ನಾಳೆ ವಿಕಲಚೇತನರ ದಿನಾಚರಣೆ : ಮನ್ನಿಕೆರಿ
- shivaraj bandigi
- 14 Jan 2024 , 10:48 PM
- Belagavi
- 401
ಮೂಡಲಗಿ: ಸನ್ ೨೦೨೩-೨೪ ನೇ ಸಾಲಿನ ವಿಶ್ವ ವಿಕಲಚೇತನ ದಿನಾಚರಣೆಯನ್ನು ತಾಲೂಕಾ ಹಂತದಲ್ಲಿ ಡಿ. ೪ ಸೋಮವಾರ ರಂದು ಮುಂಜಾನೆ ೧೦-೦೦ ಗಂಟೆಗೆ ಚೈತನ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮೂಡಲಗಿ (ನಾಗನೂರ)ದಲ್ಲಿ ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೆರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ತಾಲೂಕಾ ಹಂತದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೋ ನಂ :೯೭೪೧೨೬೮೨೨೬ ಸಂಪರ್ಕಿಸಲು ಕೋರಲಾಗಿದೆ.











