ಬಸ್ ನಿಲ್ಲಿಸುವಂತೆ ಒತ್ತಾಯಿಸಿ ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು
- Shivaraj Bandigi
- 15 Jan 2024 , 2:22 AM
- Belagavi
- 314
ಅಥಣಿ : ಬಸ್ ನಿಲ್ಲಿಸುವಂತೆ ಒತ್ತಾಯಿಸಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದಲ್ಲಿ ರಸ್ತೆಯಲ್ಲಿ ಬಸ್ ತಡೆ ಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.

ಅಥಣಿ ತಾಲೂಕಿನ ಯಲ್ಲಮವಾಡಿ ಗ್ರಾಮದ ಮೂಲಕ ಸಂಚರಿಸುವ ಬಸ್ ನಲ್ಲಿ ಇತ್ತೀಚಿನ ಶಕ್ತಿ ಯೋಜನೆಯಿಂದ ಜನ ಜಂಗುಳಿಯಾಗುತ್ತಿದ್ದು, ಬಸ ಚಾಲಕರು ಈ ಮಾರ್ಗದ ಕೆಲವು ಕಡೆ ಬಸ್ ನಿಲ್ಲಿಸದೆ ಇರುವುದರಿಂದ ಜಾಧವ್ ತೋಟದ ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ತೊಂದರೆಯಾಗುತ್ತಿದೆ.

ಸುಮಾರು 70 ಕ್ಕೂ ಅಧಿಕ ವಿದ್ಯಾರ್ಥಿಗಳು ದಿನನಿತ್ಯ ಕೊಕಟನೂರ ಶಾಲೆಗೆ ಹೋಗುತ್ತಾರೆ, ವಿದ್ಯಾರ್ಥಿಗಳನ್ನು ನೋಡಿ ಚಾಲಕರು ಬಸ್ ನಿಲ್ಲಿಸದೇ ಹಾಗೆ ಹೋಗುವುದರಿಂದ ಸರಿಯಾದ ಸಮಯಕ್ಕೆ ಶಾಲಾ, ಕಾಲೇಜು ಮುಟ್ಟಲಾಗುತ್ತಿಲ್ಲ ಎಂದು ಆರೋಪಿಸಿ ಬಸ್ ನ್ನು ತಡೆದು ಪ್ರತಿಭಟಣೆ ನಡೆಸಿ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ವರದಿಗಾರ : ರಾಹುಲ್










