ಇಂದಿನ ರಾಶಿ ಭವಿಷ್ಯ ಜೂನ 13-2023 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ
- Prasad Kambar
- 3 Jan 2024 , 8:00 PM
- Belagavi
- 139
ಮೇಷ ರಾಶಿ
ವೃತ್ತಿ ಮತ್ತು ವ್ಯವಹಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ಪ್ರಮುಖ ಕೆಲಸಗಳಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ. ಬಂಧುಮಿತ್ರರೊಂದಿಗೆ ಆಸ್ತಿ ವಿವಾದಗಳು ಉಂಟಾಗುತ್ತವೆ. ಉದ್ಯೋಗದಲ್ಲಿ ಕೆಲವರ ವರ್ತನೆಯು ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಬಿಳಿ

ವೃಷಭ ರಾಶಿ
ಹೊಸ ವ್ಯವಹಾರಗಳನ್ನು ಪ್ರಾರಂಭಿಸಿ ಲಾಭವನ್ನು ಪಡೆಯುತ್ತೀರಿ. ದೂರದ ಸ್ನೇಹಿತರಿಂದ ಅಪರೂಪದ ಆಹ್ವಾನಗಳನ್ನು ಸ್ವೀಕರಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಉತ್ತಮ ಸಾಧನೆ ಮಾಡುತ್ತೀರಿ. ಸಮಾಜದಲ್ಲಿ ಗೌರವಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಎಲ್ಲಾ ಕಡೆಯಿಂದ ಆದಾಯ ಗಳಿಸುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ದೊರೆಯುತ್ತದೆ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ಹಳದಿ
ಮಿಥುನ ರಾಶಿ
ಕೈಗೊಂಡ ವ್ಯವಹಾರಗಳಲ್ಲಿ ಅಪ್ರಯತ್ನವಾಗಿ ಯಶಸ್ಸು ದೊರೆಯುತ್ತದೆ. ಸ್ಥಿರಾಸ್ತಿ ಖರೀದಿಯ ಯತ್ನಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಭೋಜನ ಮನೋರಂಜನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹಗಳು ದೊರೆಯಲಿವೆ. ವಾಹನ ವ್ಯಾಪಾರಸ್ತರಿಗೆ ಅನುಕೂಲತೆ ಹೆಚ್ಚುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಹಳದಿ
ಕಟಕ ರಾಶಿ
ಹಣದ ವಿಚಾರದಲ್ಲಿ ಗೊಂದಲಮಯ ಪರಿಸ್ಥಿತಿಗಳಿರುತ್ತವೆ. ದೂರ ಪ್ರಯಾಣಗಳು ಮುಂದೂಡಲ್ಪಡುತ್ತವೆ. ಸಹೋದರರೊಂದಿಗೆ ವಾದ-ವಿವಾದಗಳು ಉಂಟಾಗುತ್ತವೆ. ಉದ್ಯೋಗ ಮತ್ತು ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ನಿರುದ್ಯೋಗಿಗಳ ಪ್ರಯತ್ನಗಳನ್ನು ನಿರುತ್ಸಾಹಗೊಳಿಸುತ್ತವೆ. ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಒಳ್ಳೆಯದು.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಕೆಂಪು
ಸಿಂಹ ರಾಶಿ
ಕೈಗೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳದೆ ಕಿರಿಕಿರಿ ಉಂಟಾಗುತ್ತದೆ. ವೃತ್ತಿಪರ ವ್ಯವಹಾರದಲ್ಲಿ ಪಾಲುದಾರರೊಂದಿಗೆ ಅನಿರೀಕ್ಷಿತ ತೊಂದರೆಗಳು ಎದುರಾಗುತ್ತವೆ. ದೂರ ಪ್ರಯಾಣದಲ್ಲಿ ಶ್ರಮ ಅಧಿಕವಾಗಿರುತ್ತದೆ. ಆಧ್ಯಾತ್ಮಿಕ ಚಿಂತೆಗಳು ಹೆಚ್ಚಾಗುತ್ತವೆ. ಉದ್ಯೋಗ ಪ್ರಯತ್ನಗಳು ನಿಧಾನವಾಗುತ್ತವೆ. ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶ ನಿರಾಶಾದಾಯಕವಾಗಿರುತ್ತವೆ. ಆರ್ಥಿಕವಾಗಿ ಸ್ಥಿರತೆ ಇಲ್ಲ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಬಿಳಿ
ಕನ್ಯಾ ರಾಶಿ
ಕುಟುಂಬ ಸದಸ್ಯರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹೊಸ ವ್ಯಾಪಾರ ಆರಂಭಿಸಲು ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಹೊಸ ವಿದ್ಯಾ ಮತ್ತು ಉದ್ಯೋಗಾವಕಾಶಗಳು ದೊರೆಯಲಿವೆ. ಹಳೆಯ ಸ್ನೇಹಿತರ ಆಗಮನದಿಂದ ಸಂತಸ ಮೂಡುತ್ತದೆ. ಉದ್ಯೋಗದಲ್ಲಿ ನಿಯೋಜಿಸಲಾದ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ. ಆರ್ಥಿಕ ಪ್ರಗತಿ ಕಂಡುಬರುತ್ತದೆ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ನೀಲಿ
ತುಲಾ ರಾಶಿ
ಪ್ರಮುಖ ವ್ಯವಹಾರಗಳಲ್ಲಿ ಆಕಸ್ಮಿಕ ಯಶಸ್ಸುದೊರೆಯುತ್ತದೆ. ಕುಟುಂಬದ ಸದಸ್ಯರ ಸಲಹೆ ಪಡೆದು ಮುನ್ನಡೆಯುವುದು ಒಳ್ಳೆಯದು. ನಿರುದ್ಯೋಗಿಗಳ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ವೃತ್ತಿಪರ ವ್ಯವಹಾರಗಳು ಅಲ್ಪ ಲಾಭವನ್ನು ಪಡೆಯುತ್ತವೆ. ಉದ್ಯೋಗದಲ್ಲಿ ಬಡ್ತಿಗಳು ಹೆಚ್ಚಾಗುತ್ತವೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಹಸಿರು
ವೃಶ್ಚಿಕ ರಾಶಿ
ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ. ಕೈಗೊಂಡ ಕೆಲಸಗಳಲ್ಲಿ ಅಡಚಣೆಗಳು ಎದುರಾಗುತ್ತವೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು. ಹಣಕಾಸಿನ ವಿಚಾರದಲ್ಲಿ ಆತುರಪಟ್ಟು ಇತರರಿಗೆ ಮಾತು ಕೊಡುವುದು ಒಳ್ಳೆಯದಲ್ಲ. ವೃತ್ತಿ ವ್ಯವಹಾರಗಳಲ್ಲಿ ಸಮಸ್ಯೆಯ ವಾತಾವರಣವಿರುತ್ತದೆ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ನೀಲಿ
ಧನಸ್ಸು ರಾಶಿ
ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಅನಿರೀಕ್ಷಿತವಾಗಿ ಆಪ್ತ ಮಿತ್ರರೊಂದಿಗೆ ವಿವಾದಗಳು ಉಂಟಾಗುತ್ತವೆ. ಪ್ರಮುಖ ವಿಷಯಗಳಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಕುಟುಂಬದಲ್ಲಿ ಕೆಲವರ ಮಾತಿನಿಂದ ಮಾನಸಿಕ ಕಿರಿಕಿರಿಗಳು ಉಂಟಾಗುತ್ತವೆ. ನಿರುದ್ಯೋಗಿಗಳು ಅಧಿಕ ಶ್ರಮದಿಂದ ಅಲ್ಪ ಲಾಭವನ್ನು ಪಡೆಯುತ್ತೀರಿ. ಉದ್ಯೋಗ ವಾತಾವರಣವು ನಿರುತ್ಸಾಹದಾಯಕವಾಗಿರುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕಿತ್ತಲೆ
ಮಕರ ರಾಶಿ
ಬಂಧು ಮಿತ್ರರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ, ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರುತ್ತದೆ. ಮನೆಯಲ್ಲಿ ಶುಭಕಾರ್ಯಗಳನ್ನು ನಿರ್ವಹಿಸುತ್ತೀರಿ. ಪ್ರಮುಖ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಹೊಸ ವಾಹನ ಮತ್ತು ಭೂಮಿ ಲಾಭವನ್ನು ಪಡೆಯುತ್ತೀರಿ. ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಹೂಡಿಕೆಗಳನ್ನು ಮಾಡಿ ಲಾಭವನ್ನು ಗಳಿಸುತ್ತೀರಿ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ಬಿಳಿ
ಕುಂಭ ರಾಶಿ
ಕುಟುಂಬ ಸದಸ್ಯರೊಂದಿಗೆ ಅನಿರೀಕ್ಷಿತವಾಗಿ ವಿವಾದಗಳು ಉಂಟಾಗಲಿವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ. ದೂರ ಪ್ರಯಾಣದ ಸಮಯದಲ್ಲಿ ಶ್ರಮ ಅಧಿಕವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಿಗೆ ಆಹ್ವಾನಗಳು ದೊರೆಯುತ್ತವೆ. ವೃತ್ತಿ ವ್ಯವಹಾರಗಳು ಮಂದಗತಿಯಲ್ಲಿ ಇರುತ್ತವೆ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಕೆಂಪು
ಮೀನ ರಾಶಿ
ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ಮಕ್ಕಳ ಶುಭ ಕಾರ್ಯಗಳಿಗೆ ಹಣ ಖರ್ಚು ಮಾಡುತ್ತೀರಿ. ಸಮಾಜದಲ್ಲಿ ಹಿರಿಯರಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ. ಅಂದುಕೊಂಡ ಕೆಲಸದಲ್ಲಿ ಕಾರ್ಯಸಿದ್ದಿಯಾಗುತ್ತದೆ. ಸುತ್ತಮುತ್ತಲಿನವರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ. ವ್ಯಾಪಾರ ವ್ಯವಹಾರಗಳಲ್ಲಿ ಸಮಸ್ಯೆಗಳು ಇತ್ಯರ್ಥಗೊಳ್ಳುತ್ತವೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ನೇರಳೆ










