ಯತ್ನಾಳ ವಿರುದ್ಧ ಮಾನನಷ್ಟ ದಾವೆ ಹೂಡಲು ಚಿಂತನೆ
- shivaraj bandigi
- 15 Jan 2024 , 3:05 AM
- Belagavi
- 554
ಬೆಳಗಾವಿ :

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಚಾರಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಎಚ್ಚರಿಕೆ ನೀಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಧರ್ಮ ಗುರುಗಳ ಬಗ್ಗೆ ಯತ್ನಾಳ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಧರ್ಮಗುರುಗಳು ಪ್ರತ್ಯುತ್ತರ ನೀಡಿದ್ದಾರೆ. ಒಂದು ವೇಳೆ ಯತ್ನಾಳ ಹೇಳಿಕೆ ಸಾಭಿತು ಮಾಡಿದರೆ ನಾವು ದೇಶ ಬಿಟ್ಟು ಹೋಗುತ್ತೇವೆ. ಇಲ್ಲದಿದ್ದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ನಾನೂ ಆ ಸಭೆಗೆ ಹೋಗಿದ್ದೆ. ಇಂಥ ನೀಚ ಹೇಳಿಕೆಯನ್ನು ಕೊಡುವುದನ್ನು ಯತ್ನಾಳ ಬಿಡಬೇಕೆಂದು ಹೇಳಿದರು.
ಯತ್ನಾಳ ಮೇಲೆ ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಮಾನನಷ್ಟ ಮೊಕದ್ದಮೆ ಹಾಕಲು ಚರ್ಚೆ ನಡೆಯುತ್ತಿದೆ. ಚರ್ಚೆಯ ಬಳಿಕ ನಿರ್ಧಾರ ಹೇಳತ್ತೇವೆ. ಯತ್ನಾಳ ಬಾಯಿಗೆ ಬಂದ ಹಾಗೇ ಏನೆಲ್ಲಾ ಮಾತನಾಡುತ್ತಿದ್ದಾರೆ. ಧರ್ಮಗುರುಗಳು ಯತ್ನಾಳ ಮೇಲೆ ಚಾಲೆಂಜ್ ಮಾಡಿದ್ದಾರೆ. ಸಭೆಯಲ್ಲಿ ನಾನು ಕೂಡ ಇದ್ದೆ ಅಂತಹ ವ್ಯಕ್ತಿ ಯಾರು ಕೂತಿರಲಿಲ್ಲ. ಪ್ರಚಾರಕ್ಕೆ, ರಾಜಕೀಯಕ್ಕೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಹೇಳುವ ಮುಂಚೆ ಆಲೋಚನೆ ಮಾಡಬೇಕು ಬರೀ ಗಾಳಿಯಲ್ಲಿ ಗುಂಡು ಹೊಡೆಯ ಬಾರದು ಎಂದು ಹರಿಹಾಯ್ದರು.
ಧರ್ಮಗುರು ಫೇಸ್ ಬುಕ್ ಖಾತೆಯಲ್ಲಿನ ಪೋಟೋಗಳನ್ನೇ ಯತ್ನಾಳ ವೈರಲ್ ಮಾಡಿದ್ದಾರೆ. ಇಂತಹ ಹೇಳಿಕೆಗಳು ಸಮಾಜವನ್ನು ಒಡೆಯುತ್ತವೆ. ಧರ್ಮಗುರುವಿನ ಮೇಲೆ ಇರೋದು ಬರೀ ಆರೋಪ ಅದನ್ನು ಪ್ರೂ ಮಾಡಿ ಬರಿ ಹಿಟ್ ಆ್ಯಂಡ್ ರನ್ ಬೇಡ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.










