ಬಗೆ ಹರಿಯದ ಬಸ್ಸಿನ ಸಮಸ್ಯೆ ಕಂಗಾಲಾದ ಯಂಕನವಾಡಿ ಗ್ರಾಮದ ಗ್ರಾಮಸ್ಥರು

ಬೆಳಗಾವಿ :ಯಂಕನವಾಡಿ ಗ್ರಾಮದಲ್ಲಿ ಬಸ್ಸಿನ ಸಮಸ್ಯೆ ಹೆಚ್ಚಾಗಿದ್ದು  ಮುಂಜಾನೆ 8 ರಿಂದ  11ರವರೆಗೆ ಬೆಳಗಾವಿ ಹೋಗಲು ಊರಿನ ಗ್ರಾಮಸ್ಥರು ದಿನಾಲು ದಾದ ಬಾನಹಟ್ಟಿಗೆ ಬಂದು ನಿಲ್ಲಬೇಕಾಗುವ ಪರಿಸ್ಥಿತಿ ಬಂದಿದೆ ಮತ್ತು ಸಂಕೇಶ್ವರ್ ಹುಕ್ಕೇರಿ ಚಿಕ್ಕೋಡಿದಿಂದ ಬರುವ ಬಸ್ಸುಗಳು  ಪೂರ್ತಿ  ತುಂಬಿ ಬರುವ ಕಾರಣ  ಯಂಕನವಾಡಿ ಪ್ರಯಾಣಿಕರು  ಎದ್ದುನಿಂತುಕೊಂಡೆ ಪ್ರಯಾಣ ಮಾಡಬೇಕಾಗುತ್ತದೆ.

promotions

ಹೆಣ್ಣು ಮಕ್ಕಳಿಗೆ ,ಹಿರಿಯ ಜೀವಿಗಳಿಗೆ ಕಾಲೇಜ್ ವಿದ್ಯಾರ್ಥಿನಿಗಳಿಗೆ ತುಂಬಾ ಇದು ತುಂಬಾ ಕಷ್ಟಕರವಾಗಿದೆ ಮತ್ತು ಬಸ್ಸ ಪೂರ್ತಿ ಭರ್ತಿಯಾಗಿ ಬರುವ ಕಾರಣ ವಿದ್ಯಾರ್ಥಿನಿಗಳಿಗೆ ತುಂಬಿ ತುಳುಕುವ ಬಸ್ಸಿನಲ್ಲಿ ಬಹಳ ಕಷ್ಟವಾಗುತ್ತದೆ.

promotions

2015 ಮೊದಲ ಯಮಕ್ಕನಮರಡಿ ಊರಲ್ಲಿ ಸುಮಾರು 70 ಬಸ್ ಬರ್ತಿದ್ದವು ಇದಕ್ಕೆ ಕಾರಣ ಸಮಾಜಿಕ  ಹೋರಾಟಗಾರ ಶ್ರೀ ಎಚ್ಆರ್ ಗರಗಟ್ಟಿ ಬಳೆಗಾರ ಅವರ  ಸತತ ಪ್ರಯತ್ನ ಎಂದು ಗ್ರಾಮಸ್ಥರು ಹೇಳಿದ್ದಾರೆ ಆದರೆ ಅವರು ತೀರಿಕೊಂಡ ಹೋದಮೇಲೆ ಎಲ್ಲಾ ಬಸ್ಸುಗಳು ಬಂದು ಮಾಡಿ carona ನೆಪ ಹೇಳಿ ಬರುವ ನಾಲ್ಕು ಬಸ್ಸುಗಳು ಸಹ ಬಂದ್ ಮಾಡಿಬಿಟ್ಟರು ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಬಳೆಗಾರ ಇವರ ಪ್ರಯತ್ನದಿಂದ ಸಂಕೇಶ್ವರ್  ಬೆಂಗಳೂರು ಮೊದಲ ಬಸ್ಸನ್ನು ಪ್ರಾರಂಭ ಮಾಡಲಾಯಿತು ಇದು ಸಂಕೇಶ್ವರ್ ಡಿಪೋಗೆ ಪ್ರಪ್ರಥಮ ಬಸ್ಸು ಎಂದು ಹೇಳಿದ್ದಾರೆ ಬೆಂಗಳೂರಿಗೆ ಇದನ್ನು ಮಲ್ಲಾರ್ ಗೌಡ ಪಾಟೀಲ್ ಎಂಎಲ್ಎ ಓಪನಿಂಗ್ ಮಾಡಿದ್ದರು.

ಇಂತಹ ಪ್ರಯತ್ನದಿಂದ ಎಷ್ಟೋ ಬಸ್ಸುಗಳು ಬರುತ್ತಿದ್ದು ಈಗ ಎಲ್ಲಾ ಬಂದಾಗಿ ದೊಡ್ಡ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ .

ದಾದಾಬಾನ ಹಟ್ಟಿಯಲ್ಲಿ ನಮ್ಮೂರಿನ ಜನ ಬಂದು ನಿಲ್ಲಬೇಕು ಅಲ್ಲಿ ಯಾವುದೇ ತರಹದ ಸ್ಟ್ಯಾಂಡ್ ಇಲ್ಲ ಮಳೆಯಲ್ಲಿ ಬಿಸಿಲಲ್ಲಿ ಹಾಗೇನಿಲ್ಲಬೇಕು ಎಂದು ಹೇಳಿದ್ದಾರೆ.

ದಡ್ಡಿ ಬೆಳಗಾವಿ ಮುಂಜಾನೆ 7.45 ಹಾಗೂ 8.45 ಒಂದು ಬಸ್ಸು ಮಾಡಬೇಕು ಇದರಿಂದ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ ದಡ್ಡಿ ಮನಗುತ್ತಿ ನಾಗನೂರು ನರಸಿಂಪುರ್ ಬೆನಕುಳಿ ಎಲ್ಲ ಗ್ರಾಮಸ್ಥರು ಈ ಬಸ್ಸಿನ ಉಪಯೋಗವನ್ನು ಮಾಡಬಹುದು ಇದೇ ರೀತಿ ರಾತ್ರಿ 7 ಗಂಟೆಗೆ ಬೆಳಗಾವಿಯಿಂದ ದಡ್ಡಿ  ಕಡೆಗೆ ಬರಬೇಕು
ಈ ಬಸ್ಸಿನ ಸೌಕರ್ಯದಿಂದ ಗ್ರಾಮಸ್ಥರಿಗೆ ಬಹಳ ತುಂಬಾ ಅನುಕೂಲ ಆಗುವುದು ದಯವಿಟ್ಟು ಇದರ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗಿ ಲೋಕವಿವ ವಾಹಿನಿ ಮೂಲಕ NWKRTC ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.

Read More Articles