ಇಂದಿನ ರಾಶಿ ಭವಿಷ್ಯ ಜೂನ 09-2023 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ

ಮೇಷ ರಾಶಿ
ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಒಂದು ಹಂತಕ್ಕೆ ತಲುಪುತ್ತವೆ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ವೃತ್ತಿಪರ ಉದ್ಯೋಗದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ರಾಜಕೀಯ ಮುಖಂಡರೊಂದಿಗಿನ ಸಂಪರ್ಕವು ಹೆಚ್ಚಾಗುತ್ತದೆ. ಕುಟುಂಬದ ಸದಸ್ಯರಿಂದ ಹಣಕಾಸಿನ ನೆರವು ದೊರೆಯುತ್ತದೆ.

promotions

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ನೀಲಿ

promotions

ವೃಷಭ ರಾಶಿ                                                                ಕೈಗೊಂಡ ಕೆಲಸಗಳಲ್ಲಿ ಅಧಿಕ ಶ್ರಮದಿಂದಲೂ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಕುಟುಂಬ ಸದಸ್ಯರೊಂದಿಗಿನ  ವಾದ ವಿವಾದಗಳು ಸ್ವಲ್ಪ ಕಿರಿಕಿರಿಯನ್ನುಂಟು ಮಾಡುತ್ತವೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಹಸಿರು

ಮಿಥುನ ರಾಶಿ
ಪ್ರಮುಖ ವಿಷಯಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ, ಬಂಧುಗಳೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ಸಾಲಗಾರರಿಂದ  ಒತ್ತಡ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಹೊಸ ವ್ಯಾಪಾರ ಆರಂಭಕ್ಕೆ ನಿರೀಕ್ಷಿತ ಬೆಂಬಲ ಸಿಗುವುದಿಲ್ಲ ಮತ್ತು ಉದ್ಯೋಗದ ವಾತಾವರಣ, ಕುಲಶಿತ ವಾಗಿರುತ್ತದೆ.

ಅದೃಷ್ಟದ ದಿಕ್ಕು:ವಾಯುವ್ಯ,
ಅದೃಷ್ಟದ ಸಂಖ್ಯೆ:9 
ಅದೃಷ್ಟದ ಬಣ್ಣ:ಕೆಂಪು

ಕಟಕ ರಾಶಿ
ಸಮಾಜದಲ್ಲಿ ಗೌರವ ಪ್ರತಿಷ್ಟೆಗಳು ಹೆಚ್ಚುತ್ತವೆ. ಬಂಧು ಮಿತ್ರರಿಂದ ಅಮೂಲ್ಯವಾದ  ವಸ್ತುಗಳನ್ನು ಉಡುಗೊರೆಯಾಗಿ ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆತ್ಮಸ್ಥೈರ್ಯದಿಂದ ಕೆಲವು ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ನೀಲಿ 

ಸಿಂಹ ರಾಶಿ 
ಬಾಲ್ಯದ ಗೆಳೆಯರೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವಿರಿ. ಹೊಸ ವ್ಯಕ್ತಿಗಳ ಭೇಟಿಯು ಲಭದಾಯಕವಾಗಿರುತ್ತದೆ ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಕೈಗೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದ ಸದಸ್ಯರ ನೆರವಿನಿಂದ ಹೊಸ ಉದ್ಯಮಗಳನ್ನು ಆರಂಭಿಸಲಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಸ್ಥಾನಮಾನವನ್ನು ಪಡೆಯುತ್ತೀರಿ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಬಿಳಿ

ಕನ್ಯಾ ರಾಶಿ
ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗುತ್ತವೆ. ಹಣದ ವಿಷಯದಲ್ಲಿ ತೊಂದರೆಗಳು ಎದುರಾಗುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ನಿರುತ್ಸಾಹಗೊಳಿಸುತ್ತವೆ. ದೂರ ಪ್ರಯಾಣಗಳನ್ನು ಮುಂದೂಡುವುದು ಉತ್ತಮ

ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ: ಕೆಂಪು

ತುಲಾ ರಾಶಿ
ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಲಿವೆ. ಸ್ನೇಹಿತರಿಂದ ಪ್ರಮುಖ ಮಾಹಿತಿಯನ್ನು ಸ್ವೀಕರಿಸುತ್ತೀರಿ. ಮನೆಯ ಹೊರಗೆ ಅನಿರೀಕ್ಷಿತ ಸಮಸ್ಯೆಗಳು ಉದ್ಭವಿಸುತ್ತವೆ.  ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯಾಪಾರಗಳು ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತವೆ ಮತ್ತು ಉದ್ಯೋಗ ವಿಷಯದಲ್ಲಿ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಹಳದಿ

ವೃಶ್ಚಿಕ ರಾಶಿ
ಆತ್ಮೀಯರಿಂದ ಶುಭ ಸಮಾಚಾರ ಸಿಗಲಿದೆ, ಹೊಸ ವಸ್ತು ವಾಹನ ಖರೀದಿ ಮಾಡುತ್ತೀರಿ, ಕುಟುಂಬ ಸದಸ್ಯರೊಂದಿಗೆ ದೇವರ ದರ್ಶನ ಪಡೆಯುತ್ತೀರಿ. ದೀರ್ಘಕಾಲದ ಸಮಸ್ಯೆಗಳನ್ನು ಜಾಣತನದಿಂದ ಬಗೆ ಹರಿಸುತ್ತೀರಿ. ವ್ಯಾಪಾರ ಉದ್ಯೋಗಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಿ ಲಾಭಗಳಿಸುತ್ತೀರಿ. ಮಕ್ಕಳ ವಿವಾಹ ವಿಷಯದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸುತ್ತೀರಿ.

ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಹಳದಿ

ಧನಸ್ಸು ರಾಶಿ
ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆಳು ಎದುರಾಗುತ್ತವೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಸಂಗಾತಿಯೊಂದಿಗೆ ವಿವಾದಗಳು ಉಂಟಾಗುತ್ತವೆ ಮತ್ತು ಆಧ್ಯಾತ್ಮಿಕ ಚಿಂತೆಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಗೊಂದಲಮಯ ಪರಿಸ್ಥಿತಿಗಳಿರುತ್ತವೆ. ಹೆಚ್ಚುವರಿ ಕೆಲಸದ ಹೊರೆಯಿಂದ ಉದ್ಯೋಗಿಗಳಿಗೆ ವಿಶ್ರಾಂತಿ ಸಿಗುವುದಿಲ್ಲ.

ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಬೂದು

ಮಕರ ರಾಶಿ
ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಅಪ್ರಯತ್ನವಾಗಿ ಕಾರ್ಯಸಿದ್ಧತೆ ಇರುತ್ತದೆ. ಹೊಸ ವ್ಯಾಪಾರದಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಲಾಭವನ್ನು ಪಡೆಯುತ್ತೀರಿ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಬಂಧು ಮಿತ್ರರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುವಿರಿ. ವೃತ್ತಿಪರ ಉದ್ಯೋಗಗಳು ಉತ್ತಮವಾಗಿ ನಡೆಯುತ್ತವೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಅವಕಾಶಗಳು ದೊರೆಯುತ್ತವೆ.

ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಹಸಿರು     

ಕುಂಭ ರಾಶಿ 
ದಿಢೀರ್ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ದೀರ್ಘಕಾಲದ ಸಾಲದ ಒತ್ತಡ ಹೆಚ್ಚುತ್ತದೆ ಮತ್ತು ಹೊಸ ಸಾಲಗಳನ್ನು ತೆಗೆದುಕೊಳ್ಳಲಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಅನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಸಹಾನುಭೂತಿಯಿಂದ ವರ್ತಿಸುವುದು ಒಳ್ಳೆಯದು.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಹಳದಿ

ಮೀನ ರಾಶಿ
ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊಸ ವಸ್ತು ಲಾಭಗಳನ್ನು ಪಡೆಯುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ನಿರುದ್ಯೋಗಿಗಳಿಗೆ ಅನುಕೂಲತೆ ಹೆಚ್ಚಾಗುತ್ತದೆ. ಭೂಮಿ ಸಂಬಂಧಿಸಿದ ಖರೀದಿ ಮಾರಾಟಗಳಲ್ಲಿ ಹೊಸ ಲಾಭ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಶುಭ ಸುದ್ದಿ ಸಿಗಲಿದೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಹಳದಿ         

Read More Articles