ಇಂದಿನ ರಾಶಿ ಭವಿಷ್ಯ ಏಪ್ರಿಲ್-27-2024 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ

ಮೇಷ ರಾಶಿ

promotions

ಸಮಾಜದಲ್ಲಿ ಸೇವಾ ಕಾರ್ಯಕ್ರಮಗಳನ್ನು ನಿರ್ವ್ವಹಿಸಿ ಗೌರವ, ಪ್ರತಿಷ್ಟೆ ಹೆಚ್ಚಿಸಿಕೊಳ್ಳುತ್ತೀರಿ. ಭೂಮಿ ಮಾರಾಟದಲ್ಲಿ ಹೊಸ ಲಾಭ ದೊರೆಯುತ್ತದೆ. ಉದ್ಯೋಗದಲ್ಲಿ ನೀವು ಬಯಸಿದ ಸ್ಥಾನಗಳನ್ನು ಪಡೆಯುತ್ತೀರಿ. ಹೊಸ ವಾಹನ ಖರೀದಿಸಲಾಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ.

promotions

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಹಳದಿ

ವೃಷಭ ರಾಶಿ

ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಳು ಮಾನಸಿಕ ನೆಮ್ಮದಿಯ ಕೊರತೆಯನ್ನು ಉಂಟುಮಾಡುತ್ತವೆ. ದೀರ್ಘಕಾಲದ ವಿವಾದಗಳು ಸ್ವಲ್ಪಕಿರಿಕಿರಿಯನ್ನು ಉಂಟುಮಾಡುತ್ತವೆ. ದೂರ ಪ್ರಯಾಣಗಳನ್ನು ಮಾಡುತ್ತೀರಿ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗಗಳಲ್ಲಿ ಅಧಿಕಾರಿಗಳಿಂದ ಟೀಕೆಗಳನ್ನು ಎದುರಿಸ tಬೇಕಾಗುತ್ತದೆ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ಹಸಿರು

ಮಿಥುನ ರಾಶಿ

ಸಾಲದ ಒತ್ತಡದಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತದೆ. ಆಲೋಚನೆಗಳಲ್ಲಿ ಸ್ಥಿರತೆಯ ಕೊರತೆಯಿರುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಹೆಚ್ಚಿನ ಶ್ರಮದಿಂದ ಪೂರ್ಣಗೊಳಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ವಾಗ್ವಾದಗಳು ಉಂಟಾಗುತ್ತವೆ. ವ್ಯಾಪಾರದಲ್ಲಿ ನಷ್ಟದ ಸೂಚನೆಗಳಿವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಕೋಪಕ್ಕೆ ಒಳಗಾಗುತ್ತೀರಿ.

ಅದೃಷ್ಟದ ದಿಕ್ಕು:ಉತ್ತರ

ಅದೃಷ್ಟದ ಸಂಖ್ಯೆ:7

ಅದೃಷ್ಟದ ಬಣ್ಣ: ಹಳದಿ 

ಕರ್ಕ ರಾಶಿ

ಸಮಾಜದಲ್ಲಿ ಜನಪ್ರಿಯತೆ ಹೆಚ್ಚಾಗುತ್ತದೆ. ಮೌಲ್ಯದ ವಾಹನಗಳನ್ನು ಖರೀದಿಸಲಾಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಉಂಟಾಗುತ್ತದೆ. ಮಕ್ಕಳ ಶಿಕ್ಷಣದ ವಿಷಯಗಳು ತೃಪ್ತಿಕರವಾಗಿರುತ್ತವೆ. ವ್ಯಾಪಾರಗಳು ಅಭಿವೃದ್ಧಿ ಹೊಂದುತ್ತವೆ. ಕೈಗೊಂಡ ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ.

ಅದೃಷ್ಟದ ದಿಕ್ಕು: ಈಶಾನ್ಯ 

ಅದೃಷ್ಟದ ಸಂಖ್ಯೆ:3

ಅದೃಷ್ಟದ ಬಣ್ಣ:ಕೆಂಪು

ಸಿಂಹ ರಾಶಿ

ಬಾಲ್ಯದ ಸ್ನೇಹಿತರೊಂದಿಗೆ ದೂರ ಪ್ರಯಾಣಗಳನ್ನು ಮಾಡುತ್ತೀರಿ. ಹೊಸ ವ್ಯಕ್ತಿಗಳ ಭೇಟಿ ಲಾಭದಾಯಕ ವಾಗಿರುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಅನುಕೂಲತೆ ಉಂಟಾಗುತ್ತದೆ. ನಿರುದ್ಯೋಗಿಗಳ ಪ್ರಯತ್ನಗಳು ಕೂಡಿ ಬರುತ್ತವೆ. ವೃತ್ತಿಪರ ವ್ಯವಹಾರದಲ್ಲಿ ಕಾರ್ಯ ಸಿದ್ಧಿ ಉಂಟಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಹೆಚ್ಚಾಗುತ್ತದೆ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಹಳದಿ

ಕನ್ಯಾ ರಾಶಿ

ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರುತ್ತದೆ. ವ್ಯವಹಾರಗಳಲ್ಲಿ ಶ್ರಮ ಶೀಲತೆ ಉಂಟಾಗುತ್ತದೆ. ಬಂಧು ಮಿತ್ರರೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಗೃಹ ನಿರ್ಮಾಣ ಪ್ರಯತ್ನಗಳು ನಿಧಾನವಾಗುತ್ತವೆ. ವೃತ್ತಿಪರ ವ್ಯವಹಾರಗಳು ಸಾಮಾನ್ಯವಾಗಿ ಸಾಗುತ್ತವೆ. ಹಣಕಾಸಿನ ವಿಷಯಗಳ ಬಗ್ಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ನೀಲಿ

ತುಲಾ ರಾಶಿ

ಪ್ರಯಾಣದಲ್ಲಿ ಅಡಚಣೆಗಳು ಉಂಟಾಗುತ್ತದೆ. ಸಾಲಗಾರರ ಒತ್ತಡ ಹೆಚ್ಚಾಗುತ್ತದೆ. ಕುಟುಂಬದ ಸದಸ್ಯರ ವರ್ತನೆಯಿಂದ ಮಾನಸಿಕ ನೆಮ್ಮದಿಯ ಕೊರತೆ ಕಾಡುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿ ಮತ್ತು ವ್ಯವಹಾರ ನಿಧಾನವಾಗುತ್ತದೆ. ಉದ್ಯೋಗದ ನಿರುತ್ಸಾಹ ಗೊಳಿಸುತ್ತದೆ.

ಅದೃಷ್ಟದ ದಿಕ್ಕು: ಪಶ್ಚಿಮ 

ಅದೃಷ್ಟದ ಸಂಖ್ಯೆ:1

ಅದೃಷ್ಟದ ಬಣ್ಣ:ಹಳದಿ

ವೃಶ್ಚಿಕ ರಾಶಿ

ಸಹೋದರರಿಂದ ಶುಭ ಸುದ್ದಿ ದೊರೆಯುತ್ತದೆ. ಹೊಸ ವಾಹನ ಖರೀದಿಸಲಾಗುತ್ತದೆ. ದೀರ್ಘಕಾಲದ ವಿವಾದಗಳು ಇತ್ಯರ್ಥವಾಗುತ್ತವೆ. ಆಪ್ತ ಸ್ನೇಹಿತರೊಂದಿಗೆ ದೇಗುಲಗಳಿಗೆ ಭೇಟಿ ನೀಡುತ್ತೀರಿ. ವ್ಯಾಪಾರಗಳುಚೆನ್ನಾಗಿನಡೆಯುತ್ತವೆ. ನಿರುದ್ಯೋಗಿಗಳಿಗೆ ದೊರೆತ ಮಾಹಿತಿಯು ಉತ್ಸಾಹದಾಯಕವಾಗಿರುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:4

ಅದೃಷ್ಟದ ಬಣ್ಣ:ನೇರಳೆ

ಧನು ರಾಶಿ

ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಕೌಟುಂಬಿಕ ವಾತಾವರಣ ಸ್ವಲ್ಪ ಕಿರಿಕಿರಿಯನ್ನುಂಟು ಮಾಡುತ್ತದೆ. ನೇತ್ರ ಸಂಬಂಧಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೊಸ ವ್ಯಾಪಾರವನ್ನು ವಿಸ್ತರಿಸುವ ಪ್ರಯತ್ನಗಳು ಕೂಡಿಬರುವುದಿಲ್ಲ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿರುತ್ತವೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:8

ಅದೃಷ್ಟದ ಬಣ್ಣ:ನೀಲಿ

ಮಕರ ರಾಶಿ

ಆತ್ಮೀಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಾಲಕಳೆಯುತ್ತೀರಿ. ಕೈಗೊಂಡವ್ಯವಹಾರಗಳಲ್ಲಿ ಹಠಾತ್ಯಶಸ್ಸು ದೊರೆಯುತ್ತದೆ. ಖರ್ಚಿಗೆ ಮೀರಿದ ಆದಾಯ ತೃಪ್ತಿಕರ ವಾಗಿರುತ್ತದೆ. ವ್ಯಾಪಾರದಲ್ಲಿ ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ ಮತ್ತು ಉದ್ಯೋಗದಲ್ಲಿ ನಿರೀಕ್ಷಿತ ಅವಕಾಶಗಳು ದೊರೆಯುತ್ತವೆ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಹಳದಿ

ಕುಂಭ ರಾಶಿ

ಪ್ರಯಾಣಗಳು ಮುಂದೂಡಲ್ಪಡುತ್ತವೆ. ಸಂಗಾತಿಯೊಂದಿಗೆ ವಿನಾಕಾರಣ ವಿವಾದಗಳು ಉದ್ಭವಿಸುತ್ತವೆ. ಹಳೆಯ ಸಾಲಗಳನ್ನು ತೀರಿಸಲು ಹೊಸ ಸಾಲಗಳನ್ನು ಮಾಡಲಾಗುತ್ತದೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಯಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗುತ್ತವೆ. ಉದ್ಯೋಗದಲ್ಲಿ ಋಣಾತ್ಮಕ ವಾತಾವರಣವಿರುತ್ತದೆ.

ಅದೃಷ್ಟದ ದಿಕ್ಕು:ಉತ್ತರ

ಅದೃಷ್ಟದ ಸಂಖ್ಯೆ:4

ಅದೃಷ್ಟದ ಬಣ್ಣ:ಹಸಿರು

ಮೀನ ರಾಶಿ

ಹಣಕಾಸಿನ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ. ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲಾಗುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ನಿರುದ್ಯೋಗಿಗಳಿಗೆ ಅನುಕೂಲತೆ ಉಂಟಾಗುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಉತ್ಸಾಹದಿಂದ ಮುನ್ನಡೆಯುತ್ತೀರಿ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ನೇರಳೆ


Read More Articles