ಇದು ಟ್ರೇಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ‌ ಯಾರಿಗೆ ಹೇಳಿದ್ರು ಸಾಹುಕಾರ

ನಿಪ್ಪಾಣಿ :ಟೈಂ ಪಾಸೀಗಾಗಿ ಪುಸ್ತಕಗಳು ಬರೆದವರು, ಇಂದು    ಗ್ರಂಥಗಳಾಗಿವೆ.‌ಆ ಗ್ರಂಥಗಳು ಇಂದು ನಮ್ಮನ್ನು ಆಳುವಂತಾಗಿದೆ.ಕೈ, ಕಾಲಿಗೆ ಬೇಡಿ ಹಾಕಿಲ್ಲ ಮೀದುಳಿಗೆ ಬೇಡಿ ಹಾಕಿದ್ದಾರೆ.  

promotions

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಆರ್ ಎಸ್ ಎಸ್ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಬೆಳಗಾವಿ ಜಿಲ್ಲೆ ನಿಪ್ಪಾಣಿ ಪಟ್ಟಣದಲ್ಲಿ ನಡೆಯುತ್ತಿರುವ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿಕೆ ಸತೀಶ ಜಾರಕಿ ಹೋಳಿ ಹೇಳಿದ್ದಾರೆ.

promotions

ನಮ್ಮ ಹಕ್ಕುಗಳನ್ನು ಪಡೆಯಬೇಕಾಗಿದೆ, ಈ ಹೋರಾಟ ಪ್ರಾರಂಭ ಮಾಡಲಾಗಿದೆ. ಇನ್ನು ಹತ್ತು ಹದಿನೈದು ವರ್ಷದಲ್ಲಿ ಯಾರ್ಯಾರೋ ಬರುತ್ತಾರೆ,ಗಾಂಧಿಜೀ ಸ್ಥಳದಲ್ಲಿ ಗೋಡ್ಸೆ ಬಂದಿದ್ದಾರೆ. 

ನಿಮ್ಮ ಜೀವನದಲ್ಲಿ ಬದಲಾವಣೆ ಮಾಡಲು ಈ ಕಾರ್ಯಕ್ರಮ ಆಯೋಜನೆ ಪ್ರಗತಿಗೋಸ್ಕರ ಈ ಕಾರ್ಯಕ್ರಮ ಆಯೋಜನೆ ಎಂದರು.

ನಿಪ್ಪಾಣಿಯಿಂದ ಚಾಮರಾಜನಗರ ಅವರಿಗೆ ಈ ಕಾರ್ಯಕ್ರಮ ನಡೆಯುತ್ತದೆ, ನಿಪ್ಪಾಣಿಗೆ ಮಾತ್ರ ಈ ಕಾರ್ಯಕ್ರಮ ಸೀಮಿತ ಆಗುವುದಿಲ್ಲ, ಬುದ್ದ ಬಸವ ಅಂಬೇಡ್ಕರ್ ಅವರ ನೆನಪಿಗೆಗೋಸ್ಕರ ಈ ಕಾರ್ಯಕ್ರಮ ಮಾನವ ಬಂಧುತ್ವ ವೇದಿಕೆಯಿಂದ ಸಮಾಜ ಬದಲಾವಣೆ ಕಾರ್ಯಕ್ರಮ ,ನಾನು ನಿಪ್ಪಾಣಿಯಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಚರ್ಚೆ ಆಗಬಾರದು ಎಂದರು.

ನಮ್ಮದು ಸಮಾಜಪರ ಚಿಂತನೆ, ಅಷ್ಟೇ ಮತ್ತೇನು, ಅಲ್ಲ.‌  ನಿಪ್ಪಾಣಿ ಇತಿಹಾಸದಲ್ಲಿ ಇದು ದೊಡ್ಡ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಇದು ಟ್ರೇಲರ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ ಸತೀಶ್ ಜಾರಕಿಹೊಳಿ ಅವರು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ರವಾನೆ ಮಾಡಿದರು.

Read More Articles