ನಾಳೆ 25ನೇಯ ವರ್ಷದ ರಾಯಣ್ಣನ ಪವಿತ್ರ ಜ್ಯೋತಿ ಯಾತ್ರೆ

ಬೈಲಹೊಂಗಲ : ಅಪ್ರತಿಮ ದೇಶ ಭಕ್ತ, ಸಂಗೊಳ್ಳಿ ರಾಯಣ್ಣನ 193ನೇ ಪುಣ್ಯ ತಿಥಿ ಅಂಗವಾಗಿ ಅಖಿಲ ಕರ್ನಾಟಕ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ವತಿಯಿಂದ ದೇಶಾಭಿಮಾನದ ರಾಯಣ್ಣನ 25ನೇ ವರ್ಷದ ಪವಿತ್ರ ಜ್ಯೋತಿ ಯಾತ್ರೆ ನಾಳೆ ದಿ. 26 ರಂದು ಜರುಗಲಿದ್ದು, ತಾವೆಲ್ಲರೂ ತಮ್ಮ ಬಂಧು ಮಿತ್ರರೊಂದಿಗೆ ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.  

promotions

ಶುಕ್ರವಾರ ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಇಂಚಲ ಕ್ರಾಸನಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ನಂದಗಡಕ್ಕೆ ತೆರಳಿ ರಾಯಣ್ಣನ ಸಮಾಧಿಗೆ ಪೂಜೆ ಸಲ್ಲಿಸಲಾಗುವುದು. ಅಲ್ಲಿಂದ ಜ್ಯೋತಿ ಯಾತ್ರೆ ಪ್ರಾರಂಭವಾಗಿ ಸಾಯಂಕಾಲ 4.30ಕ್ಕೆ ಬೈಲಹೊಂಗಲ ಬೈಪಾಸ್

promotions

ರಸ್ತೆಯಲ್ಲಿರುವ ರಾಣಿ ಚೆನ್ನಮ್ಮಾಜಿ ವೃತ್ತಕ್ಕೆ ಆಗಮಿಸುವುದು. ಅಲ್ಲಿಂದ ಮೆರವಣಿಗೆ ಮುಖಾಂತರ ತೆರಳಿ ವೀರ ಮಾತೆ ಚೆನ್ನಮ್ಮಾಜಿ ಸಮಾಧಿಗೆ ಪವಿತ್ರ ಜ್ಯೋತಿಯನ್ನು ಅರ್ಪಣೆ ಮಾಡಲಾಗುವುದು, ದೇಶಭಕ್ತರಿಗೆ ಗೌರವ ಸಲ್ಲಿಸುವ ಈ ದೇಶಭಕ್ತಿಯ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ತಿಳಿಸಿದ್ದಾರೆ.

ವರದಿ : ರವಿಕಿರಣ್  ಯಾತಗೇರಿ

Read More Articles