ಕರ್ನಾಟಕ ವೈದ್ಯಕೀಯ ಮಂಡಳಿ ರದ್ದು ಪಡಿಸುವಂತೆ ಉಮೇಶ ಒತ್ತಾಯ


ಬೆಳಗಾವಿ :ಕರ್ನಾಟಕ ವೈದ್ಯಕೀಯ ಮಂಡಳಿಯನ್ನು ರದ್ದುಗೊಳಿಸಬೇಕೆಂದು  ಉಮೇಶ ಮಲಕ್ಕಣ್ಣವರ ಒತ್ತಾಯಿಸಿದರು.

promotions

ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ವೈದ್ಯಕೀಯ ಮಂಡಳಿಯು ತನ್ನದೆ ಆದ ನ್ಯಾಯಾಲಯ ವ್ಯವಸ್ಥೆಯನ್ನು ಹೊಂದಿದ್ದು ತನ್ನದೆ ಆದ ಪ್ರಕ್ರಿಯೆಯಿಂದ ವೃತ್ತಿನಿರತ ವೈದ್ಯರಿಂದ ಜನರಿಗೆ ಅನ್ಯಾಯವಾದಾಗ ನ್ಯಾಯ ಕೊಡಿಸಲು ಈ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ.

promotions

ಆದರೆ ಕರ್ನಾಟಕ ವೈದ್ಯಕೀಯ ಮಂಡಳಿಯು ಸಿವಿಲ್ ಪ್ರಕ್ರೀಯೆ ಅನುಸರಿಸುತ್ತಿರುವದರಿಂದ ವೈದ್ಯರು ಕಿಮಿನಲ್ ತಪ್ಪನ್ನು ಮಾಡಿದ್ದಲ್ಲಿ: ಕರ್ನಾಟಕ ವೈದ್ಯಕೀಯ ಮಂಡಳಿಯು ವೈದ್ಯರಿಗೆ ಯಾವದೇ ಶಿಕ್ಷೆ ನೀಡಲು ಅಧಿಕಾರ ಇರುವದಿಲ್ಲ ಎಂದರು.

ವೈದ್ಯರು ಕ್ರಿಮಿನಲ್ ತಪ್ಪನ್ನು ಮಾಡಿದ್ದಲ್ಲಿ ಕರ್ನಾಟಕ ವೈದ್ಯಕೀಯ ಮಂಡಳಿಗೆ ದೂರು ದಾಖಲಿಕೊಳ್ಳುವ ಯಾವದೇ ಅಧಿಕಾರ ಇಲ್ಲದಿದ್ದರು ಸಹ ದೂರು ದಾಖಲಿಸಿ ಕೊಳ್ಳುತ್ತಾರೆ ಹಾಗು ತಪ್ಪು ಆದೇಶ ನೀಡಿ ವೈದ್ಯರನ್ನು ರಕ್ಷಿಸುತ್ತಾರೆ ಈ ಆದೇಶಗಳು ನ್ಯಾಯಾಲಯಗಳಿಗೆ ಮಾರಕವಾಗಬಹುದು ಎಂದರು.


 ಬೇರೆ ರಾಜ್ಯದ ವೈದ್ಯರು ಕರ್ನಾಟಕ ರಾಜ್ಯದಲ್ಲಿ ಕ್ರಿಮಿನಲ್‌ ಅಪರಾಧ ಮಾಡಿದಲ್ಲಿ ಯಾವದ ಕ್ರಮ ಜರಗಿಸುವ ಅಥವಾ ತಡೆಯುವ ಅಧಿಕಾರ ಕರ್ನಾಟಕ ವೈದ್ಯಕೀಯ ಮಂಡಳಿಗೆ ಇಲ್ಲ. ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ದಾಖಲಾದ ವ್ಯಾಜ್ಯಗಳಲ್ಲಿ ಮಂಡಳಿಯು ದಾಖಲೆಗಳನ್ನು ಪರಿಣಿತ ವೈದ್ಯರಿಂದ ಅಥವಾ ಯಾವದೇ ಸಂಸ್ಥೆಯಿಂದ ವರದಿಯನ್ನು ಪಡೆದು ಆದೇಶ ನೀಡುವದಿಲ್ಲ ಎಂದು ಹರಿಹಾಯ್ದರು. 

ಕರ್ನಾಟಕ ವೈದ್ಯಕೀಯ ಮಂಡಳಿಯು ತಮ್ಮ ಅಥವಾ ನಕಲಿ ದಾಖಲೆಗಳನ್ನು ನೀಡಿದ ವೈದ್ಯರ ಮೇಲೆ ಯಾವುದೇ ಶಿಕ್ಷೆ ನೀಡುವ ಯಾವದೇ ಅಧಿಕಾರವು ಸಿವಿಲ್ ಪ್ರಕ್ರೀಯೆ ಅನುಸರಿಸುತ್ತಿರುವದರಿಂದ ಮಂಡಳಿಗೆ ಇರುವದಿಲ್ಲ. ಬಹು ಸಂಖ್ಯೆಯಲ್ಲಿ ಪರ ರಾಜ್ಯದ ನೊಂದನಿ ಇಲ್ಲದೆ ವೈದ್ಯರು ಕರ್ನಾಟಕ ರಾಜ್ಯದಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿದ್ದರೂ ಸಹ ಕರ್ನಾಟಕ ವೈದ್ಯಕೀಯ ಮಂಡಳಿಯು ಯಾವುದೆ ಕ್ರಮವನ್ನು ಜರುಗಿಸುತ್ತಿಲ್ಲ ಬದಲಾಗಿ ಅವರನ್ನು ರಕ್ಷಿಸುತ್ತಿದೆ. ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಲ್ಲಿ ಕಾಲಹರಣ ಮತ್ತು ವೈದ್ಯರ ರಕ್ಷಣೆ ಖಚಿತ ಆದುದ್ದರಿಂದ ಕರ್ನಾಟಕ ವೈದ್ಯಕೀಯ ಮಂಡಳಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

Read More Articles