ಸಾಧುನವರ ಕುಟುಂಬದ ವಿರುದ್ಧ ಹರಿಹಾಯ್ದ ತುರುಮರಿ

ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಮಾಡಲಾಗುತ್ತಿರುವ ಬೈಲಹೊಂಗಲ ಪಟ್ಟಣದಲ್ಲಿರುವ ಮೂರುಸಾವಿರಮಠ (ತಿಪ್ಪಿಮಠ)ಕ್ಕೆ ಶ್ರೀ ಮಠಕ್ಕೆ ಭಕ್ತರ ಹಾಗೂ ಈ ನಾಡಿನ ಜನರ ಅಭಿಲಾಷೆಯಂತೆ ಈಗೀನ ಪೀಠಾಧಿಕಾರಿಯನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಶ್ರೀಮಠದ  ಭಕ್ತರಾದ ಶಿವಬಸಪ್ಪ ತುರಮರಿ ಆಗ್ರಹಿಸಿದ್ದಾರೆ.

promotions

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಶ್ರೀ ಗಂಗಾಧರ ಸ್ವಾಮೀಜಿ ಅವರು ಮೂರುಸಾವಿರಮಠದ ಪೀಠಾಧಿಕಾರಿಗಳಾಗಿ ಹಾಗೂ ಶ್ರೀ ನೀಲಕಂಟೇಶ್ವರ ವಿದ್ಯಾವರ್ದಕ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರಿಂದ ಅವರು, ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದಾರೆ. ಇದರ ಪರಿಣಾಮವಾಗಿ ಮೂರುಸಾವಿರ ಬೈಲಹೊಂಗಲ ನಾಡಿನಲ್ಲಿ ಉತ್ತಮ ಹೆಸರನ್ನು ಪಡೆದುಕೊಳ್ಳುವುದರ ಜತೆಗೆ ವಿವಿಧ ಕಡೆಗಳಲ್ಲಿ ೨೫ ಕಾರ್ಯನಿರತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು.

promotions

೨೦೦೯ರಲ್ಲಿ ಶ್ರೀ. ಗಂಗಾಧರ ಸ್ವಾಮೀಜಿ ಅವರು ಅನಾರೋಗ್ಯದಿಂದ ಲಿಂಗೈಕ್ಯರಾದ ಬಳಿಕ ಮೂರುಸಾವಿರ ಮಠಕ್ಕೆ ಹೊಸ ಪೀಠಾಧಿಪತಿಗಳನ್ನು ನೇಮಕ ಮಾಡುವವರೆ ಹಾಗೂ ಸಂಸ್ಥೆಯ ಆಡಳಿಯ ವ್ಯವಸ್ಥೆ ಸರಾಗವಾಗಿ ನಡೆಯುವ ಉದ್ದೇಶದಿಂದ ಹಾಗೂ ತಾತ್ಕಾಲಿಕವಾಗಿ ಗುರು, ಹಿರಿಯರ ಸಮ್ಮುಖದಲ್ಲಿ ಚಂದ್ರಶೇಖರ ಸಾಧೂನವರ ಹಾಗೂ ಆಡಳಿತ ಮಂಡಳಿಯವರಿಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಾಧೂನವರ ಇತ್ತೀಚಿಗೆ ಸಂಸ್ಥೆಯ ಕಾರ್ಯಾಧ್ಯಕ್ಷನೆಂದು ಹೇಳಿಕೊಂಡು ಆಡಳಿತ ನಡೆಸುತ್ತಿರುವುದು ಹಾಗೂ ಮೌಖಿಕ ಒಪ್ಪಂದದಂತೆ ಪೀಠಾಧಿಕಾರಿಗಳಿಗೆ ಆಡಳಿತ ಮಂಡಳಿಯ ಅಧಿಕಾರ ಹಸ್ತಾಂತರಿಸದಿರುವುದು ವಿಷಾಧದ ಜತೆಗೆ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿವೆ ಎಂದರು.

ಮೂರುಸಾವಿರ ಮಠದ ಆಶ್ರದಯಲ್ಲಿ ನಡೆಸಲಾಗುತ್ತಿರುವ ಶ್ರೀ ನೀಲಕಂಠೇಶ್ವರ ವಿದ್ಯಾವರ್ದಕ ಸಂಸ್ಥೆಯ ಆಡಳಿತ ಚುಕ್ಕಾಣಿ ಸಿಕ್ಕ ಬಳಿಕ ಸಾಧೂನವರ ೨೫ ಕಾರ್ಯನಿರತ ಶಿಕ್ಷಣ ಸಂಸ್ಥೆಗಳಲ್ಲಿ ಇದೀಗ ಕೇವಲ ೧೮ಕ್ಕೆ ಕುಸಿತವಾಗಿದೆ. ಜತೆಗೆ ಸಾಧೂನವರ ಒಡೆತನದಲ್ಲಿಯೇ ಶಿಕ್ಷಣ ಕೇಂದ್ರಗಳು ತಲೆ ಎತ್ತಿವೆ. ೨೦೧೫ರಲ್ಲಿ ಶ್ರೀ ಮಠಕ್ಕೆ ಪೀಠಾಧಿಕಾರಿಯನ್ನಾಗಿ ಶ್ರೀ ಪ್ರಭುನೀಲಕಂಠ ಸ್ವಾಮೀಜಿ ಅವರನ್ನು ನಾಡಿನ ಭಕ್ತರೆಲ್ಲ ಸೇರಿ ಅಧಿಕಾರವನ್ನು ವಹಿಸಿಕೊಟ್ಟಿದ್ದಾರೆ.

ಆದರೆ ಪೀಠಾಧಿಕಾರಿಗಳಿಗೆ ಸಂಸ್ಥೆಯ ಅಧಿಕಾರವನ್ನು ಹಸ್ತಾಂತರಿಸದೇ ಚಂದ್ರಶೇಖರ ಸಾಧೂನವರ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಸಂಸ್ಥೆಯ ನಿರ್ದೇಶಕರೆ ಕಾರ್ಯಾಧ್ಯಕ್ಷರ ಕಾರ್ಯ ಚಟುವಟಿಕೆಗಳ ಮೇಲೆ ಗಂಭೀರ ಹಾಗೂ ಗುರುತರ ಆರೋಪವನ್ನು ಮಾಡಿ ವಿಚಾರಣೆ ನಡೆಸುವಂತೆ ನೀಡಿದ ದೂರಿನನ್ವಯ ಸರ್ಕಾರ ಮೂರುಸಾವಿರಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದು, ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.


ಅಲ್ಲದೇ ಕಾರ್ಯಾಧ್ಯಕ್ಷನೆಂದು ಹೇಳಿಕೊಂಡಿರುವ ಚಂದ್ರಶೇಖರ ಸಾಧೂನವರ, ತಮಗೆ ಬೇಕಾದವರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದರು. ಈ ಬಗ್ಗೆ ನಾಯ್ಯಾಲಯದಲ್ಲಿ ಪ್ರಶ್ನಿಸಿದ ಸಂದರ್ಭದಲ್ಲಿ ಹೊಸದಾಗಿ ಸದಸ್ಯತ್ವ ಸಂಶಯಾಶಸ್ಪದವಾಗಿದೆ ಮಣಗಂಡು ಅ.೨೦ ರಂದು ಅಧಿಸೂಚನೆ ಹೊರಡಿಸಲಾಗಿದ್ದ ಶ್ರೀ ನೀಲಕಂಠೇಶ್ವರ ಆಡಳಿತ ಮಂಡಳಿಯ ಚುನಾವಣೆಯನ್ನು ರದ್ದುಪಡಿಸುವದರೆ ಜತೆಗೆ ಮುಂದೂಡಿದೆ.

ಈ ಸಂಸ್ಥೆಯ ಕಾರ್ಯಚಟುವಟಿಕೆಗಳ ಮೇಲೆ ವಿಚಾರಣೆ ನಡೆದು ಸರ್ಕಾರ ಕಾರ್ಯಾಧ್ಯಕ್ಷ ಹಾಗೂ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಶ್ರೀ ಮಠದ ಪೀಠಾಧಿಕಾರಿ ಪೂರ್ವಾನುಮತಿ ಇಲ್ಲದೆ ಕಾರ್ಯಾಧ್ಯಕ್ಷನೆಂದು ಹಾಗೂ ಸ್ವಾಮೀಜಿ ಅವರ ಭಾವಚಿತ್ರ ಹಾಕಿಕೊಂಡು ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಪ್ರಚಾರಕ್ಕೂ ಹಾಗೂ ಶ್ರೀ ಮಠಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ಇದು ಬೈಲಹೊಂಗಲ ನಾಡಿನ ಜನರ ಹಾಗೂ ಭಕ್ತರ ದಾರಿ ತಪ್ಪಿಸಲು ವ್ಯವಸ್ಥಿತವಾಗಿ ಮಾಡಲಾಗುತ್ತಿರುವ ಹುನ್ನಾರ ಎಂದರು. ಆದ್ದರಿಂದ ಸ್ವಾಮೀಜಿ ಅವರ ಪೋಟೊ ಬಳಕೆ ಮಾಡಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿರುವ ಪಟ್ಟಭದ್ರರರನ್ನು ಯಾವುದೇ ಕಾರಣಕ್ಕೂ ನಂಬಬೇಡಿ.

ಜತೆಗೆ ಬೈಲಹೊಂಗಲ ನಾಡಿನ ಜನರ ಹಾಗೂ ಭಕ್ತರ ಅಭಿಲಾಷೆಯಂತೆ ಶ್ರೀಮಠದ ಆಡಳಿತ ಜವಾಬ್ದಾರಿಯನ್ನು ಈಗೀನ ಪೀಠಾಧಿಕಾರಿ ಶ್ರೀ ಪ್ರಭು ನೀಲಕಂಠ ಸ್ವಾಮೀಜಿ ಅವರಿಗೆ ನೀಡಿದಲ್ಲಿ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವುದರ ಜತೆಗೆ ಸಂಸ್ಥೆಯ ಏಳ್ಗೆಗೆ ಆಗಲಿದೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಅಕ್ಕಿ, ಶೇಖಪ್ಪಾ ಜತ್ತಿ, ಕಾಶಪ್ಪ ನಾಯ್ಕರ ಉಪಸ್ಥಿತರಿದ್ದರು.

Read More Articles