ನೂರಾರು ಸಮಸ್ಯೆಗಳ ನಡುವೆ ಎತ್ತ ಸಾಗುತ್ತಿದೆ ರಾಜ್ಯ ಕಾಂಗ್ರೆಸ್ ಸರ್ಕಾರ

ಬೈಲಹೊಂಗಲ : ತನ್ನ ಅಸ್ತಿತ್ವಕ್ಕಾಗಿ ಹರಸಾಹಸ ನಡೆಸಿರುವ ರಾಜ್ಯ ಸರ್ಕಾರ, ದಿನಕ್ಕೊಂದು ವಸ್ತುವಿನ ಬೆಲೆ ಏರಿಕೆ ಮಾಡುತ್ತಿದೆ. ಚುನಾವಣೆಯ ಮೊದಲು ಜನರಿಗೆ ಕೊಟ್ಟ ಭರವಸೆ  ಈಡೇರಿಸಲು ಇನ್ನಿಲ್ಲದ ಸಾಹಸಕ್ಕೆ ಕೈ ಹಾಕುತ್ತಿದೆ.

promotions

ಐದು ಗ್ಯಾರಂಟಿಗಳ ಉಳುವಿಕೆಗಾಗಿ ಏನಿಲ್ಲದ ಕಸರತ್ತು ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ದುಡಿದು  ತಿನ್ನುವ ಕೂಲಿ ಕಾರ್ಮಿಕರತ್ತ ಗಮನ ಹರಿಸಲಿ. 

promotions

2 ಸಾವಿರ ನೀಡುವ ಸಲುವಾಗಿ 5 ಸಾವಿರ ಕಿತ್ತುಕೊಂಡರೆ ಹೇಗೆ ? ಸಾರಾಯಿ, ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಮಾಡಿದ್ದು ಆಯ್ತು ಈಗ ಮಕ್ಕಳು ಕುಡಿಯುವ ಹಾಲಿನ ದರ ದರ ಏರಿಕೆ ಮಾಡಿ ಯಾವ ಸಾಧನೆ ಮಾಡಲು ಹೊರಟಿದೆ. ಅಲ್ಲದೆ ದುಬಾರಿ ದುನಿಯಾದ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಈಗ ಆಟೋ ದರವನ್ನು ಕೂಡ  ಏರಿಕೆ ಮಾಡಲು ಹೊರಟಿದೆ ರಾಜ್ಯ ಸರ್ಕಾರ.

ಐದು ಗ್ಯಾರಂಟಿ ಯೋಜನೆ ಕೊಡಲು ಜನರು ಕೇಳಿದ್ದರಾ ? ತಮ್ಮ ಸ್ವಾರ್ಥಕ್ಕಾಗಿ ಯೋಜನೆ ಘೋಷಣೆ ಮಾಡಿ,  ಈಗ ಪ್ರತಿಯೊಂದರ ಬೆಲೆ ಏರಿಕೆ ಮಾಡಿ  ಬಡ, ಮಧ್ಯಮ ವರ್ಗದ ಜನರ ನೆಮ್ಮದಿ ಕಿತ್ತು ಕೊಳ್ಳುವದು ಯಾವ ನ್ಯಾಯ? 

ಈ ಸರ್ಕಾರ ಸಾಗುತ್ತಿರುವ ಮಾರ್ಗ ನೋಡಿ ನಮ್ಮ ಪೂರ್ವಜರ ಗಾದೆ ಮಾತು ಜ್ಞಾಪಕಕ್ಕೆ ಬರುತ್ತವೆ. ಯೋಜನೆಗಳ ಅನುಷ್ಠಾನಕ್ಕಾಗಿ ಬಡ ಜನರ ಮೇಲೆ ಬರೆ ಹಾಕಿ, ಮತ್ತೆ ಅವರಿಗೆ ತಿರುಗಿ ಕೊಡುವದಕ್ಕೆ ಮುಜುಗರ ಅನಿಸುದಿಲ್ಲವಾ ಎಂಬುವದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. 

ಏನ ಹೇಳೂದ್ರಿ ದಿನಾ ಸಂಜಿತನಾ ನಾವ ದುಡದ ಬರೂದಾ ಪ್ರತಿಯೊಂದು ವಸ್ತುವಿನ ಬೆಲೆ ಜಾಸ್ತಿ ಮಾಡಿದಾರ ನಮಗ ದಿನಗೂಲಿ  ಸಾಕಾಗವಾತ. ದಿವಸಕ್ಕ 300 ರೂ. ದುಡಿದ್ರ 400 ರೂ. ಖರ್ಚ ಮಾಡಬೇಕಾದ ಪರಿಸ್ಥಿತಿ ಐತಿ ಹಿಂಗಾದ್ರ ಜೀವನಾ ಹೆಂಗ ಮಾಡೂದ್ರಿ.

ವರದಿ  : ರವಿಕಿರಣ್  ಯಾತಗೇರಿ

Read More Articles