ಉತ್ತರ ಪ್ರದೇಶದಂತೆ ವಿಶೇಷ ಲವ್ ಜಿಹಾದ್ ವಿರೋಧಿ ಪೊಲೀಸದಳ ಸ್ಥಾಪಿಸಲು ಒತ್ತಾಯ

ಬೆಳಗಾವಿ : ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಘಟನೆಗಳ ಹಿನ್ನೆಲೆ ಉತ್ತರ ಪ್ರದೇಶ ಮಾದರಿಯಲ್ಲಿ ವಿಶೇಷ 'ಲವ್ ಜಿಹಾದ್ ವಿರೋಧಿ ಪೊಲೀಸ್ ದಳ'ವನ್ನು ಸ್ಥಾಪಿಸಬೇಕು ಮತ್ತು 'ಹಲಾಲ್ ಪ್ರಮಾಣ ಪತ್ರ'ವನ್ನು ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಸುವರ್ಣ ವಿಧಾನ ಸೌಧದ ಎದುರಿನಲ್ಲಿ ಆಂದೋಲನವನ್ನು ನಡೆಸಲಾಯಿತು. ಅಂದೋಲನದ ನಂತರ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

promotions

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಹೃಷಿಕೇಶ ಗುರ್ಜರ ಇವರು ಮಾತನಾಡಿ, 'ದೆಹಲಿಯ ಜಿಹಾದಿ ಅಫ್ತಾಬ್ ಶ್ರದ್ಧಾಳನ್ನು ೩೫ ತುಂಡುಗಳಾಗಿ ಹತ್ಯೆ ಮಾಡಿದಂತೆ ರಾಜ್ಯದಲ್ಲಿ ಸಹ ಲವ್ ಜಿಹಾದ್ ನಡೆಯುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಇದ್ದರೂ ಸಹ ಏನು ಪ್ರಯೋಜನ ಇಲ್ಲ. 

promotions

ಲವ್ ಜಿಹಾದ್ ಮೂಲಕ ಮತಾಂತರ ಹೆಚ್ಚಾಗಿದೆ. ಡಿಸೆಂಬರ್ ಪ್ರಥಮ ವಾರದಲ್ಲಿ ಎರಡು ಲವ್ ಜಿಹಾದ್ ಘಟನೆಗಳು ರಾಯಚೂರಿನಲ್ಲಿ ನಡೆದಿದೆ. ಪೋಷಕರು ದೂರು ನೀಡಿದರೂ ಸಹ ಮತಾಂತರ ಮಾಡಿದ ಮತಾಂದ ಅಪರಾಧಿಯ ಬಂಧನ ಮಾಡಿಲ್ಲ, ಮತಾಂತರ ಪ್ರಕರಣದ ಅಡಿ ನೊಂದಣೆ ಆಗಿಲ್ಲ. 

6 ತಿಂಗಳ ಹಿಂದೆ ಕೊಡಗಿನ ದೀಪ್ತಿ ದಂತ ವೈದ್ಯೆ ವಿಧ್ಯಾರ್ಥಿನಿಯು ಲವಜಿಹಾದ್‌ಗೆ ಇಸ್ಲಾಮ್‌ಗೆ ಮತಾಂತರ ಆದಳು. ನಂತರ ಆಕೆಯನ್ನು ಐಸಿಸ್ ಭಯೋತ್ಪಾಧನಾ ಚಟುವಟಿಕೆ ಅಡಿಯಲ್ಲಿ ಎನ್ ಐಎ ಬಂಧನ ಮಾಡಿದೆ. ಮಂಗಳೂರಿನ ಆಶಾಳು ಆಯೆಶಾ ಭಾನು ಆಗಿ ಮತಾಂತರವಾಗಿ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಪ್ರಕರಣದಲ್ಲಿ ಪೋಲಿಸರು ಬಂಧನ ಮಾಡಿದರು. ರಾಜ್ಯದ ಮಂಗಳೂರು, ಬೆಂಗಳೂರು, ಉಡುಪಿ, ಶಿವಮೊಗ್ಗ, ಕೊಡಗಿನಲ್ಲಿ ಶಾಹಿನ್ ಗ್ಯಾಂಗ್ ಕಾಲೇಜಿಗೆ ಬರುವ ಹಿಂದೂ ಯುವತಿಯರನ್ನು ಮುಸಲ್ಮಾನ್ ಯುವತಿಯರಿಗೆ ಪರಿಚಯಸಿ ಲವ್ ಜಿಹಾದ್ ಗೆ ಕುಮ್ಮಕ್ಕು ನೀಡುತ್ತಿದೆ. ೨೦೧೪ ರಿಂದ ೨೦೧೯ ರ ವರೆಗೆ ರಾಜ್ಯದಲ್ಲಿ ೨೧,೦೦೦ ಯುವತಿಯರು ನಾಪತ್ತೆಯಾಗಿದ್ದಾರೆ. ಅನೇಕ ಮೌಲ್ವಿ,ಮದರಸಾಗಳು ಮತಾಂತರ ಚಟುವಟಿಕೆಯಲ್ಲಿ ತೊಡಗಿದೆ. ಇದನ್ನು ತಡೆಯಲು ಉತ್ತರ ಪ್ರದೇಶದ ಮಾದರಿಯಲ್ಲಿ ವಿಶೇಷ 'ಲವ್ ಜಿಹಾದ್ ವಿರೋಧಿ ಪೊಲೀಸ್ ದಳ'ವನ್ನು ಸ್ಥಾಪನೆ ಮಾಡಬೇಕು' ಎಂದು ಒತ್ತಾಯಿಸಿದರು.

ಹಾಗೂ ರಾಜ್ಯದಲ್ಲಿ ಅನಧಿಕೃತವಾಗಿ ಧರ್ಮದ ಆಧಾರದ ಮೇಲೆ ಹಲಾಲ್ ಲೋಗೊ ಇರುವ ಪ್ರಮಾಣಪತ್ರವನ್ನು ಸಾರ್ವಜನಿಕರು ಉಪಯೋಗ ಮಾಡುವ ಉತ್ಪನ್ನಗಳ ಮೇಲೆ ಮುದ್ರಣ ಮಾಡಿ, ಸಾವಿರಾರು ಕೋಟಿ ರೂಪಾಯಿಗಳನ್ನು ಮತಾಂಧ ಸಂಘಟನೆಗಳು ಸಂಗ್ರಹ ಮಾಡಿ, ದೇಶ ವಿರೋಧಿ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿವೆ. 

ಕೇಂದ್ರ ಸರಕಾರದ FSSAI ಅಧಿಕೃತ ಪ್ರಮಾಣಪತ್ರ ನೀಡುವ ಸಂಸ್ಥೆ ಇರುವಾಗಲೂ ಸಹ ಧರ್ಮದ ಆಧಾರದಲ್ಲಿ 'ಹಲಾಲ್ ಪ್ರಮಾಣ ಪತ್ರ' ನೀಡುವುದು ಸಂವಿಧಾನ ಬಾಹಿರವಾಗಿದೆ. ಇದನ್ನು ಕೂಡಲೇ ನಿಷೇಧ ಮಾಡಬೇಕು, ಹಲಾಲ್ ಪ್ರಮಾಣ ಪತ್ರ ನೀಡುವ ಹಣ ದೇಶದ್ರೋಹಿ ಚಟುವಟಿಕೆಗೆ ಉಪಯೋಗಿಸುತ್ತಿರುವ ಬಗ್ಗೆ ತನಿಖೆ ಮಾಡಬೇಕು, ಇದಕ್ಕೆ ಸಂಬಂಧಿಸಿ ಈ ಚಳಿಗಾಲದ ಅಧಿವೇಶನದಲ್ಲಿ 'ಹಲಾಲ ಪ್ರಮಾಣಪತ್ರ' ನಿಷೇಧ ಮಾಡುವ ಕಾಯಿದೆ ತರಬೇಕು' ಎಂದು ಆಗ್ರಹಿಸಿದರು.
 

Read More Articles