ಅಥಣಿ ಬಸ್ ನಿಲ್ದಾಣದಲ್ಲಿ ಕೈ ಚಳಕ ತೋರಿಸಿದ ಕಿಲಾಡಿ ಕಳ್ಳ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆ ಓರ್ವಳು ಬಸ್ ಹತ್ತುವ ವೇಳೆ 45 ಗ್ರಾಂ.  ಬಂಗಾರದ ಮಾಂಗಲ್ಯ ಸರ ದೋಚಿದ ಖದೀಮರು.

promotions

ಅಥಣಿ ತಾಲೂಕಿನ ಅನಂತಪೂರ ಗ್ರಾಮದ ಗೌರಮ್ಮಾ ಶಂಕರಗೌಡ  ಪಾಟೀಲ್ ಎಂಬುವವರು ವಿಜಯಪುರಕ್ಕೆ ಹೋಗಿ ವಾಪಾಸ್ ಸ್ವಗ್ರಾಮಕ್ಕೆ ಅಂದರೆ ಅನಂತಪೂರಕ್ಕೆ ಹೋಗುವ ವೇಳೆ ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅಥಣಿ - ಖಿಳೆಗಾಂವ ಬಸ್ ಹತ್ತುವ ಸಮಯದಲ್ಲಿ ಮಾಂಗಲ್ಯ ಸರವನ್ನು ದೋಚಿದ ಕಿಡಿಗೇಡಿಗಳು. 

promotions

ಬಸ್ ಹತ್ತುವ ಸಮಯದಲ್ಲಿ ಜನಜಂಗುಳಿ ನೋಡಿ ಸಾಮಾನ್ಯವಾಗಿ ದೃಶ್ ಸೆರೆ ಹಿಡಿದ ಕಾಲೇಜು ವಿದ್ಯಾರ್ಥಿ ಅದೆ ಬಸ್ಸಿನ ಜನಜಂಗುಳಿ ಮದ್ಯ ಕಳ್ಳರು ವೇನಿಟಿ ಬ್ಯಾಗನಲ್ಲಿದ್ದ ಮಾಂಗಲ್ಯ ಸರ ದೋಚಿದ್ದಾರೆ ನಂತರ ಎಚ್ಚೆತ್ತುಕೊಂಡ  ಮಹಿಳೆ ವೇನಿಟಿ ಬ್ಯಾಗನಲ್ಲಿ ಸರವಿಲ್ಲದರ ಬಗ್ಗೆ ಅರಿವಾಗಿ ಮನೆಯವರಿಗೆ ವಿಷಯ ತಿಳಿಸಿ ನೇರವಾಗಿ ಅಥಣಿ ಪೊಲೀಸ್ ಠಾಣೆಗೆ ತೆರಳಿ ತಾನು ಬಸ್ ಹತ್ತುವಾಗ ಸರ ಕಳ್ಳತನವಾದ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ವರದಿಗಾರ : ರಾಹುಲ್ 

Read More Articles