ಅಧಿಕಾರಿಗಳ ನಿರ್ಲಕ್ಷ್ಯ ಬೀದಿಯಲ್ಲಿ ಬದುಕುತ್ತಿರುವ ಬಡ ಜೀವಗಳು

Listen News

ಅಥಣಿ : ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಸೂರು ಇಲ್ಲದೆ ಬಯಲಿನಲ್ಲಿ ಬದುಕು ಸಾಗಿಸುತ್ತಿರುವ ಬಡ ಜೀವಗಳು. 

Your Image Ad

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸೂರು ಕಳೆದುಕೊಂಡು ಬೀದಿಗೆ ಬಂದ ತಾಯಿ, ಮಗ ಮಳೆಯಲ್ಲಿ ನೆನೆಯುತ್ತಿದ್ದಾರೆ.  

Your Image Ad

 ಅಥಣಿ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. 

ಇಷ್ಟು ದಿನ ಮುರುಕು ಗೂಡಿನಲ್ಲಿ ಇದ್ದ ತಾಯಿ ಕೊಂಡಬಾಯಿ ಪೋಳ, ಅಪಘಾತದಲ್ಲಿ ಕಾಲು ಕಳೆದುಕೊಂಡ ಮಗ ಸುಭಾಷ ಪೋಳ ಬಯಲಿನಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿ,

 ಇಬ್ಬರ ಬದುಕಿನ ಪರಿಸ್ಥಿತಿ ಶೋಚನೀಯ ಹಂತಕ್ಕೆ ತಲುಪಿದೆ. 

ಮೂಲತಃ ನಂದಗಾಂವ್ ಗ್ರಾಮದ ವಾಸವಿರುವ ಇವರು ನೆತ್ತಿಯ ಮೇಲೆ ಒಂದು ಸೂರು ಇಲ್ಲದೆ ಕಳೆದ ಮೂರು ದಿನಗಳಿಂದ ಮಳೆಯಲ್ಲಿ ನೆನೆಯುತ್ತಿದ್ದಾರೆ.

ಸಂಪೂರ್ಣವಾಗಿ ಅನಕ್ಷರಸ್ಥ, ಆಸ್ತಿ ಸ್ವತಃ ಜಮೀನು ಇಲ್ಲದೆ ಬಿದಿಗೆ ಬಿದ್ದಿರುವ ಕುಟುಂಬಕ್ಕೆ ಸಹಾಯ ಮಾಡುವ ಅಧಿಕಾರಿಗಳ ಕೈ ಬೇಕಾಗಿದೆ. 

ಸದ್ಯ ಯಾರದೋ ಒಂದು ಮನೆಯ ಗೋಡೆಗೆ ಆಶ್ರಿತವಾಗಿ ಬದುಕು ಸಾಗಿಸುತ್ತಿರುವ ತಾಯಿ ಮಗನತ್ತ ಇಲ್ಲಿನ ಅಧಿಕಾರಿಗಳು ಗಮನ ಹರಿಸಿ ಸಹಾಯ ಹಸ್ತ ಚಾಚಬೇಕಾಗಿದೆ. 

ಅಥಣಿ ಶಾಸಕ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗದಿರಲಿ ಬಡ ಜೀವಗಳು.

ನಿರಾಶ್ರಿತರ ಕೇಂದ್ರಕ್ಕಾದರೂ ಈ ಜೀವಗಳನ್ನು ಸಾಗಿಸಿ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿಯಲಿ ಎನ್ನುವದು ಅಭಿಪ್ರಾಯ.

ವರದಿ  : ರಾಹುಲ್  ಮಾದರ

Read More Articles