ್ರಥಮೇಶ ಧಮೇರ್ಂದ್ರ ಕಸಬೇಕರ ವಯಸ್ಸು:20 ವರ್ಷ ರಂದು ಇಬ್ಬರು ಸಾ:ರಾಜಾರಾಮಪುರಿ ಬಾಯಚಾಪ ಚಾಳ ಗಲ್ಲಿ ಕೊಲ್ಲಾಪೂರ,
2) ಆಕಾಶ ಕಾಡಪ್ಪಾ ಪವಾರ ವಯಸ್ಸು: 21 ವರ್ಷ ಸಾ:ರಾಜಾರಾಮ ಚೌಕ ಎ-ವಾರ್ಡ ಕೊಲ್ಲಾಪೂರ ಇವರಿಗೆ ಕೊಲ್ಲಾಪೂರದಲ್ಲಿ ವಶಕ್ಕೆ ಪಡೆದು ವಿಚಾರಿಸಲಾಗಿ ಕೃತ್ಯ ಎಸಗಿದ ಬಗ್ಗೆ ಒಪ್ಪಿಕೊಂಡಿದ್ದಾರೆ.

ಆರೋಪಿತರಿಗೆ ದಸ್ತಗೀರ ಮಾಡಿ ನ್ಯಾಯಾಲದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆ ಕುರಿತು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆ ಕೈಗೊಳ್ಳಲಾಗುವುದು. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ದಸ್ತಗೀರ ಮಾಡುವ ಪ್ರಕ್ರಿಯೆಯು ಜಾರಿಯಲ್ಲಿದೆ ಎಂದು ಇಲಾಖೆ ತಿಳಿಸಿದೆ.
ಸೂಕ್ಷ್ಮ ಪ್ರಕರಣವನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಾದ ಮಾರ್ಕೆಟ್ ಉಪ ವಿಭಾಗದ ಎಸಿಪಿ ನಾರಾಯಣ ಭರಮನಿ, ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ, ಪಿಎಸ್‌ಐಗಳಾದ ಹೊನ್ನಪ್ಪ ತಳವಾರ, ಶ್ರೀಶೈಲ ಹಾಗೂ ಸಿಬ್ಬಂದಿ ಜನರಾದ ಕುಂಡೆದ, ಚಿನ್ನಪ್ಪಗೋಳ, ಬಸ್ತವಾಡ, ಗೌರಾಣಿ, ಹೊಸಮನಿ ಮತ್ತು ಮುಜಾವರ ರವರ ಕಾರ್ಯಕ್ಷಮತೆಯನ್ನು ಮೆಚ್ಚಿ ಬಹುಮಾನ ಘೋಷಿಸಲಾಗಿದೆ.










