
ಪಂಚಾಯತಿ ಎದುರಿಗೆ ಕಸ ತಂದು ಸುರಿದ ಮನೆ ಮಾಲಿಕ
- shivaraj bandigi
- 28 May 2024 , 6:27 PM
- Belagavi
- 335
ಚಿಕ್ಕೋಡಿ : ಮನೆ ಎದುರಿನ ಕೊಳಚೆ, ಕಸ ವಿಲೇವಾರಿ ಮಾಡದ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ದ ರೊಚ್ಚಿಗೆದ್ದ ಮನೆ ಮಾಲಿಕನೊಬ್ಬ ಗ್ರಾಮ ಪಂಚಾಯತಿಗೆ ಕಸ ಸುರಿದ ಘಟನೆ ರಾಯಬಾಗ ತಾಲೂಕಿನ ನಿಡಗುಂದಿಯಲ್ಲಿ ನಡೆದಿದೆ.

ಗ್ರಾಮದ ಎರಡನೇ ವಾರ್ಡ್‌ನ ಪ್ರಕಾಶ ಕಾಂಬಳೆ ಎಂಬುವ ವ್ಯಕ್ತಿ ತನ್ನ ಮನೆಯ ಮುಂದಿನ ಕೊಳಚೆ ಹಾಗೂ ಕಸ ವಿಲೆವಾರಿ ಮಾಡುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಹಲವಾರು ಬಾರಿ ಸೂಚಸಿದ್ದ ಪ್ರಕಾಶ. ಆತನಮನೆಯ ಮುಂದಿರುವ ಗಟಾರ್‌ನಲ್ಲಿ ಕೊಳಚೆ ತುಂಬಿಕೊಂಡು ದುರ್ನಾತ ವಾಸನೆ ಬರ್ತಿದ್ರು ಕ್ಯಾರೇ ಎನ್ನದ ಗ್ರಾಮ ಪಂಚಾಯಿತಿ ಸಿಬ್ಬಂದಿ. ಕೊಳಚೆ ವಿಲೇವಾರಿ ಮಾಡದ ಹಿನ್ನೆಲೆ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ

ಎಷ್ಟೇ ಸಲ ಮನವಿ ಮಾಡಿದ್ದರೂ ಸಹ ಕಸ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಮನೆಯ ಮುಂದಿನ ಕಸ ಗೂಡ್ಸ್ ವಾಹನದಲ್ಲಿ ತಂದು ಪಂಚಾಯಿತಿ ಎದುರು ಹಾಕಿದ್ದಾನೆ.