ಯುವಕ‌ನ ಕೊಲೆ‌ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ‌ ನೀಡುವಂತೆ ಒತ್ತಾಯ

ಬೆಳಗಾವಿ: ಮುಚ್ಚಂಡಿಯಲ್ಲಿ ಕೊಲೆಯಾದ ಶಿವಾಜಿ ನಗರದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿ ಶನಿವಾರ ಶಿವಾಜಿ ನಗರದ ಜನರು ಪ್ರತಿಭಟನೆ ನಡೆಸಿ ಪೊಲೀಸ್ ಇಲಾಖೆಗೆ ಮನವಿಯೊಂದನ್ನು ಸಲ್ಲಿಸಿದರು.

promotions

ಅ. 20ರಂದು ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಬಳಿ ಛತ್ರಪತಿ ಶಿವಾಜಿ ನಗರದ 5ನೇ ಗಲ್ಲಿಯ 16 ವರ್ಷದ ಬಾಲಕ ಪ್ರಜ್ವಲ್ ಶಿವಾನಂದ ಕರಿಗಾರ ಎಂಬ ಬಾಲಕನ ಶವ ಪತ್ತೆಯಾಗಿತ್ತು.

promotions

ಯಾರೋ ದುಷ್ಕರ್ಮಿಗಳು ಶಾಲೆಯಿಂದ ವಾಪಸ್ ಬರುವಾಗ ಬೈಕ್ ಮೇಲೆ ತೆಗೆದುಕೊಂಡು ಹೋಗಿ ಪ್ರಜ್ವಲ್‍ನನ್ನು ಬರ್ಬರವಾಗಿ ಹತ್ಯೆ ಮಾಡಿ ಮುಚ್ಚಂಡಿ ಬಳಿ ಬೀಸಾಕಿ ಹೋಗಿದ್ದರು.

ಒಳ್ಳೆಯ ಮಗನನ್ನು ಈ ರೀತಿ ಕೊಲೆ ಮಾಡಿದ್ದಾರೆ. ಕೊಲೆಗಾರರನ್ನು ಛತ್ರಪತಿ ಶಿವಾಜಿ ನಗರಕ್ಕೆ ತಂದು ಬಿಡರಿ, ನಮ್ಮ ಕೈಯಾಗ ಅವರನ್ನು ಕೊಡರಿ, ಅವರನ್ನು ಕೊಂದು ಹಾಕಲಿಕ್ಕೆ ನಾವು ನಮ್ಮ ನಪ್ಪಗೆ ಹುಟ್ಟಿಲ್ಲ ಎಂದು ಈ ವೇಳೆ ಛತ್ರಪತಿ ಶಿವಾಜಿ ನಗರ ಗಲ್ಲಿಯ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Read More Articles