ಪೃಥ್ವಿ ಸಿಂಗ್ ಫೌಂಡೇಶನ್ ಮತ್ತು ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ತಂಡದ ಕಾರ್ಯ ಶ್ಲಾಘನೀಯ.

ಬೆಳಗಾವಿ: ಬೆಳಗಾವಿಯಲ್ಲಿ ತನ್ನದೆ ಗುರಿ ಇಟ್ಟುಕೊಂಡು ಸಮಾಜ ಸೇವೆ ಮಾಡುತ್ತಿರುವ ಪೃಥ್ವಿ ಸಿಂಗ್ ಫೌಂಡೇಶನ್ ಮತ್ತು ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ತಂಡದ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

promotions

ಹೌದು ಬೆಳಗಾವಿ ನಗರದಲ್ಲಿ ಹಲವು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ತಂಡಗಳಿಂದ ಇವತ್ತು ರಾಜು ವಿಲಾಸ್ ಪವಾರ್ ಎನ್ನುವ ವ್ಯಕ್ತಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ತಕ್ಷಣ ಈ ವ್ಯಕ್ತಿಯನ್ನ ಡಿಸಿಪಿ ರವೀಂದ್ರ ಗಡಾದಿ ಹಾಗೂ ಮಾರ್ಕೇಟ್ ಮತ್ತು ಮಾಳಮಾರುತಿ‌ ಪೋಲಿಸ್ ಠಾಣೆ ಸಿಬ್ಬಂದಿಗಳ‌ ಸಹಾಯದಿಂದ ಅಂಬ್ಯುಲೇನ್ಸ್ ಮೂಲಕ ವ್ಯಕ್ತಿಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

promotions

ರಾಜು ವಿಲಾಸ್ ಪವಾರ್ ಎನ್ನುವ ವ್ಯಕ್ತಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಈ ವ್ಯಕ್ತಿ ಚವಾಟ್ ಗಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ.ಆದರೆ ಈ ವ್ಯಕ್ತಿ ನಗರದ ಆರ್ ಎನ್ ಶೆಟ್ಟಿ ಕಾಲೇಜು ಬಳಿ ಗಲೀಜು ಇರುವ ಸ್ಥಳದಲ್ಲಿ ಮಲಗಿದ್ದನ್ನು ಗಮನಿಸಿ ತಕ್ಷಣ ಪೃಥ್ವಿ ಸಿಂಗ್ ಫೌಂಡೇಶನ್ ಮತ್ತು ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಕಿಡ್ನಿ ವ್ಯಪಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನ ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಪೃಥ್ವಿ ಸಿಂಗ್ ಪೌಂಡೇಶನ ಸಂಸ್ಥಾಪಕ ಪೃಥ್ವಿ ಸಿಂಗ್ ಹಾಗೂ ಸಂತೋಷ್ ದಾರೆಕರ್,ಅವಧೂತ್ ತುಡವೇಕರ್,ಸಾಹಿಲ್ ಕೋಲ್ಕರ್,ಆಕಾಶ್ ದೇಸಾಯಿ,ಸೌರಭ್ ತಾರಿಹಾಳ್ಕರ್,ಪ್ರವೀಣ್ ಚಲವಾದಿ,ಹರೀಶ್ ಜಾಧವ್ ಅವರು ಉಪಸ್ಥಿತರಿದ್ದರು..

Read More Articles