ಇಂದಿನ ರಾಶಿ ಭವಿಷ್ಯ ಮೇ -05-2024 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ.
- Prasad Kambar
- 5 May 2024 , 8:01 AM
- Belagavi
- 496
ಮೇಷ ರಾಶಿ

ಧನ ಸಂಬಂಧಿತ ವ್ಯಾಹಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ಅಲ್ಪ ಅನಾರೋಗ್ಯದ ಸಮಸ್ಯೆಗಳನ್ನು ಉಂಟಾಗುತ್ತವೆ. ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಕುಟುಂಬದ ವಾತಾವರಣ ಸಮಸ್ಯಾತ್ಮಕ ವಾಗಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ, ಕುಟುಂಬ ಸದಸ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ವೃತ್ತಿ ಉದ್ಯೋಗಗಳು, ಮಿಶ್ರಮವಾಗಿ ಸಾಗುತ್ತವೆ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ: ಹಸಿರು
ವೃಷಭ ರಾಶಿ
ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸುತ್ತೀರಿ. ದೀರ್ಘಾವಧಿಯ ಸಾಲಗಳನ್ನು ತೀರಿಸಲಾಗುತ್ತದೆ. ಸಮಾಜದಲ್ಲಿ ಹಿರಿಯರೊಂದಿಗೆ ಹೊಸ ಪರಿಚಯವಾಗುತ್ತದೆ. ಎಲ್ಲವರ್ಗದವರಿಗೂ ಅನುಕೂಲಕರ ವಾತಾವರಣವಿರುತ್ತದೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ: ಹಳದಿ
ಮಿಥುನ ರಾಶಿ
ಇತರರೊಂದಿಗೆ ಆತುರದಿಂದ ಮಾತನಾಡುವುದು ಒಳ್ಳೆಯದಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಸೂಕ್ತತೆ ಹೆಚ್ಚಾಗುತ್ತದೆ. ಹೊಸ ಮನೆ ನಿರ್ಮಾಣ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಸ್ಥಿರ ಆಸ್ತಿಗಳ ಮಾರಾಟಗಳು ಮಂದಗತಿಯಲ್ಲಿ ಸಾಗುತ್ತವೆ. ಸಂಬಂಧಿಕರಿಂದ ಅನಿರೀಕ್ಷಿತ ವಿವಾದಗಳು ಉದ್ಭವಿಸುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಬಣ್ಣ: ನೀಲಿ
ಕರ್ಕ ರಾಶಿ
ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆಯಿಂದ ಮುಕ್ತಿ ದೊರೆಯುತ್ತದೆ. ಬಂಧು ಮಿತ್ರರಿಂದ ವಿವಾದಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸಲಾಗುತ್ತದೆ. ಮನೆಯಲ್ಲಿ ಭೋಜನ ಮನರಂಜನಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ವ್ಯಾಪಾರಗಳು ಹೆಚ್ಚು ಉತ್ಸಾಹದಿಂದ ಕೂಡಿರುತ್ತವೆ. ಮಕ್ಕಳು ಶೈಕ್ಷಣಿಕ ವಿಷಯಗಳತ್ತ ಗಮನ ಹರಿಸುತ್ತಾರೆ.
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ಬಣ್ಣ: ಕೆಂಪು
ಸಿಂಹ ರಾಶಿ
ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಿರುದ್ಯೋಗಿಗಳಿಗೆ ವಾತಾವರಣ ಅನುಕೂಲಕರ ವಾಗಿರುತ್ತದೆ. ವೃತ್ತಿಪರ ವ್ಯವಹಾರಗಳು ವಿಸ್ತಾರಗೊಳ್ಳುತ್ತವೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಬಣ್ಣ: ನೀಲಿ
ಕನ್ಯಾ ರಾಶಿ
ಸಮಾಜ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತೀರಿ. ಅಗತ್ಯಕ್ಕೆ ಹಣ ದೊರೆಯುತ್ತದೆ. ದೀರ್ಘಾವಧಿಯ ಸಾಲಗಳನ್ನು ತೀರಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನಚಲನೆ ಸೂಚನೆಗಳು ಕಂಡುಬರುತ್ತವೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ.
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಬಣ್ಣ: ಬೂದು
ತುಲಾ ರಾಶಿ
ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದ ಹೊಸ ಅವಕಾಶಗಳು ಸಿಗುತ್ತವೆ. ಪ್ರಮುಖ ವ್ಯವಹಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಸ್ನೇಹಿತರೊಂದಿಗಿನ ವಿವಾದಗಳನ್ನು ಪರಿಹರಿಸಿ ಕೊಳ್ಳುತ್ತೀರಿ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ತೊಂದರೆಗಳು ಉಂಟಾಗುತ್ತವೆ.
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ಬಣ್ಣ: ಹಸಿರು
ವೃಶ್ಚಿಕ ರಾಶಿ
ಮನೆಯಲ್ಲಿ ಮಕ್ಕಳ ಮದುವೆಯ ಶುಭ ಕಾರ್ಯದ ಪ್ರಸ್ತಾಪವಿರುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಹಣಕಾಸಿನ ವಿಷಯಗಳು ಕೂಡಿ ಬರುತ್ತವೆ. ವಾಹನಗಳನ್ನು ಚಾಲನೆ ಮಾಡುವಾಗ ಜಾಗರೂಕರಾಗಿರಿ. ವೃತ್ತಿಪರ ಉದ್ಯೋಗಗಳಲ್ಲಿ ಸಕಾರಾತ್ಮಕ ವಾತಾವರಣಗಳು ಇರುತ್ತವೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ
ಧನು ರಾಶಿ
ಸೇವಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ವೃತ್ತಿಪರ ವ್ಯವಹಾರಗಳು ಹೆಚ್ಚಿನ ಉತ್ಸಾಹದಿಂದ ಸಾಗುತ್ತವೆ. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಶುಭ ಸುದ್ದಿ ದೊರೆಯುತ್ತದೆ. ದೂರದ ಪ್ರದೇಶದಿಂದ ಬಂಧು ಮಿತ್ರರ ಆಗಮನ ಸಂತಸ ತರುತ್ತದೆ. ನಿರುದ್ಯೋಗಿಗಳ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಎಲ್ಲಾ ಕಡೆಯಿಂದ ಆದಾಯಬರುತ್ತದೆ.
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ: ಬೂದಿ ಬಣ್ಣ
ಮಕರ ರಾಶಿ
ಹಳೆ ಸಾಲಗಳು ಸ್ವಲ್ಪ ಮಟ್ಟಿಗೆ ಇತ್ಯರ್ಥವಾಗುತ್ತವೆ. ದೂರದ ಬಂಧು ಮಿತ್ರರಿಂದ ದೊರೆಯುವ ಮಾಹಿತಿ ಅಚ್ಚರಿ ಮೂಡಿಸುತ್ತದೆ. ಹಣಕಾಸಿನ ತೊಂದರೆಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ಉತ್ತಮ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಅಜಾಗರೂಕತೆ ಒಳ್ಳೆಯದಲ್ಲ.
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ: ನೀಲಿ
ಕುಂಭ ರಾಶಿ
ಕೆಲವು ವಿಚಾರಗಳಲ್ಲಿ ಬಾಲ್ಯದ ಗೆಳೆಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೈಗೊಂಡ ಕೆಲಗಳಲ್ಲಿ ವಿಳಂಬ ಉಂಟಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಹೊಸ ಗೃಹೋಪಯೋಗಿ ವಾಹನ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಉದ್ಯೋಗ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಬಣ್ಣ: ಬೂದು
ಮೀನ ರಾಶಿ
ಆತ್ಮೀಯರೊಂದಿಗೆ ಮನೋರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಹಿಂದಿನ ಕೆಲವು ಘಟನೆಗಳನ್ನು ನೆನಪಿಸಿಕೊಂಡಾಗ ಬೇಸರವಾಗುತ್ತದೆ. ಮನೆಯ ಹೊರಗೆ ಅನುಕೂಲತೆ ಹೆಚ್ಚಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಹಣ ವ್ಯಯವಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ಪಡೆಯುತ್ತೀರಿ. ಸಹೋದರರೊಂದಿಗೆ ದೃಢವಾದ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ.
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ: ಕಂದು










