ಬಿಜೆಪಿಗೆ ವಿನಾಶ ಕಾಲ ಹತ್ತಿರ ಬಂದಿದೆ : ಸವದಿ ವಾಗ್ದಾಳಿ
- Krishna Shinde
- 14 Jan 2024 , 11:23 PM
- Belagavi
- 150
ಅಥಣಿ :ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಟಿಕೆಟ್ ಪಡೆದುಕೊಂಡ ಲಕ್ಷ್ಮಣ ಸವದಿ ಅವರಿಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ನಂತರ ಮಾತನಾಡಿದ ಲಕ್ಷ್ಮಣ ಸವದಿ
ವಿನಾಶ ಕಾಲ ಬಂದಾಗ ವಿಪರೀತ ಬುದ್ದಿ ವೆಂಬಂತೆ ಬಿಜೆಪಿಗೆ ವಿನಾಶ ಕಾಲ ಹತ್ತಿರ ಬಂದಿದೆ, ಜಗದೀಶ ಶೆಟ್ಟರ ಅಂತಹ ಒಳ್ಳೆಒಳ್ಳೆಯ ನಾಯಕರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಸವದಿ ಹೇಳಿದ್ದಾರೆ.

ಬಿಜೆಪಿಯವರಿಗೆ ಸಾಕ್ಷಾತ್ ದೇವರೇ ಈ ಬುದ್ದಿ ಕೊಟ್ಟಿದ್ದಾನೆ ವಿನಾಶ ಕಾಲ ಹತ್ತಿರ ಸಂಭವಿಸಿದೆ ಎಂದು ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದ್ದಾರೆ.
ಸೂರ್ಯ ಚಂದ್ರ ಹೊಟ್ಟೋದು ಎಷ್ಟು ಸತ್ಯನೋ ಅಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಶತಸಿದ್ದ ಎಂದು ಸವದಿ ಭರವಸೆ ನೀಡಿದ್ದಾರೆ.










