ಡಿವೈಡರ್ ಮೇಲೆ ಮಳಿಗೆ ನಿರ್ಮಾಣ ಕ್ರಮಕ್ಕೆ ಟೋಪಣ್ಣವರ ಒತ್ತಾಯ
- shivaraj bandigi
- 13 Feb 2024 , 5:10 PM
- Belagavi
- 525
ಬೆಳಗಾವಿ

ಖಾಸಭಾಗ ಬಸವೇಶ್ವರ ವೃತ್ತದಿಂದ ಶಹಾಪುರ ನಾಥಪೈ ವೃತ್ತದವರೆಗೆ ರಸ್ತೆಯ ಡಿವೈಡರ್ ಮೇಲೆ ಮಳಿಗೆ ನಿರ್ಮಾಣ ಮಾಡಿರುವುದು ಕಾನೂನು ಬದ್ಧವಾಗಿದ್ದರೇ ಅವುಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ರಾಜಕುಮಾರ ಟೋಪಣ್ಣವರ ಮಂಗಳವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಖಾಸಭಾಗ ಬಸವೇಶ್ವರ ವೃತ್ತದಿಂದ ಶಹಾಪುರ ನಾಥಪೈ ವೃತ್ತದವರೆಗೆ ರಸ್ತೆಯ ಡಿವೈಡರ್ ಮೇಲೆ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ತರಕಾರಿ ಮಾರುಕಟ್ಟೆಯ ಮಳಿಗೆ ನಿರ್ಮಿಸಿದ್ದು ಬೆಳಗಾವಿಯಲ್ಲಿಯೇ ಮೊದಲು. ಇದು ಕಾನೂನು ಬಾಹಿರವಾಗಿ ನಿರ್ಮಾಣ ಮಾಡಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ದೂರಿದ್ದಾರೆ.
ಖಾಸಭಾಗ ಬಸವೇಶ್ವರದಿಂದ ಶಹಾಪುರ ನಾಥಪೈ ವೃತ್ತದವರೆಗೆ ರಸ್ತೆಯ ಡಿವೈಡರ್ ಮೇಲೆಯೇ ಸ್ಥಳೀಯ ಶಾಸಕರ ಕನಸಿನ ಯೋಜನೆ ಎಂದು ನಿರ್ಮಾಣ ಮಾಡಿ ವರ್ಷ ಕಳೆದಿದೆ. ಆದರೆ ಇಲ್ಲಿಯವರೆಗೂ ಹಂಚಿಕೆಯಾಗಿಲ್ಲ. ಇದು ಕಾನೂನು ಬದ್ಧವಾಗಿದ್ದರೆ ಆ ಮಳಿಗೆಯನ್ನು ತತಕ್ಷಣ ಫಲಾನುಭವಿಗಳಿಗೆ ಹಂಚಿಕೆ ಮಾಡಿ. ಕಾನೂನು ಬಾಹಿರವಾಗಿದ್ದರೆ ಅವುಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.










