ಇಂದಿನ ರಾಶಿ ಭವಿಷ್ಯ ಜೂಲೈ-09-2024 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ.

ಮೇಷ ರಾಶಿ

promotions

ವ್ಯಾಪಾರದಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುತ್ತವೆ. ಮತ್ತು ಆತ್ಮೀಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕು. ನಿರುದ್ಯೋಗಿಗಳ ಶ್ರಮ ವ್ಯರ್ಥವಾಗುತ್ತವೆ.

promotions

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಬಣ್ಣ:ನೀಲಿ

ವೃಷಭ ರಾಶಿ

ಆದಾಯ ತೃಪ್ತಿಕರವಾಗಿರುತ್ತದೆ, ವೃತ್ತಿ ವ್ಯವಹಾರದಲ್ಲಿ ಕಾರ್ಯ ಸಿದ್ಧಿ ಉಂಟಾಗುತ್ತದೆ. ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಬಂಧುಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಉದ್ಯೋಗದಲ್ಲಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತದೆ ಮತ್ತು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುತ್ತೀರಿ.

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಗುಲಾಬಿ

ಮಿಥುನ ರಾಶಿ

ಹಳೆ ಸಾಲದ ಒತ್ತಡದಿಂದ ಹೊರಬರಲು ಹೊಸಸಾಲಗಳನ್ನು ಮಾಡಬೇಕಾಗುತ್ತದೆ. ಬಾಲ್ಯದ ಗೆಳೆಯರೊಂದಿಗೆ ಭಿನ್ನಭಿಪ್ರಾಯಗಲಿರುತ್ತವ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮನೆಯ ಹೊರಗೆ ಕಿರಿಕಿರಿಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿನ ಫಲಿತಾಂಶಗಳು ನಿರಾಶಾದಾಯಕ ವಾಗಿರುತ್ತವೆ. ಉದ್ಯೋಗದಲ್ಲಿ ಋಣಾತ್ಮಕ ವಾತಾವರಣವಿರುತ್ತದೆ.

ಅದೃಷ್ಟದ ದಿಕ್ಕು:ವಾಯುವ್ಯ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ಹಸಿರು

ಕರ್ಕ ರಾಶಿ

ಸಮಾಜದಲ್ಲಿ ಪ್ರಮುಖರೊಂದಿಗಿನ ಪರಿಚಯಗಳು ಲಾಭದಾಯಕವಾಗಿರುತ್ತದೆ. ಆತ್ಮೀಯರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಕೆಲವು ವ್ಯವಹಾರಗಳಲ್ಲಿ ಧೈರ್ಯದಿಂದ ಮುನ್ನಡೆಯುತ್ತೀರಿ, ಹಣಕಾಸಿನ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿರುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಅನುಕೂಲಕರವಾಗಿರುತ್ತದೆ. ಉದ್ಯೋಗಿಗಳು ನಿಯೋಜಿತ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತೀರಿ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ಬೂದು

ಸಿಂಹ ರಾಶಿ

ಆದಾಯಕ್ಕಿಂತ ಖರ್ಚು ಅಧಿಕವಾಗಿರುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಉದರ ಸಂಬಂಧಿ ಆರೋಗ್ಯ ಸಮಸ್ಯೆಗಳು ಭಯಾಧಿಸುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ವ್ಯಾಪಾರದಲ್ಲಿ ಹೊಸ ಸಮಸ್ಯೆಗಳ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ವೃತ್ತಿಪರ ಉದ್ಯೋಗಗಳಲ್ಲಿ ವಿವಾದಗಳಿಂದ ದೂರವಿರುವುದು ಉತ್ತಮ.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಬಿಳಿ

ಕನ್ಯಾ ರಾಶಿ

ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ದೊರೆಯುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಮಕ್ಕಳ ವಿವಾಹ, ಉದ್ಯೋಗ ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಎಲ್ಲಾ ವಿಷಯಗಳಲ್ಲಿ ಬಂಧು ಮಿತ್ರರು ಸಹಾಯ ಮಾಡುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಯೋಗವಿದೆ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:4

ಅದೃಷ್ಟದ ಬಣ್ಣ:ನೀಲಿ

ತುಲಾ ರಾಶಿ

ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ. ವ್ಯಾಪಾರ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ನಿಮ್ಮ ಸ್ವಂತ ಆಲೋಚನೆಗಳನ್ನು ಹೊಂದಿರುವುದು ಒಳ್ಳೆಯದು. ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಬಂಧುಮಿತ್ರರಲ್ಲಿ ಸಣ್ಣಪುಟ್ಟ ವಿವಾದ ಉಂಟಾಗುತ್ತದೆ.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ನೀಲಿ

ವೃಶ್ಚಿಕ ರಾಶಿ

ಕೈಗೊಂಡ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ. ಇತರರ ವರ್ತನೆಯು ಮಾನಸಿಕ ಅಶಾಂತಿಯನ್ನು ಉಂಟುಮಾಡುತ್ತದೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ. ಕುಟುಂಬ ಸದಸ್ಯರ ಆರೋಗ್ಯ ವಿಷಯದಲ್ಲಿ ಜಾಗರೂಕರಾಗಿರಿ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:7

ಅದೃಷ್ಟದ ಬಣ್ಣ:ನೀಲಿ

ಧನು ರಾಶಿ

ಮಕ್ಕಳ ವಿದ್ಯಾಭ್ಯಾಸ ವಿಷಯಗಳು ಸಮಸ್ಯಾತ್ಮಕವಾಗಿರುತ್ತವೆ. ವೃತ್ತಿಪರವ್ಯವಹಾರಗಳಲ್ಲಿ ಗೊಂದಲಮಯ ಸನ್ನಿವೇಶಗಳಿರುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವೆಚ್ಚವನ್ನು ನಿಯಂತ್ರಿಸಲು ಕಷ್ಟವಾಗುತ್ತವೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:8

ಅದೃಷ್ಟದ ಬಣ್ಣ:ಹಳದಿ

ಮಕರ ರಾಶಿ

ಸಂಗಾತಿಯೊಂದಿಗೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ. ಸರ್ಕಾರಿ ವ್ಯವಹಾರಗಳಲ್ಲಿಜಾಗರೂಕರಾಗಿರಿ. ಅಗತ್ಯಕ್ಕೆ ಸ್ನೇಹಿತರ ಸಹಾಯವನ್ನು ಸ್ವೀಕರಿಸಲಾಗುತ್ತದೆ. ಮಕ್ಕಳ ವಿದ್ಯಾ ವಿಷಯಗಳು ತೃಪ್ತಿಕರವಾಗಿರುತ್ತದೆಪ್ರಯಾಣದ ಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ಉದ್ಯೋಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುತ್ತೀರಿ.

ಅದೃಷ್ಟದ ದಿಕ್ಕು:ಆಗ್ನೇಯ

ಅದೃಷ್ಟದ ಸಂಖ್ಯೆ:3

ಅದೃಷ್ಟದ ಬಣ್ಣ:ಬೂದು

ಕುಂಭ ರಾಶಿ

ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ. ಬಂಧು ಮಿತ್ರರೊಂದಿಗೆ ಭೋಜನಾ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೀರಿ. ಆದಾಯದ ವಿಷಯದಲ್ಲಿ ಕೊರತೆಗಳನ್ನು ನೀಗಿಸಲಾಗುತ್ತದೆ. ವ್ಯಾಪಾರದಲ್ಲಿ ಶತ್ರುಗಳ ಸಮಸ್ಯೆ ದೂರವಾಗುತ್ತದೆ. ಮನೆಯ ಹೊರಗೆ ವಾತವರಣ ಅನುಕೂಲಕರವಾಗಿರುತ್ತದೆ. ಆರ್ಥಿಕ ಪ್ರಗತಿ ಸಾಧಿಸಲಾಗುತ್ತದೆ.

ಅದೃಷ್ಟದ ದಿಕ್ಕು:ವಾಯುವ್ಯ

ಅದೃಷ್ಟದ ಸಂಖ್ಯೆ:8

ಅದೃಷ್ಟದ ಬಣ್ಣ:ನೀಲಿ

ಮೀನ ರಾಶಿ

ಹೊಸ ವಸ್ತ್ರ ಖರೀದಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಎಲ್ಲಾ ವ್ಯವಹಾರಗಳು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಿ. ವ್ಯಾಪಾರಗಳು ಲಾಭದಾಯಕ ವಾಗಿರುತ್ತವೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ಕಿತ್ತಳೆ

Read More Articles