ಇಂದಿನ ರಾಶಿ ಭವಿಷ್ಯ ಆಗಸ್ಟ್ 11-2023 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ

ಮೇಷ ರಾಶಿ
ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕೌಟುಂಬಿಕ ವಾತಾವರಣ ಸಮಸ್ಯಾತ್ಮಕವಾಗಿರುತ್ತದೆ. ವ್ಯಾಪಾರ ವಿಷಯಗಳಲ್ಲಿ ಕುಟುಂಬದ ಸದಸ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ವೃತ್ತಿಪರ ಉದ್ಯೋಗಗಳು ಮಿಶ್ರಿತವಾಗಿ ಸಾಗುತ್ತವೆ.

promotions

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಬಿಳಿ

promotions

ವೃಷಭ ರಾಶಿ
ದೀರ್ಘಾವಧಿ ಸಾಲಗಳಿಂದ ಹೊರಬರುತ್ತೀರಿ. ಸಮಾಜದಲ್ಲಿ ಹಿರಿಯರೊಂದಿಗಿನ ಹೊಸ ಸಂಪರ್ಕಗಳು ವಿಸ್ತಾರಗೊಳ್ಳುತ್ತವೆ. ಎಲ್ಲಾ ವಲಯದವರಿಗೂ ಅನುಕೂಲತೆ ಹೆಚ್ಚಾಗುತ್ತದೆ. ಆರ್ಥಿಕವಾಗಿ ನಿರೀಕ್ಷಿತ ಬದಲಾವಣೆಗಳಾಗುತ್ತವೆ. ಮೌಲ್ಯದ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸುತ್ತೀರಿ. ಉದ್ಯೋಗಿಗಳಿಗೆ ಅನುಕೂಲಕರವಾದ ಸ್ಥಾನಚಲನೆಗಳಾಗುತ್ತವೆ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಕಿತ್ತಳೆ

ಮಿಥುನ ರಾಶಿ
ಹೊಸ ಗೃಹ ನಿರ್ಮಾಣ ಪ್ರಯತ್ನಗಳು ಸ್ವಲ್ಪ ನಿಧಾನವಾಗುತ್ತವೆ. ಸಹೋದರರೊಂದಿಗೆ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಸಣ್ಣಪುಟ್ಟ ವಾಗ್ವಾದಗಳು ಉಂಟಾಗುತ್ತದೆ. ಬೇರೆಯವರೊಂದಿಗೆ ಆತುರದಿಂದ ಮಾತನಾಡುವುದು ಒಳ್ಳೆಯದಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಗೊಂದಲಮಯ ಪರಿಸ್ಥಿತಿಗಳಿರುತ್ತವೆ, ನಿರುದ್ಯೋಗ ಪ್ರಯತ್ನಗಳು ನಿಧಾನವಾಗಿ ಸಾಗುತ್ತವೆ, ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಹಸಿರು

ಕಟಕ ರಾಶಿ
ಮನೆಯಲ್ಲಿ ಭೋಜನ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ದೊರೆಯುತ್ತದೆ. ಬಂಧು ಮಿತ್ರರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ವ್ಯಾಪಾರಗಳು ಹೆಚ್ಚು ಲಾಭದಾಯಕವಾಗುತ್ತವೆ. ಮಕ್ಕಳ ವಿದ್ಯಾಭ್ಯಾಸದ ವಿಷಯಗಳಲ್ಲಿ ಒಳ್ಳೆಯ ಸುದ್ದಿ ದೊರೆಯುತ್ತದೆ.

ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ನೀಲಿ

ಸಿಂಹ ರಾಶಿ
ಮಿತ್ರರೊಂದಿಗೆ ಭೋಜನ ಮತ್ತು ಮನೋರಂಜನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರುತ್ತದೆ. ವೃತ್ತಿಪರ ವ್ಯವಹಾರಗಳ ವಿಸ್ತರಣೆಗೆ ಕುಟುಂಬ ಸದಸ್ಯರು ಬೆಂಬಲ ದೊರೆಯುತ್ತದೆ. ನಿರುದ್ಯೋಗಿಗಳ ಪ್ರಯತ್ನ ಫಲ ನೀಡುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ: ಕೆಂಪು

ಕನ್ಯಾ ರಾಶಿ
ಸಮಾಜ ಸೇವಾ ಕಾರ್ಯಗಳಲ್ಲಿ ವಿಶೇಷವಾಗಿ ಭಾಗವಹಿಸುತ್ತೀರಿ. ಹೊಸ ವ್ಯಾಪಾರಗಳನ್ನು ಆರಂಭಿಸುತ್ತೀರಿ. ದೀರ್ಘಕಾಲದ ಸಾಲಗಳನ್ನು ತೀರಿಸುವ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಸಣ್ಣ ವಿವಾದಗಳಿರುತ್ತವೆ. ದೂರ ಪ್ರಯಾಣವು ಲಾಭದಾಯಕವಾಗಿರುತ್ತವೆ.

ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ನೀಲಿ

ತುಲಾ ರಾಶಿ
ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ವೃತ್ತಿ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಅನುಷ್ಠಾನಗೊಳಿಸಿ ಲಾಭವನ್ನು ಪಡೆಯುತ್ತೀರಿ. ಮಿತ್ರರೊಂದಿಗೆ ವಾದ ವಿವಾದಗಳು ಬಗೆಹರಿಯುತ್ತವೆ. ದೂರದ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆರೋಗ್ಯ ವಿಷಯದಲ್ಲಿ ಆರೈಕೆಯ ಅಗತ್ಯವಿದೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಹಳದಿ

ವೃಶ್ಚಿಕ ರಾಶಿ
ಮನೆಯಲ್ಲಿ ಮಕ್ಕಳ ಶುಭಕಾರ್ಯಗಳ ಕುರಿತು ಚರ್ಚೆಗಳನ್ನು ನಡೆಸುತ್ತೀರಿ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗಿನ ಸಂಪರ್ಕವು ಲಾಭದಾಯಕ ವಾಗಿರುತ್ತದೆ ಮತ್ತು ಆರ್ಥಿಕವಾಗಿ ಅನುಕೂಲಕತೆ ಹೆಚ್ಚಾಗುತ್ತದೆ. ಪ್ರಯಾಣದಲ್ಲಿ ವಾಹನ ನಡೆಸುವಾಗ ಜಾಗರುಕರಾಗಿರಬೇಕು. ವೃತ್ತಿ ಪರ ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣವಿರುತ್ತದೆ.

ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು

ಧನಸ್ಸು ರಾಶಿ
ನಿರುದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರೋತ್ಸಾಹ ದೊರೆಯುತ್ತದೆ. ಎಲ್ಲಾ ಕಡೆಯಿಂದ ಆದಾಯ ಬರಲಿದೆ. ದೂರದ ಪ್ರದೇಶದ ಬಂಧು ಮಿತ್ರರ ಆಗಮನ ಸಂತಸ ತರಲಿದೆ. ದೈವಿಕ ಸೇವಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ಮಕ್ಕಳ ಶೈಕ್ಷಣಿಕ ವಿಷಯಗಳಲ್ಲಿ ಶುಭ ವಾರ್ತೆ ದೊರೆಯುತ್ತದೆ.

ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ನೀಲಿ

ಮಕರ ರಾಶಿ
ದೀರ್ಘಕಾಲದ ಸಾಲಗಳು ಇತ್ಯರ್ಥಗೊಂಡು, ಅವುಗಳಿಂದ ಮುಕ್ತಿ ದೊರೆಯುತ್ತದೆ. ದೂರದ ಬಂಧು ಮಿತ್ರರಿಂದ ಸಿಗುವ ಮಾಹಿತಿ ಅಚ್ಚರಿ ಮೂಡಿಸುತ್ತದೆ. ಆರ್ಥಿಕ ಸಂಕಷ್ಟ ಎದುರಾದರೂ ಬಗೆಹರಿಸಿ ಮುನ್ನಡೆಯುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಮಕ್ಕಳ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು.

ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಹಳದಿ

ಕುಂಭ ರಾಶಿ
ಬಾಲ್ಯದ ಗೆಳೆಯರೊಂದಿಗೆ ವಿವಾದ ಉಂಟಾಗುತ್ತದೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಿ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಹೊಸ ವಾಹನ ಖರೀದಿಯನ್ನು ಮುಂದೂಡುವುದು ಉತ್ತಮ. ಉದ್ಯೋಗ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಬಿಳಿ

ಮೀನ ರಾಶಿ
ಬಂಧುಗಳೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಹಳೆಯ ಘಟನೆಗಳನ್ನು ನೆನೆಸಿಕೊಂಡು ಬೇಸರ ಪಡುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳಿಗೆ ಧನ ವ್ಯಯವಾಗುತ್ತದೆ. ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಸೋದರ ಸಂಬಂಧಿಗಳೊಂದಿಗೆ ಸ್ಥಿರಾಸ್ತಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ.

ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ: ಹಳದಿ

Read More Articles