ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ದೇಗುಲಗಳ ಪಾತ್ರ ಮಹತ್ವದ್ದು: ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ: ಮನುಷ್ಯ ನೈತಿಕತೆಯ ಚೌಕಟ್ಟಿನಲ್ಲಿ ಸುಸಂಸ್ಕೃತರಾಗಿ ಬದುಕುವ ನಿಟ್ಟಿನಲ್ಲಿ ದೇವಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಬೆಳಗಾವಿ ಗ್ರಾಮಿಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

promotions

ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಂಡಿಗೇರಿ ಗ್ರಾಮದ ನೂತನ ಗ್ರಾಮದೇವಿ ಮಂದಿರದ ಸಮುದಾಯ ಭವನ ನಿರ್ಮಾಣಕ್ಕಾಗಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ (MLA Fund) 12 ಲಕ್ಷ ರೂ,ಗಳನ್ನು ಒದಗಿಸಿದ್ದು, ಚೆಕ್ ನ್ನು ದೇವಸ್ಥಾನ ಕಮಿಟಿಯವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

promotions

ದೇವಾಲಯಗಳಿಗೆ ಹೋಗಿ ಶ್ರದ್ಧಾಭಕ್ತಿ ಸಮರ್ಪಿಸುವುದರಿಂದ ಮನುಷ್ಯನ ಮಾನಸಿಕತೆ ಬದಲಾಗುವುದಲ್ಲದೆ ವ್ಯಕ್ತಿಗತ ಬದಲಾವಣೆಗಳ ಮೂಲಕ ಸುಸಂಸ್ಕೃತ ಸಮಾಜವೊಂದರ ನಿರ್ಮಾಣವಾಗುತ್ತದೆ. ಹೀಗಾಗಿ ಕ್ಷೇತ್ರದಲ್ಲಿ ದೇಗುಲಗಳ ಅಭಿವೃದ್ಧಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು ಇದರ ಸದುಪಯೋಗವಾಗಬೇಕು ಎಂದು ಅವರು ಹೇಳಿದರು. ಇದೇ ವೇಳೆ ಅವರು ಗ್ರಾಮದೇವಿ ಮಂದಿರದ ಮುಖ್ಯದ್ವಾರದ ಚೌಕಟ್ಟಿನ ಪೂಜೆಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ರವಿ ಮೇಳೆದ, ಸಿದ್ದಣ್ಣ ಹಾವಣ್ಣವರ, ಶಂಕು ಮೇಳೆದ, ಫಕೀರ್ ನಾಯ್ಕ, ಬಸಮ್ಮ ಚವ್ಹಾಣ, ಶಕುಂತಲಾ ದೊಡಮನಿ, ಶಿವಾನಂದ ಚಂಡು, ಮುರಸಿದ್ದ ಬಾಳೇಕುಂದ್ರಿ, ಸಂಗಪ್ಪ ಕುಡಚಿ, ಬಸಪ್ಪ ಕಾದ್ರೊಳ್ಳಿ, ಲಕ್ಷ್ಮೀ ತಳವಾರ, ಅನ್ನಪೂರ್ಣ ಕುಂಬಾರ, ಮಲ್ಲಪ್ಪ ಮಲ್ಲಕನವರ, ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ, ಉಪಾಧ್ಯಕ್ಷ ಸರ್ವಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಉಪಸ್ಥಿತರಿದ್ದರು.

Read More Articles