ಅನಾಥವಾದ ಬೆಳಗಾವಿಯ ಸುಂದರ್ ನಗರ ವನ ಉದ್ಯಾನ
- Krishna Shinde
- 15 Jan 2024 , 6:41 AM
- Belagavi
- 354
ಬೆಳಗಾವಿ: ಬೆಳಗಾವಿ ಮಹಾನಗರದ ಹೊರಭಾಗ ಅಂದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪಕ್ಕದಲ್ಲೇ ಇರುವ ಕರ್ನಾಟಕ ಸರಕಾರದ ನಗರ ವನ ಉದ್ಯಾನವನ ಸರಿಯಾದ ವ್ಯವಸ್ಥೆ ಇಲ್ಲದೆ ಬಿಕೋ ಅನ್ನುತ್ತಿದೆ.

ಈ ಉದ್ಯಾನವನ ಮಕ್ಕಳಿಗೆ , ಹಿರಿಯರಿಗೆ ಹೇಳಿ ಮಾಡಿಸಿದ ಉದ್ಯಾನವನ ಆಗಿದೆ ಇಲ್ಲಿ ಇಡೀ ಕುಟುಂಬ ಜೊತೆ ಬಂದು ಸುಂದರ ಉದ್ಯಾನವನ ಮತ್ತು ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಉತ್ತಮ ಸ್ಥಳವಾಗಿದೆ.

ಅರಣ್ಯ ಇಲಾಖೆಗೆ ಸೇರಿರುವ ಈ ಉದ್ಯಾನವನ ಸರಿಯಾದ ವ್ಯವಸ್ಥೆ ಇಲ್ಲದೆ ಹೇಳಲು ಕೇಳಲು ಯಾರು ಇಲ್ಲದಂತಾಗಿದೆ,ಈ ಉದ್ಯಾನವನದಲ್ಲಿ ಕೂಡಲು ಬೆಂಚಗಳು ಮತ್ತು ಲಾನ್ ವ್ಯವಸ್ಥೆ ಎಲ್ಲ ಇದ್ದರು ಕೂಡಾ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.
ಈ ಉದ್ಯಾನವನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪಕ್ಕದಲ್ಲೇ ಇದ್ದು ಲೊಕೇಶನ್ ಈ ಕೆಳಗೆ ಕೊಟ್ಟಿದ್ದೇವೆ.










