ಇಂದಿನ ರಾಶಿ ಭವಿಷ್ಯ ನವೆಂಬರ್ 03-2023 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ
- Prasad Kambar
- 14 Jan 2024 , 11:11 PM
- Belagavi
- 402
ಮೇಷ ರಾಶಿ
ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಸ್ವಲ್ಪ ಗೊಂದಲಗಳು ಉಂಟಾಗುತ್ತವೆ. ಕುಟುಂಬದ ಸದಸ್ಯರ ವರ್ತನೆಯಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರ್ಥಿಕ ಸ್ಥಿರತೆ ಇರುವುದಿಲ್ಲ. ವೃತ್ತಿ ಮತ್ತು ಉದ್ಯೋಗದ ವಿಚಾರದಲ್ಲಿ ಗೊಂದಲಮಯ ಪರಿಸ್ಥಿತಿಗಳು ಉಂಟಾಗುತ್ತವೆ. ವ್ಯಾಪಾರಗಳು ನಿಧಾನವಾಗುತ್ತವೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು

ವೃಷಭ ರಾಶಿ
ಸಹೋದರರೊಂದಿಗಿನ ಸ್ಥಿರಾಸ್ತಿ ವಿವಾದಗಳನ್ನು ಪರಿಹರಿಸಿ ಕೊಳ್ಳುತ್ತೀರಿ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಯೋಜಿತ ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ದೂರದ ಬಂಧುಗಳಿಂದ ಶುಭವಾರ್ತೆಗಳು ದೊರೆಯುತ್ತವೆ. ವ್ಯಾಪಾರಗಳಲ್ಲಿ ಪಾಲುದಾರರೊಂದಿಗಿನ ಸಮಸ್ಯೆಗಳನ್ನು ರಾಜಿಮಾಡಿಕೊಳ್ಳುತ್ತೀರಿ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ಹಸಿರು
ಮಿಥುನ ರಾಶಿ
ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಕೈಗೊಂಡ ಕೆಲಸಗಳಲ್ಲಿ ಎಷ್ಟೇ ಕಷ್ಟಪಟ್ಟರೂ ಫಲಿತಾಂಶ ಸೀಮಿತವಾಗಿರುತ್ತದೆ. ಕೆಲವು ವ್ಯವಹಾರಗಳಲ್ಲಿ ಸಂಗಾತಿಯ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ವೃತ್ತಿ ಪರ ವ್ಯಾಪಾರಗಳಲ್ಲಿ ಅಲ್ಪ ಲಾಭವನ್ನು ಪಡೆಯುತ್ತೀರಿ. ಉದ್ಯೋಗದ ವಿಚಾರದಲ್ಲಿ ಆತುರ ಒಳ್ಳೆಯದಲ್ಲ.
ಅದೃಷ್ಟದ ದಿಕ್ಕು:ವಾಯುವ್ಯ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಹಳದಿ
ಕಟಕ ರಾಶಿ
ಪ್ರಮುಖ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು, ಲಾಭವನ್ನು ಪಡೆಯುತ್ತೀರಿ. ದೂರ ಪ್ರಯಾಣಗಳು ಕೂಡಿ ಬರುತ್ತವೆ. ನಿರುದ್ಯೋಗಿಗಳಿಗೆ ಬಹುನಿರೀಕ್ಷಿತ ಅವಕಾಶಗಳು ದೊರೆಯುತ್ತವೆ. ಕೈಗೊಂಡ ಕೆಲಸಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಕಾರ್ಯವೈಖರಿಯಿಂದ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಹಳದಿ
ಸಿಂಹ ರಾಶಿ
ಪ್ರಮುಖ ಕೆಲಸಗಳು ಖರ್ಚು ಮತ್ತು ಶ್ರಮದಿಂದಲೂ ಪೂರ್ಣಗೊಳ್ಳುವುದಿಲ್ಲ. ಆರ್ಥಿಕ ಒತ್ತಡ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಗೊಂದಲಮಯ ಪರಿಸ್ಥಿಗಳಿರುತ್ತವೆ. ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಬಿಳಿ
ಕನ್ಯಾ ರಾಶಿ
ಹಣಕಾಸಿನ ವ್ಯವಹಾರಗಳು ಅನುಕೂಲಕರವಾಗಿರುತ್ತವೆ . ವೃತ್ತಿಪರ ಉದ್ಯೋಗಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತೀರಿ. ಕೈಗೊಂಡ ಕೆಲಸಗಳಲ್ಲಿ ವಿಳಂಬ ಉಂಟಾದರೂ ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಸ್ಥಿರಾಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು ಆಗುತ್ತವೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಿ ಲಾಭವನ್ನು ಪಡೆಯುತ್ತೀರಿ. ದೂರ ಪ್ರಯಾಣಗಳು ಲಾಭದಾಯಕವಾಗಿರುತ್ತವೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು
ತುಲಾ ರಾಶಿ
ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳ ಬೆಂಬಲ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಪ್ರಯಾಣದಲ್ಲಿ ಆತುರ ಒಳ್ಳೆಯದಲ್ಲ. ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವ್ಯಾಪಾರದಲ್ಲಿ ನಿರೀಕ್ಷೆಗಳು ಈಡೇರುತ್ತವೆ. ಆರ್ಥಿಕ ಅನುಕೂಲತೆ ಉಂಟಾಗುತ್ತದೆ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಹಳದಿ
ವೃಶ್ಚಿಕ ರಾಶಿ
ಕುಟುಂಬದ ಮುಖ್ಯಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ದೈವಿಕ ಸೇವಾ ಕಾರ್ಯಕ್ರಮಗಳನ್ನು ನೆರವೇರಿಸುತ್ತೀರಿ. ವೃತ್ತಿ, ಉದ್ಯೋಗಗಳು ನಿಧಾನವಾಗಿ ಸಾಗುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ, ಆರ್ಥಿಕವಾಗಿ ಏರುಳಿತಗಳು ಇರುತ್ತವೆ. ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುವುದಿಲ್ಲ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಕಂದು
ಧನಸ್ಸು ರಾಶಿ
ವಾಹನ ಪ್ರಯಾಣದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಅನಿವಾರ್ಯವಾಗಿ ಇತರರೊಂದಿಗೆ ಘರ್ಷಣೆಗಳು ಉಂಟಾಗುತ್ತವೆ. ಸಾಲದ ಸಮಸ್ಯೆಗಳು ನೋವುಂಟುಮಾಡುತ್ತವೆ. ಉದ್ಯೋಗಿಗಳಿಗೆ ಹಠಾತ್ ಸ್ಥಾನ ಚಲನೆ ಸೂಚನೆಗಳಿವೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಒಳ್ಳೆಯದು ಕೈಗೊಂಡ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಬಿಳಿ
ಮಕರ ರಾಶಿ
ಕುಟುಂಬ ಸದಸ್ಯರ ನೆರವಿನಿಂದ ಕೆಲವು ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ದೀರ್ಘಕಾಲದ ಸಾಲಗಳನ್ನು ನಿಭಾಯಿಸಲು ಆತ್ಮೀಯ ಸ್ನೇಹಿತರ ಸಹಾಯ ದೊರೆಯುತ್ತದೆ. ವೃತ್ತಿ ಪರ ವ್ಯಾಪಾರಗಳು ಅಲ್ಪ ಲಾಭ ಪಡೆಯುತ್ತವೆ. ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ಹೊರೆಯಿಂದ ಮುಕ್ತಿ ದೊರೆಯುತ್ತದೆ. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು
ಕುಂಭ ರಾಶಿ
ಮಕ್ಕಳ ಉದ್ಯೋಗ,ವಿವಾಹ ಪ್ರಯತ್ನಗಳು ಫಲ ನೀಡುತ್ತವೆ. ಪ್ರಮುಖ ವ್ಯವಹಾರಗಳು ಅನುಕೂಲಕರವಾಗಿ ಸಾಗುತ್ತವೆ, ಕುಟುಂಬ ಸದಸ್ಯರೊಂದಿಗಿನ ಘರ್ಷಣೆಗಳು ಇತ್ಯರ್ಥವಾಗುತ್ತವೆ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಮದುವೆಯ ಶುಭ ಕಾರ್ಯಗಳಿಗೆ ಆಹ್ವಾನಗಳು ಬರುತ್ತವೆ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಬೂದು
ಮೀನ ರಾಶಿ
ಇತರರೊಂದಿಗೆ ಜಾಗರೂಕತೆಯಿಂದ ವ್ಯವಹರಿಸಬೇಕು. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳು ಉಂಟಾಗುತ್ತವೆ. ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗುತ್ತದೆ .ಕುಟುಂಬದ ಹಿರಿಯರ ಸಲಹೆಯಿಂದ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತೀರಿ . ಪ್ರಮುಖ ವ್ಯವಹಾರಗಳು ಅನುಕೂಲಕರವಾಗಿ ಸಾಗುತ್ತವೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ನೀಲಿ










