ಇಂದು ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ
- shivaraj bandigi
- 27 Feb 2024 , 11:23 AM
- Belagavi
- 252
ಭಾರತ ದೇಶದಲ್ಲಿ ನೀತಿ ಆಯೋಗ ದರ್ಪಣ ಪೋಟ್ ನಲ್ಲಿ 1,87,395 ಎನ್ ಜಿಒಗಳು ನೋಂದಣಿಯಾಗಿವೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ 10, 269 ಎನ್ ಜಿಒಗಳು ನೋಂದಣಿಯಾಗಿವೆ. ಇವುಗಳ ಉದ್ದೇಶ ಸಮಾಜದಲ್ಲಿ ದುರ್ಬಲ ವರ್ಗದವರ ಏಳಿಗೆಗೆ, ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಕ್ಷೇತ್ರದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತಮ್ಮನ್ನು ತಾವು ತೊಡಿಸಿಕೊಂಡು ಅಪರೂಪವಾದ ಕಾರ್ಯವನ್ನು ಮಾಡುತ್ತಿವೆ. ಫೆ.27 ರಂದು ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ.

ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ 2023ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು 53 ಸ್ವಯಂ ಸೇವಾ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸುತ್ತಿವೆ. 53 ಸ್ವಯಂ ಸೇವಾ ಸಂಸ್ಥೆಗಳು ಈಗಾಗಲೇ ಶೈಕ್ಷಣಿಕ, ಧಾರ್ಮಿಕ, ಬಡಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿವೆ. ಅಷ್ಟೆ ಅಲ್ಲದೆ, ಕರ್ನಾಟಕದ ಸುಮಾರು 10,30,000 ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಬಿಸಿಯೂಟ, ಕ್ಷೀರ ಭಾಗ್ಯ ಹಾಗೂ ಪೌಷ್ಟಿಕ ಆಹಾರವನ್ನು ಕಳೆದ 19 ವರ್ಷಗಳಿಂದ ನೀಡುತ್ತ ಬಂದಿದೆ. ಕರ್ನಾಟಕ ಸ್ಟೇಟ್ ಮಿಡ್ ಡೇ ಮಿಲ್ಸ್ ಫೇಡರೆಷನ್ ಅಧ್ಯಕ್ಷರಾದ ಶ್ರೀ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠ ಬೆಳಗಾವಿ ಇವರ ನೇತೃತ್ವದಲ್ಲಿ ಕರ್ನಾಟಕದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಸಾಯಿಶೂರ ರಾಗಿ ಮಿಕ್ಸ್ ರಾಗಿ ಮಾಲ್ಟ್ ನ್ನು ಉಚಿತವಾಗಿ ನೀಡುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಗೆ ಭೇಟಿ ನೀಡಿ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ್ ಸಾಯಿ ಗುರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುವ ಕಾರ್ಯ ಇಂದು ಸಂಜೆ 4ಕ್ಕೆ ಮುದ್ದೆನಳ್ಳಿಯಲ್ಲಿ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾದ ಮಹಾಂತೇಶ ಕಿವುಡಸಣ್ಣವರ, ನಾರಾಯಣ ಸೋಗಲಿ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಕೆ.ಭೀಮಾ, ಜಂಟಿಕಾರ್ಯದರ್ಶಿ ಶ್ರೀಧರ ಶೆಟ್ಟರ್, ಹಿರಿಯ ಜಂಟಿಕಾರ್ಯದರ್ಶಿ ಅಪ್ಪಾಜಿ ಗೌಡರ, ಖಜಾಂಚಿಗಳಾದ ಕಲ್ಲಪ್ಪ ಬೋರಣ್ಣವರ, ನಿರ್ದೇಶಕರಾದ ಬಸವರಾಕ ಕಾಜಗಾರ, ರವೀಂದ್ರ ಕುಮಾರ ಭಾಗಿಯಾಗಿ ಶ್ರೀ ಸಾಯಿ ಅನ್ನಪೂರ್ಣ ಟ್ರಸ್ಟ್ ನ ಮುಖ್ಯಸ್ಥರಿಗೆ ಗೌರವವನ್ನು ಸಮರ್ಪಿಸಲಿದ್ದಾರೆ. ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯವನ್ನು ನಾವು ಮೆಚ್ವಲೇ ಬೇಕು. ಎಲ್ಲರೂ ಸೇರಿ ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ.










