ಚೈನಾದಿಂದ ಬರುವ ವೃರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ : ಸಚಿವ ದಿನೇಶ ಗುಂಡುರಾವ್.

localview news

ಬೆಳಗಾವಿ :

ಚೈನಾದಿಂದ ಬರುವ ವೃರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೂ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತ‌ನಾಡಿದರು. ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇ‌ನೆ. ಅಧಿಕಾರಿಗಳ‌ಜೊತೆ ಸಭೆ ಮಾಡಿದ್ದೇನೆ.ಐಸಿಯು, ವೆಂಟಿಲೆಟರ, ಮಾಸ್ಕ, ಪಿಪಿಇಕಿಟ್ ಎಲ್ಲವೂ ಸಿದ್ದತೆ ಮಾಡಿಕ್ಕೊಳ್ಳಲು ಸೂಚಿಸಿದ್ದೇನೆ ಎಂದರು.

ಕೇಂದ್ರ ಸರಕಾರದಿಂದ ಸದ್ಯ ಮಾರ್ಗ ಸೂಚಿ ಬಂದಿಲ್ಲ. ಡಬ್ಲು ಎಚ್ಓ ನಿಂದನೂ ಯಾವುದೆ ಸೂಚನೆ ಬಂದಿಲ್ಲ. ನಾವು ಎಚ್ಚರಿಕೆಯಿಂದ‌ ಇದ್ದೇವೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದರು.

ದೇಶದ ಸಂಪತ್ತು ಹಂಚುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಅವರು ಕೊಟ್ಡಿರುವ ಹೇಳಿಕೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲ‌ವರ್ಗದವರಿಗೆ ಸಹಾಯ ಮಾಡೇ ಮಾಡುತ್ತದೆ. ಯಾರು ಅನುಮಾನ ಪಡುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಸಮಾಜಿಕ ನ್ಯಾಯ ಒದಗಿಸೋದೆ ಕಾಂಗ್ರೆಸ್ ಪಕ್ಷದ ಕೆಲಸ ಮಾಡುತ್ತದೆ ಎಂದರು.

Latest Articles