ಹದಗೆಟ್ಟ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೆಲೆ ಹೆಚ್ಚಳದ ಮೊರೆ ಹೋದ ರಾಜ್ಯ ಸರ್ಕಾರ
- shivaraj bandigi
- 15 Jun 2024 , 11:47 PM
- Bailhongal
- 5311
ಬೈಲಹೊಂಗಲ : ಬಿಟ್ಟಿ ಭಾಗ್ಯಗಳ ನೀಡಿದ ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ತರ ಹೆಜ್ಜೆ. ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಭಾಗ್ಯ.

ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಘೋಷಣೆ ಹೊರಬೀಳುತ್ತಿದ್ದಂತೆ ಬಹುತೇಕ ಪೆಟ್ರೋಲ್ ಬಂಕ ಮಾಲಿಕರು ಸ್ಟಾಕ ಇಲ್ಲ ಎಂಬ ಬೋರ್ಡ್ ಬಂಕಗಳಲ್ಲಿ ನೇತು ಹಾಕಿರುವದು, ರಾತ್ರಿಯಿಂದ ಬೆಲೆ ಏರಿಕೆಯ ಬಿಸಿ ತಾಗದಂತೆ ತಮ್ಮ ವಾಹನಗಳಿಗೆ ಇಂಧನ ತುಂಬಿಸಲು ಸರತಿ ಸಾಲಿನಲ್ಲಿ ಕಿ.ಮೀ.ಗಟ್ಟಲೆ ನಿಂತ ವಾಹನ ಚಾಲಕರು ಜಿಲ್ಲೆಯ ಎಲ್ಲೆಡೆ ಕಂಡು ಬರುತ್ತಿದ್ದಾರೆ.

ದಿನಗೂಲಿ ನೌಕರರು, ಮಧ್ಯಮ ವರ್ಗದ ಜನರ ಜೇಬಿಗೆ ಈಗಾಗಲೆ ಕತ್ತರಿ ಹಾಕಿರುವ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಜೇಬನ್ನೇ ಕದಿಯುವ ಮಟ್ಟಕ್ಕೆ ತಲುಪಿದೆ. ಸಕಾಲಕ್ಕೆ ಮಳೆಯಾಗದೆ ಕಂಗೆಟ್ಟ ಜನರಿಂದ ಕಸಿದುಕೊಳ್ಳುವ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರದ ನಡೆಗೆ ಜನರು ಮಾತೆ ಹೊರಡದೆ ವಿಶ್ಮಿತರಾಗಿದ್ದಾರೆ.
ಪುಕ್ಕಟೆ ಭಾಗ್ಯಗಳ ಘೋಷಣೆ ಮಾಡಿದಾಗಿನಿಂದ ದಿನಕ್ಕೊಂದು ವಸ್ತುವಿನ ಬೆಲೆಯ ಮೇಲೆ ಕಣ್ಣಿಟ್ಟಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸುವ ಅಧಿಕಾರ ಯಾರಿಗೆ ಇದೆ ಎಂದು ಚಿಂತಿಸುವ ಮಟ್ಟಕ್ಕೆ ಮತ ನೀಡಿದ ಮಹಾ ಜನತೆಯು ವಿಚಾರ ಮಾಡುವಂತೆಯಾಗಿದೆ.
ಭಾಗ್ಯಗಳ ಭರವಸೆಯ ನಿಟ್ಟಿನಲ್ಲಿ ಅಬಕಾರಿ ಮತ್ತು ಮುದ್ರಣ ಶುಲ್ಕ ಹೆಚ್ಚಿಸಿದ ಸರ್ಕಾರ ಈಗ ಪೆಟ್ರೋಲ್ ಬೆಲೆ ಏರಿಕೆಯ ಬಿಸಿ ನೀಡಿ ಸಾಧಿಸಲು ಹೊರಟಿರುವದು ಯಾವ ಸ್ವಾರ್ಥಕ್ಕಾಗಿ ಎನ್ನುವದು ರಾಜ್ಯದ ಜನರ ಪ್ರಶ್ನೆ.
ನಾನ ದಿವಸಕ್ಕ ನಾಲ್ಕ ನೂರು ರುಪಾಯಿ ದುಡಿತೇನಿ ಇದರಾಗ ಮನಿ ನಡಿಸಬೇಕ ನಾ, ಏನ ಮಾಡೂದರಿ ಸರ್ಕಾರ ದಿನಾ ಒಂದ ಹೊಸಾದ ಕಾಯ್ದೆ ತಗದ ಎಲ್ಲಾದ್ರ ಬೆಲೆ ಹೆಚ್ಚ ಮಾಡಾಕತ್ತಾರ.....
ಹೆಸರು ಹೇಳಲು ಇಚ್ಚಿಸದ ದಿನಗೂಲಿ ನೌಕರ.
ವರದಿ : ರವಿಕಿರಣ್ ಯಾತಗೇರಿ










