ನನಗೆ ಪಕ್ಷ ಮೋಸ ಮಾಡಿದೆ ಲಕ್ಷ್ಮಣ ಸೌದಿ ಕಿಡಿ
- Krishna Shinde
- 15 Jan 2024 , 1:34 AM
- Belagavi
- 310
ಅಥಣಿ:ಲಕ್ಷ್ಮಣ್ ಸೌದಿ ಅವರಿಗೆ ಟಿಕೆಟ್ ಘೋಷಣೆ ಆಗದ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಅಥಣಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ನಾಳೆ ಎಂಎಲ್ಸಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹುದ್ದೆಗು ರಾಜೀನಾಮೆ ನೀಡುತ್ತೇನೆ ಮತ್ತು ಪಕ್ಷವೇ ನನ್ನ ತಾಯಿ ಎಂದು ನಾನು ನಂಬಿದ್ದೆ ಆದರೆ ಕೆಲವೊಂದು ಶಕ್ತಿಗಳು ನನ್ನನ್ನು ವೇದಿಕೆಗೆ ಹಂಚಿಕೊಳ್ಳಲು ಬಿಡುತ್ತಿರಲಿಲ್ಲ ಆದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಮಂತ್ರಿ ಸ್ಥಾನ ನೀಡಿದಾಗ ಯಾವುದೇ ಒಂದು ಮಾತು ಹೇಳದೆ ಮಂತ್ರಿ ಸ್ಥಾನದಿಂದ ವಜಾ ಮಾಡಿದರು ಅವಾಗ ನಾನೇನು ಪಕ್ಷವಿರೋದಿ ಚಟುವಟಿಕೆ ಹಾಗೂ ಯಾವ ಸಚಿವರ ವಿರುದ್ಧವು ಟೀಕೆಗಳನ್ನು ಮಾಡಲಿಲ್ಲ ಎಂದು ಹೇಳಿದ್ದಾರೆ.










