ರಸ್ತೆ ಅಪಘಾತದಲ್ಲಿ ಇಬ್ಬರಿಗೆ ಗಾಯ;15 ಲೀಟರ್ ಸೆಂದಿ ಪತ್ತೆ
- shivaraj B
- 21 Sep 2024 , 12:16 PM
- Athani
- 1129
ಅಥಣಿ :ಪಟ್ಟಣದ ಹೊರವಲಯದ ಚಮಕೇರಿ ಕ್ರಾಸ್ ಬಳಿ ಬೈಕ್ ಹಾಗೂ ಕಾರ್ ಮದ್ಯ ಅಪಘಾತ ಸಂಭವಿಸಿದ್ದು ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಬೈಕ್ ಸವಾರರು ಹಾರೋಗೇರಿ ಮೂಲದವರು ಎಂದು ತಿಳಿದುಬಂದಿದ್ದು ಅಪಘಾತ ಸ್ಥಳದಲ್ಲಿ 15 ಲೀಟರ್ ಸೆಂದಿ ಪತ್ತೆಯಾಗಿದೆ. ಮಹಾರಾಷ್ಟ್ರದ ಗೂಗವಾಡ ಗ್ರಾಮದ ಕರ್ನಾಟಕ ತೀರ ಪ್ರದೇಶದಲ್ಲಿ ಬಹಿರಂಗವಾಗಿಯೆ ಸೆಂದಿ ಮಾರಾಟ ನಡೆಯುತ್ತಿದೆ.

ಕರ್ನಾಟಕದ ಯುವಕರು ಸೆಂದಿ ಹಾಗೂ ಮಟಕಾ ದಂಧೆಗೆ ಬಲಿಯಾಗುತ್ತಿದ್ದೂ ಪೊಲೀಸ್ ಇಲಾಖೆ ನಿರ್ಲಕ್ಷ ತೋರಿರುವ ಆರೋಪ ಕೇಳಿಬಂದಿದೆ. ರಾಜಾರೋಷವಾಗಿ ಸೆಂದಿ ಸಾಗಾಟ ವಾಗುತ್ತಿರುವುದು ದಿನನಿತ್ಯ ನಡೆಯುತ್ತಲೆ ಇರುವ ಕಾರಣ ಸ್ಥಳೀಯ ಪೊಲೀಸ್ ಇಲಾಖೆ ಇಂತಹ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ : ರಾಹುಲ್ ಮಾದರ










