ಮಂತ್ರಿಗಿರಿಗೆ ಲಾಭಿ ಇಲ್ಲಾ ! ಕೊಟ್ರೆ ಸ್ವೀಕರಿಸುವೆ ಶಾಸಕ ವಿನಯ ಕುಲಕರ್ಣಿ

ಬೆಳಗಾವಿ : ಸಚಿವ ಸಂಪುಟ ವಿಸ್ತರಣೆ ವಿಚಾರ ನನಗೆ ಮಾಹಿತಿ ಇಲ್ಲ, ಪಕ್ಷದಲ್ಲೂ ಆ ಕುರಿತು ಚರ್ಚೆ ನಡೆದಿಲ್ಲ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. 

promotions

ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪಕ್ಷದಲ್ಲಿ ಸೋಲು ಗೆಲವು ಕಾಮನ್ ಅದಕ್ಕೆ ಹಲವಾರು ಕಾರಣಗಳು ಇರುತ್ತವೆ. ರಾಜೀನಾಮೆ ನೀಡಿರುವ ಸ್ಥಾನಕ್ಕೆ ಸಚಿವ ಸಂಪುಟ ಸೇರ್ಪಡೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ಆ ಬಗ್ಗೆ ಚರ್ಚೆ ಆಗಿಲ್ಲ, ಮಂತ್ರಿ ಆಗಬೇಕು ಅಂತಾ ಆಸೆ ಇದ್ದೆ ಇರುತ್ತದೆ. ಈ ಮೊದಲು 

promotions

ನಾನು ಮಂತ್ರಿ ಇದ್ದೆ, ಸೀನಿಯರ್ ಅದೇನಿ ಮಂತ್ರಿ ಮಾಡು ಅಂತಾ ಯಾರನ್ನು ಕೇಳಲ್ಲ ಪಕ್ಷವೇ ನನ್ನನ್ನು ಗುರುತಿಸಿ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುವೆ ಎಂದರು. 

ರೇಣುಕಾಸ್ವಾಮಿ ಕೊಲೆ ದರ್ಶನ ಅರೆಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಡನಾಡಿದ ಅವರು, ದರ್ಶನ ಮೇಲೆ ಆರೋಪ ಇದೆ ಅದಕ್ಕೆ ಅವರನ್ನು ಅರೆಸ್ಟ್ ಮಾಡಿ, ತನಿಖೆ ಮಾಡ್ತಿದ್ದಾರೆ

ಯಾರೇ ತಪ್ಪು ಮಾಡಿದ್ರೂ ತಪ್ಪೇ, ಅವರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡಿದೆ. ದರ್ಶನ ವಿರುದ್ಧದ ಆರೋಪಕ್ಕೆ ಕೋರ್ಟ್‌ ತೀರ್ಮಾನ ಮಾಡುತ್ತೆ ಎಂದರು. 

ಪಂಚಮಸಾಲಿ ಹೋರಾಟ ವಿಚಾರವಾಗಿ ಸ್ವಾಮೀಜಿಯವರಿಗೆ ನಾವೆಲ್ಲ ಬೆಂಬಲ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ಸುಳ್ಳು ಭರವಸೆ ಕೊಟ್ಟು ಹೋರಾಟದ ದಾರಿ ತಪ್ಪಿಸಿದೆ ಎಂದರಲ್ಲದೆ ಎಲ್ಲ ಸಮಾಜದ, ಸಮೂದಾಯಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು ಹಾಗೇ ಎಲ್ಲ ಸಮಾಜದಂತೆ ನಮ್ಮನ್ನು ಕೂಡಾ ಪರಿಗಣಿಸಿ, ಓಬಿಸಿಗೆ ಸೇರಿಸುವಂತೆ ಹೋರಾಟದ ಮೂಲಕ ಒತ್ತಾಯ ಮಾಡುತ್ತೇವೆ ಎಂದರು. 

ದರ್ಶನ ಕೇಸ್ ನಲ್ಲಿ ರಾಜಕಾರಿಣಿಗಳ ಒತ್ತಡ ವಿಚಾರ ಪ್ರಶ್ನಿಸಿದಾಗ, ಆ ರೀತಿ ಯಾರಿಂದಲೂ ಒತ್ತಡ ಹಾಕೋಕೆ ಆಗಲ್ಲ, ಕೇಸ್ ಕುರಿತು ಮಾಧ್ಯಮದಲ್ಲಿ ಬರ್ತಿದೆ,ರಾಜ್ಯದ ಜನಕ್ಕೆ ಗೊತ್ತಾಗಿದೆ, ನನಗೆ ಗೊತ್ತಿರುವ ಹಾಗೆ ದರ್ಶನ ಸ್ವಲ್ಪ ಒರಟಾಗಿ ವರ್ತನೆ ಮಾಡ್ತಿದ್ದ ಎಂದರು.

Read More Articles