ಇಂದಿನ ರಾಶಿ ಭವಿಷ್ಯ ಜೂನ್-17-2024 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ.

ಮೇಷ ರಾಶಿ

Your Image Ad

ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುವುದರಿಂದ ವಿಶ್ರಾಂತಿ ಸಿಗುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವೃತ್ತಿಪರ ವ್ಯವಹಾರಗಳು  ನಿರಾಶಾದಾಯಕವಾಗಿರುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ತುಂಬಾ ಕಳಪೆ ಯಾಗಿರುತ್ತದೆ.

Your Image Ad

ಅದೃಷ್ಟದ ದಿಕ್ಕು:ದಕ್ಷಿಣ

Your Image Ad

ಅದೃಷ್ಟದ ಸಂಖ್ಯೆ:3

ಅದೃಷ್ಟದ ಬಣ್ಣ:ಹಳದಿ

ವೃಷಭ ರಾಶಿ

ಹಠಾತ್ ಆರ್ಥಿಕ ಲಾಭ ಉಂಟಾಗುತ್ತದೆ. ಕೆಲವು ಪ್ರಮುಖ ವಿಷಯಗಳಲ್ಲಿ ಕುಟುಂಬ ಸದಸ್ಯರ ಸಲಹೆಗಳು ಕೂಡಿ ಬರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಪ್ರೋತ್ಸಾಹಗಳು ದೊರೆಯುತ್ತವೆ. ಉದ್ಯೋಗದಲ್ಲಿನ ವಿವಾದಗಳು ಬಗೆಹರಿಯುತ್ತವೆ. ಹೊಸ ವಾಹನ ಖರೀದಿಸುತ್ತೀರಿ. ಕೌಟುಂಬಿಕ ವಾತಾವರಣ ಸಡಗರದಿಂದ ಕೂಡಿರುತ್ತದೆ.

ಅದೃಷ್ಟದ ದಿಕ್ಕು:ಆಗ್ನೇಯ

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ಬೂದು

ಮಿಥುನ ರಾಶಿ

ಮನೆಯಲ್ಲಿ ಮದುವೆಯ ಪ್ರಸ್ತಾಪವಿರುತ್ತದೆ. ಆಲೋಚನೆಗಳನ್ನು ಆಚರಣೆಗೆತರಲಾಗುತ್ತದೆ. ಸಂಬಂಧಿಕರಿಂದ ಶುಭ ಸುದ್ದಿ ದೊರೆಯುತ್ತದೆ. ಹೊಸ  ವಸ್ತು ಮತ್ತು ವಾಹನ ಲಾಭವನ್ನು ಪಡೆಯುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಆತ್ಮ ವಿಶ್ವಾಸದಿಂದ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ. ಉದ್ಯೋಗ ವಾತಾವರಣವು ಅನುಕೂಲಕರವಾಗಿರುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:1

ಅದೃಷ್ಟದ ಬಣ್ಣ:ಹಳದಿ

ಕರ್ಕ ರಾಶಿ

ಸಹೋದರರೊಂದಿಗೆ  ಸ್ಥಿರಾಸ್ತಿ ವಿವಾದವಿರುತ್ತದೆ. ಪ್ರಯಾಣಗಳು ಇದ್ದಕ್ಕಿದ್ದಂತೆ ಮುಂದೂಡಲ್ಪಡುತ್ತವೆ. ದೈವಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಮಕ್ಕಳ ಶಿಕ್ಷಣ ಉದ್ಯೋಗ ವಿಷಯಗಳಲ್ಲಿ ಸ್ವಲ್ಪ ನಿರಾಶೆ ಉಂಟಾಗುತ್ತದೆ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಕೆಂಪು

ಸಿಂಹ ರಾಶಿ

ಕೈಗೊಂಡ ವ್ಯವಹಾರಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಂಬಂಧಿಕರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ  ಒತ್ತಡ ಹೆಚ್ಚಾಗುತ್ತದೆ. ಉದ್ಯೋಗಿಗಳು ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ನಿರುದ್ಯೋಗಿಗಳಿಗೆ ಮತ್ತಷ್ಟು ಕಷ್ಟಕರ ವಾಗಿರುತ್ತದೆ.

ಅದೃಷ್ಟದ ದಿಕ್ಕು:ಆಗ್ನೇಯ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ಹಸಿರು

ಕನ್ಯಾ ರಾಶಿ

ಮಕ್ಕಳಿಗೆ ಹೊಸ ಶೈಕ್ಷಣಿಕ ಅವಕಾಶಗಳು ಸಿಗುತ್ತವೆ. ಕೆಲವು ಕೆಲಸಗಳು ಅಡೆತಡೆಗಳ ನಡುವೆಯೂ ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಹಳೆಯ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ನಷ್ಟವನ್ನು ಸರಿದೂಗಿಸಲಾಗುತ್ತದೆ. ಉದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ಹಸಿರು

ತುಲಾ ರಾಶಿ

ಪ್ರಯಾಣದಲ್ಲಿ ವಾಹನ ತೊಂದರೆ ಉಂಟಾಗುತ್ತದೆ. ನಿಗದಿತ ಸಮಯಕ್ಕೆ  ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಆದಾಯಕ್ಕಿಂತ ಖರ್ಚು  ಹೆಚ್ಚಾಗುತ್ತದೆ. ಬಂಧು ಮಿತ್ರರೊಂದಿಗಿನ ವಿವಾದಗಳಿಂದ ದೂರವಿರುವುದು ಉತ್ತಮ. ವ್ಯಾಪಾರಿಗಳು ಅವಕಾಶಗಳನ್ನು ಕಳೆದು ಕೊಳ್ಳದಂತೆ ನೋಡಿಕೊಳ್ಳಬೇಕು. ಉದ್ಯೋಗಕ್ಕೆ ಸಂಬಂಧಿಸಿ ದಂತೆ ಮೇಲಧಿಕಾರಿಗಳೊಂದಿಗೆ ಅನಿರೀಕ್ಷಿತ ಸಮಸ್ಯೆಗಳಿರುತ್ತವೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:2

ಅದೃಷ್ಟದ ಬಣ್ಣ:ಬಿಳಿ

ವೃಶ್ಚಿಕ ರಾಶಿ

ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ದೈವಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆತ್ತೀರಿ. ಉದ್ಯೋಗಿಗಳು ತಮ್ಮ ಕಠಿಣ ಪರಿಶ್ರಮಕ್ಕಾಗಿ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ಹೊಸ ವಾಹನ ಖರೀದಿಸುತ್ತೀರಿ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಕಿತ್ತಳೆ

ಧನು ರಾಶಿ

ಮನೆಯ ಹೊರಗೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ಕೈಗೊಂಡ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ವಿವಾದಗಳಿರುತ್ತವೆ. ಸೋದರ ಸಂಬಂಧಿಗಳೊಂದಿಗೆ ಆಸ್ತಿವಿವಾದಗಳು ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗ  ವಾತಾವರಣ ನಿರುತ್ಸಾಹ ಗೊಳಿಸುತ್ತದೆ. ದೂರದ ಪ್ರಯಾಣದಲ್ಲಿ ದೈಹಿಕ  ಶ್ರಮ ಹೆಚ್ಚಾಗುತ್ತದೆ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ಬೂದು

ಮಕರ ರಾಶಿ

ವೃತ್ತಿಪರ ವ್ಯವಹಾರಗಳು ಹೆಚ್ಚಿನ ಅಭಿವೃದ್ಧಿಹೊಂದುತ್ತವೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತ -ವೆ. ಬಂಧು ಮಿತ್ರರಿಂದ ಬೆಂಬಲ ದೊರೆಯುತ್ತದೆ. ಸ್ಥಿರಾಸ್ತಿ ವಿವಾದಗಳನ್ನು ರಾಜಿಮಾಡಿ ಕೊಳ್ಳುತ್ತೀರಿ. ಉದ್ಯೋಗಿಗಳು ಸಹೋದ್ಯೋಗಿಗಳ ಸಹಾಯದಿಂದ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ. ಆರ್ಥಿಕವಾಗಿ ಅನುಕೂಲಕರ ವಾತಾವರಣ ಇರುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:2

ಅದೃಷ್ಟದ ಬಣ್ಣ:ಹಸಿರು

ಕುಂಭ ರಾಶಿ

ಯೋಜಿತ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತೀರಿ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಹೆಚ್ಚು ಉತ್ಸಾಹದಿಂದ ಕೂಡಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ.  ಮನೆಯ ಹೊರಗೆ ನಿಮ್ಮ ಮಾತಿಗೆ ಹೆಚ್ಚಾಗುತ್ತದೆ.

ಅದೃಷ್ಟದ ದಿಕ್ಕು:ನೈಋತ್ಯ

ಅದೃಷ್ಟದ ಸಂಖ್ಯೆ:3

ಅದೃಷ್ಟದ ಬಣ್ಣ:ಕಿತ್ತಳೆ

ಮೀನ ರಾಶಿ

ಕುಟುಂಬ ಸದಸ್ಯರ ವರ್ತನೆ ಅಚ್ಚರಿ ಮೂಡಿಸುತ್ತದೆ. ಪ್ರಮುಖ ವಿಷಯಗಳಲ್ಲಿ ಗೊಂದಲ ಉಂಟಾಗುತ್ತದೆ. ದೀರ್ಘಾವಧಿಯ ಸಾಲದ ಒತ್ತಡದ ಹೆಚ್ಚಳದಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ವ್ಯಾಪಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಏರುಪೇರು ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ಬಿಳಿ

Read More Articles