ಇಂದಿನ ರಾಶಿ ಭವಿಷ್ಯ ಜೂನ್-04-2024 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ.
- Prasad Kambar
- 4 Jun 2024 , 7:12 AM
- Belagavi
- 1566
ಮೇಷ ರಾಶಿ

ಸ್ವಂತ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಭೂವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಉದ್ಯೋಗ ಬದಲಾಯಿಸುವ ಸಾಧ್ಯತೆಗಳಿವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮ್ಮ ನಿರೀಕ್ಷೆ ನಿಜವಾಗಲಿದೆ. ಹಣಕಾಸಿನ ಸಹಾಯ ದೊರೆಯುತ್ತದೆ. ವಂಶದ ಹಿರಿಯರನ್ನು ಭೇಟಿ ಮಾಡುವಿರಿ. ವಂಶದ ಆಸ್ತಿಯ ಹಂಚಿಕೆಯಲ್ಲಿ ನಿಮ್ಮ ಪಾತ್ರ ಮುಖ್ಯವಾಗುತ್ತದೆ. ದಂಪತಿ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ.

ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ನೀಲಿ
ವೃಷಭ ರಾಶಿ
ಆತ್ಮೀಯರ ಹಣದ ಸಹಾಯ ನೆಮ್ಮದಿಯನ್ನು ನೀಡುತ್ತದೆ. ಮಕ್ಕಳ ಜೊತೆ ಸಂತೋಷ ದಿಂದ ದಿನ ಕಳೆಯುವಿರಿ. ದಿಢೀರ್ ಹಣಗಳಿಸುವ ಆಸೆ ಇರುವುದಿಲ್ಲ. ಕಷ್ಟವೆನಿಸಿದರೂ ಸಂಗಾತಿಯ ಮನೋಭಿಲಾಷೆಯನ್ನು ಪೂರೈಸುವಿರಿ. ಒತ್ತಡದಿಂದ ದೂರವಾಗಲು ಕುಟುಂಬವರೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವೊಂದನ್ನು ಪೂರ್ಣಗೊಳಿಸುವಲ್ಲಿ ಯಶಸ್ಸು ಗಳಿಸುವಿರಿ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೇರಳೆ
ಮಿಥುನ ರಾಶಿ
ಮನದಲ್ಲಿನ ನೋವನ್ನು ಮರೆತು ಎಲ್ಲರ ಜೊತೆ ಸಂತೋಷ ಮತ್ತು ಆನಂದದಿಂದ ದಿನ ಕಳೆಯುವಿರಿ. ಗೃಹಿಣಿಯರಿಗೆ ತವರಿನ ಸಹಾಯ ದೊರೆಯುತ್ತದೆ. ಒಳ್ಳೆಯ ಕೆಲಸ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವಿರಿ. ಕುಟುಂಬದಲ್ಲಿನ ಸಮಸ್ಯೆಗಳು ದೂರವಾಗಲಿವೆ. ಹೆಚ್ಚಿನ ಕುಟುಂಬದ ಜವಾಬ್ದಾರಿಗಳನ್ನು ಯಾವುದೇ ಅಡೆ ತಡೆ ಇಲ್ಲದೆ ನಿರ್ವಹಿಸುವಿರಿ. ಸೋಲಿನ ಭಯದಲ್ಲಿ ಸಿಡುಕುತನದಿಂದ ವರ್ತಿಸುವಿರಿ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಗುಲಾಬಿ
ಕರ್ಕ ರಾಶಿ
ವಿದ್ಯಾರ್ಥಿಗಳು ತಮ್ಮ ಸಾಧನೆಯಿಂದ ಕುಟುಂಬದವರ ಪ್ರೀತಿ ಗಳಿಸುತ್ತಾರೆ. ಉನ್ನತ ಅಧ್ಯಯನ ಮಾಡುವ ಅವಕಾಶ ದೊರೆಯುತ್ತದೆ. ಉತ್ತಮ ಪ್ರಯತ್ನದ ಕಾರಣ ಆರ್ಥಿಕ ಬಿಕ್ಕಟ್ಟು ನಿವಾರಣೆ ಆಗಲಿದೆ. ನಿಮ್ಮ ಹಣೆ ಅಥವಾ ತಲೆಗೆ ಪೆಟ್ಟಾಗಬಹುದು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಬೇಕು. ಸಂಗಾತಿಯ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುವಿರಿ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಬಿಳಿ
ಸಿಂಹ ರಾಶಿ
ಹಣಕಾಸಿನ ಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ವಂಶದ ಆಸ್ತಿಯಲ್ಲಿನ ನ್ಯಾಯಯುತ ಭಾಗ ದೊರೆಯಲಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರಿಳಿತ ಉಂಟಾಗಲಿದೆ. ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಕಾಣುವಿರಿ. ನೇರ ನಿಷ್ಠುರದ ನಡೆ ನುಡಿಯಿಂದ ಸಂಬಂಧಿಕರ ಜೊತೆ ವಿವಾದ ಉಂಟಾಗಬಹುದು. ನಿಮ್ಮಲ್ಲಿ ಉತ್ತಮ ಸಂಘಟನಾ ಗುಣ ಎಲ್ಲರ ಮನ ಗೆಲ್ಲುತ್ತದೆ. ಜನ ಸಾಮಾನ್ಯರಿಂದ ದೂರಉಳಿಯಲುಪ್ರಯತ್ನಿಸುವಿರಿ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಬೂದು
ಕನ್ಯಾ ರಾಶಿ
ಹಣಕಾಸಿನ ವಿಚಾರದಲ್ಲಿ ಸಮಾಧಾನ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಹಣದ ವ್ಯವಹಾರದಲ್ಲಿನ ಗೊಂದಲ ನಿವಾರಣೆ ಆಗಲಿದೆ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆಯ ವಾತಾವರಣ ಇರುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ದಂಪತಿ ನಡುವೆ ಉತ್ತಮ ಪ್ರೀತಿ ವಿಶ್ವಾಸ ಮನೆ ಮಾಡಿರುತ್ತವೆ. ನಿಮ್ಮಲ್ಲಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುವಿರಿ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಕಂದು
ತುಲಾ ರಾಶಿ
ನಿಮ್ಮ ಮಕ್ಕಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಆತುರ ಪಡುವುದಿಲ್ಲ. ಹಣದ ಕೊರತೆ ಕಾಣುವುದಿಲ್ಲ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪುನಿರ್ಧಾರ ತೆಗೆದುಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಕುಟುಂಬದ ಸೌಖ್ಯಕ್ಕಾಗಿ ಯಾವುದೇ ತ್ಯಾಗಕ್ಕೂ ಹಿಂಜರಿಯುವುದಿಲ್ಲ. ಮನದಲ್ಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಲು ವಿಫಲರಾಗುವಿರಿ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಕಿತ್ತಳೆ
ವೃಶ್ಚಿಕ ರಾಶಿ
ಹಟದಿಂದ ಸದಾಕಾಲ ಯಶಸ್ಸಿನ ಹಾದಿಯಲ್ಲಿ ಸಾಗುವಿರಿ. ಸಾಲವಾಗಿ ಹಣ ನೀಡುವುದನ್ನು ಮತ್ತು ಪಡೆಯುವುದನ್ನು ಇಷ್ಟಪಡುವುದಿಲ್ಲ. ಕೆಲಸದ ನಡುವೆ ವಿಶ್ರಾಂತಿ ತೆಗೆದುಕೊಳ್ಳುವಿರಿ. ಅಪೂರ್ಣಗೊಂಡ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ತಲ್ಲೀನರಾಗುವಿರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ವಿಶ್ವಾಸ ಇರಲಿವೆ. ಎದುರಾಗುವ ಸಮಸ್ಯೆಗಳಿಗೆ ಬೆದರದೆ ಪರಿಹಾರವನ್ನು ಕಂಡು ಹಿಡಿಯುವಿರಿ.
ಅದೃಷ್ಟದ ದಿಕ್ಕು:ನೈರುತ್ಯ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಹಸಿರು
ಧನು ರಾಶಿ
ಕಾನೂನಿನ ಹೋರಾಟವೊಂದರಲ್ಲಿ ಜಯ ಲಭಿಸುತ್ತದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ. ಹಣಕಾಸಿನ ವ್ಯವಹಾರಗಳು ಮಧ್ಯಮಗತಿಯಲ್ಲಿ ಸಾಗಲಿವೆ. ಕಷ್ಟ ಎನಿಸಿದರೂ ಹಣ ಉಳಿಸುವಲ್ಲಿ ಸಫಲರಾಗುವಿರಿ. ವಂಶಾಧಾರಿತ ವೃತ್ತಿಯನ್ನು ಆರಂಭಿಸುವಿರಿ. ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಪಡೆಯುವಿರಿ. ಕುಟುಂಬದ ಸಣ್ಣ ಸಣ್ಣ ಬದಲಾವಣೆಗೂ ಹೆಚ್ಚಿನ ಗಮನ ನೀಡುವಿರಿ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ: ಕೆಂಪು
ಮಕರ ರಾಶಿ
ಆತುರ ಪಡದೆ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಬಿಡುವಿನ ವೇಳೆ ಕಳೆಯುವಿರಿ. ನೀವು ಆನಂದಿಸುವ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಲಿದ್ದೀರಿ. ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯಲಿವೆ. ಹಣದ ಕೊರತೆಇರುವುದಿಲ್ಲ. ಬಡವರಿಗೆ ಸಹಾಯ ಮಾಡುವ ಕೆಲಸಗಳನ್ನು ಆರಂಭಿಸುವಿರಿ. ಆರೋಗ್ಯದ ಬಗ್ಗೆ ಗಮನ ಕೊಡಿ. ಹೊಸ ವಾಹನವನ್ನು ಕೊಳ್ಳುವಿರಿ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ: ಬಿಳಿ
ಕುಂಭ ರಾಶಿ
ಉತ್ತಮ ಆದಾಯ ಇರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ನಿಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಕೂಡಿಟ್ಟ ಹಣ ಈಗ ನಿಮಗೆ ಆಧಾರವಾಗಲಿದೆ. ಸುಖ ಮತ್ತು ದುಃಖವನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವಂತೆ ಶ್ರಮಿಸುವಿರಿ. ಕುಟುಂಬದ ಜವಾಬ್ದಾರಿಯಿಂದ ಸಂಗಾತಿಗೆ ಮಾನಸಿಕ ಒತ್ತಡ ಹೆಚ್ಚುತ್ತದೆ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಬೂದು
ಮೀನ ರಾಶಿ
ಸಂಗಾತಿಯ ಸಾಂತ್ವನದ ಮಾತು ಹೊಸ ಆಸೆ ಉಂಟು ಮಾಡುತ್ತದೆ. ಸಾಲದ ವ್ಯವಹಾರದಿಂದ ಮನಸ್ಸಿಗೆ ಬೇಸರ ಉಂಟಾಗುತ್ತದೆ. ಸ್ನೇಹಿತರಿಂದ ದೂರ ಉಳಿಯಬೇಕಾದ ಪ್ರಸಂಗ ಉಂಟಾಗುತ್ತದೆ. ಅವಿವಾಹಿತರಿಗೆ ಸಂಬಂಧ ಅಥವಾ ಪ್ರೀತಿ ಪಾತ್ರರ ಜೊತೆಯಲ್ಲಿ ವಿವಾಹವಾಗುತ್ತದೆ. ಸೋಲನ್ನು ಗೆಲುವಾಗಿಸಬಲ್ಲ ಉಪಾಯ ನಿಮಗೆ ತಿಳಿದಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನದಿಂದ ಸಾಕಷ್ಟು ಬದಲಾವಣೆ ಕಾಣುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಹಸಿರು










