ಹಿಂದೂ ಮಹಿಳೆಯರು ಧೈರ್ಯದಿಂದ ಇರಲು ತ್ರಿಶೂಲ ಧಿಕ್ಷೆ ! ಪ್ರಮೋದ ಮುತಾಲಿಕ
- shivaraj bandigi
- 22 Jun 2024 , 6:21 PM
- Belagavi
- 11328
ಬೆಳಗಾವಿ ಲವ್ ಜೀಹಾದ್ ಗೆ ಸಂಬಂಧ ನಾಲ್ಕೈದು ದಿನದಲ್ಲಿ ಐದೂನೂರಕ್ಕೂ ಹೆಚ್ಚು ಕರೆ ಬಂದಿದ್ದಾವೆ ಎಂದು ಪ್ರಮೋದ ಮುತಾಲಿಕ ಹೇಳಿದರು.


ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, . ಹಿಂದೂ ಮಹಿಳೆಯರ ರಕ್ಷಣೆಯ ನಿಟ್ಟಿನಲ್ಲಿ ಹಾಗೂ ಲವ ಜಿಹಾದ ತಡೆಯುವ ನಿಟ್ಟಿನಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ವಿದೇಶದಿಂದ, ಪಾಕಿಸ್ತಾನ, ಅಬರಸ್ತಾನದಿಂದ ಬಾಂಬ್ ಬೆದರಿಕೆ ಹಾಕಿದ್ದಾರೆ. 70 ಕರೆಗಳು ಮುಸ್ಲಿಂರ ದೌರ್ಜನ್ಯದಿಂದ ಒಳಗಾದ ಸಂತ್ರಸ್ತ ಹಿಂದೂ ಮಹಿಳೆಯರು ಕರೆ ಮಾಡಿ ರಕ್ಷಣೆ ಮಾಡುವಂತೆ ಕೇಳಿದ್ದಾರೆ ಎಂದರು.
ನೇಹಾ ಪ್ರಕರಣದ ನಂತರ ಹುಬ್ಬಳ್ಳಿಯಲ್ಲಿ ಐದು ಘಟನೆಗಳು ನಡೆದವು. ಆದ್ದರಿಂದ ಇದನ್ನು ನಾವು ಇದನ್ನು ಗಂಭೀರವಾಗಿ ಪರಿಗಣಿಸಿ ಹಿಂದೂ ಮಹಿಳೆಯರ ರಕ್ಷಣೆಯಾಗಬೇಕು ಎಂದು ಹುಬ್ಬಳ್ಳಿಯಲ್ಲಿಯೇ ಸಹಾಯವಾಣಿ ಆರಂಭಿಸಿದ್ದೇವೆ ಎಂದರು.
ಹಿಂದೂ ಮಹಿಳೆಯರು ದೈರ್ಯವಾಗಿ ತಿರುಗಾಡಲು ಧಾರವಾಡದಲ್ಲಿ 50 ಮಹಿಳೆಯರಿಗೆ ತ್ರಿಶೂಲ್ ಧೀಕ್ಷೆ ನೀಡಲಾಗಿದೆ. ಮಾನಸಿಕವಾಗಿ ದೈರ್ಯ ನೀಡುವ ಕೆಲಸ ಶ್ರೀರಾಮ ಸೇನೆ ಮಾಡಿದೆ. ಕರ್ನಾಟಕದಲ್ಲಿ ನೂರು ಕಡೆ ತ್ರಿಶೂಲ ಧೀಕ್ಷೆ ಕೊಡುವುದರ ಮೂಲಕ ಹಿಂದೂ ಹೆಣ್ಣುಮಕ್ಕಳ ರಕ್ಷಣೆ ಮಾಡುವುದು ನಮ್ಮ ಕೆಲಸವಾಗಿದೆ ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪಿ ದರ್ಶನ, ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳಿಗೆ ಪೊಲೀಸರು ಪೂರಕ ಸಾಕ್ಷಿ ಸಂಗ್ರಹಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ದರ್ಶನನ ಪತ್ನಿ ವಕೀಲರ ಕಡೆ ಹೋಗುವ ಬದಲು ರೇಣುಕಾಸ್ವಾಮಿ ಪತ್ನಿಯ ಮನೆಗೆ ಹೋಗಿ ಆರ್ಥಿಕ ಸಹಾಯ ಮಾಡಲಿ. ಅವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ, ಪ್ರಕರಣ ಮುಚ್ಚಿಹಾಕಲು ಕೆಲ ಸಚಿವರು ಹುನ್ನಾರ ನಡೆಸಿದ್ದು, ಪೊಲೀಸರ ಮೇಲೆ ಜನರ ವಿಶ್ವಾಸ ಇದೆ. ಅದನ್ನು ಉಳಿಸಿಕೊಂಡು ಯಾರ ಮಾತು ಕೇಳದೆ ಪ್ರಾಮಾಣಿಕವಾಗಿ ತನಿಖೆ ಕೈಕೊಂಡು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿ ಎಂದರಲ್ಲದೆ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಅನ್ನಾಸಾಹೇಬ ಜೊಲ್ಲೆ ತಮ್ಮ ಸೊಕ್ಕಿನಿಂದ ಸೋತಿದ್ದಾರೆ. ಜನರ ಪ್ರೀತಿ ವಿಶ್ವಾಸ ಗಳಿಸುವದು ಬಹುಮುಖ್ಯ ಎಂದರು.










