ನೇಜ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಚಿಕ್ಕೋಡಿ:ತಾಲ್ಲೂಕಿನ ನೇಜ ಗ್ರಾಮ ಪಂಚಾಯತ 2ನೇ
ಅವಧಿಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಬಾತಾಯಿ ಬಾಬಾಸಾಬ್ ಕಾಗೆ ಅವರು ಗ್ರಾಮ ಪಂಚಾಯತ ಅಧ್ಯಕ್ಷರಾಗಿ, ಸೋಲೋಚನಾ ಕಾಂಬ್ಳೆ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಉಮೇಶ್ ಬೀಗಿಹಳ್ಳಿ ಘೋಷಿಸಿದರು.
ಒಟ್ಟು 17 ಗ್ರಾಮ ಪಂಚಾಯತ ಸದಸ್ಯರ ಒಮ್ಮತದ ಮತದಾನದಿಂದ ಈ ಚುನಾವಣೆ ನಡೆಯಿತು ಮತ್ತು ಇಬ್ಬರು ಅವಿರೋಧವಾಗಿ ಆಯ್ಕೆಯಾದರು.