ಜಿಲ್ಲೆಯಲ್ಲಿ ಬರಗಾಲದ ಭೀಕರತೆ ಇಲ್ಲ : ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಬರಗಾಲದ ಭೀಕರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

promotions

ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಅವಕಲೋಕನ ಕುರಿತು ಎಲ್ಲಾ ಜಿಲ್ಲೆಯ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಬರೆದಿದ್ದರು. ಅದಕ್ಕಿಂತ ಪೂರ್ವದಲ್ಲಿಯೇ ನಾವು ಬರ ಅಧ್ಯಯನ ಕುರಿತು ಪ್ರವಾಸ ಮಾಡಿ ಸಭೆ ನಡೆಸಲಾಗಿದೆ.

promotions

ಇಲ್ಲಿವರೆಗೂ ಅಂತಹ ಗಂಭೀರ ಪರಿಸ್ಥಿತಿ ಜಿಲ್ಲೆಯಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ನೀರಾವರಿ ಮತ್ತು ಮೇವು ಎರಡು ತೊಂದರೆ ಆಗಬಹುದು. ಅದನ್ನು ನಿಭಾಯಿಸುವ ಶಕ್ತಿ ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಇದೆ ಎಂದರು.
ಶಾಸಕರ ನೇತೃತ್ವದಲ್ಲಿ ಸಭೆ ಮಾಡಲು ಸಿಎಂ ಆದೇಶ ಮಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕುಡಿಯುವ ನೀರು, ಮೇವು ಖರೀದಿಗೆ ಹಣ ಬಿಡುಗಡೆ ಮಾಡಿದ್ದಾರೆ.

ನೀರಿನ ಸಮಸ್ಯೆ ಇದ್ದರೆ ಟ್ಯಾಂಕರ್ ಮೂಲಕ ನೀರು ಕೊಡಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ 3ಲಕ್ಷ 65ಸಾವಿರ ಬೆಳೆ ಹಾನಿ, 410ಕೋಟಿ ಹಾನಿಯಾಗಿದೆ. ಬೇಗ ಪರಿಹಾರ ಕೊಡಬೇಕು ಎನ್ನುವ ಬೇಡಿಕೆ ನಮ್ಮದು ಇದೆ. ರಾಜ್ಯ ಸರಕಾರ ಕೇಂದ್ರಕ್ಕೆ ಪದೇ ಪದೇ ಹಣಕ್ಕೆ ನೀಡುವಂತೆ ಮನವಿ ಮಾಡ್ತಿದ್ದೇವೆ. ಕೇಂದ್ರದಿoದ ತಾರತಮ್ಯ ಆಗಿಲ್ಲ, ಮಾಡಬಾರದು ಅನ್ನೋದು ನಮ್ಮ ಬೇಡಿಕೆ ಎಂದರು.

ಗ್ಯಾರoಟಿ ಯೋಜನೆಯಿಂದ ಯಾವ ಕಾಮಗಾರಿ ನಿಂತಿಲ್ಲ. ನಮ್ಮ ಸರಕಾರದ ಯೋಜನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಎಂಥ ಪರಿಸ್ಥಿತಿಯಲ್ಲಿಯೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಜನರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಶಾಸಕರಾದ ಮಹೇಶ ತಮಣ್ಣವರ, ವಿಶ್ವಾಸ ವೈದ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles