ನೋಡುಗರ ಕಣ್ಮನ ಸೆಳೆದ ವಿವಿಧ ಪೇಂಟಿಂಗ್ ಚಿತ್ರಗಳು
- Shivaraj Bandigi
- 15 Jan 2024 , 3:36 AM
- Belagavi
- 360
ಬೆಳಗಾವಿ : ತೆರೆಮರೆಯಲ್ಲಿರುವ ಚಿತ್ರಕಲಾವಿದರು ಸಮಾಜದ ಮುಖವಾಣಿಗೆ ಬರುವ ಉದ್ದೇಶದಿಂದ ಗುಲ್ ಮಹಾಲ್ ಗ್ರೂಪ್ ನಿಂದ ವೈ ನಾಟ್ ರೈಡ್ ಪೇಂಟಿಂಗ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಜಯ ಚೋಪಲಕರ ಹೇಳಿದರು.

ಭಾನುವಾರ ಇಲ್ಲಿನ ಟಿಳಕವಾಡಿಯಲ್ಲಿ ಗುಲ್ ಮಹಾಲ್ ಗ್ರೂಪ್ ನಿಂದ ಆಯೋಜಿಸಲಾಗಿದ್ದ ವೈ ನಾಟ್ ರೆಡ್ ಪೇಂಟಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಳಗಾವಿಯಲ್ಲಿ ಸಾಕಷ್ಟು ಜನ ಪೇಂಟಿಂಗ್ ಕಲಾವಿದರು ಇದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಬೇಕು. ನಮ್ಮಲ್ಲಿರುವ ಕಲೆಯನ್ನು ಜಗತ್ತಿಗೆ ಪರಿಚಯಿಸುವುದು ಅತ್ಯವಶ್ಯಕವಾಗಿದೆ. ಆದ್ದರಿಂದ ಬೆಳಗಾವಿಯಲ್ಲಿರುವ ಎಲ್ಲ ಪೇಂಟಿಂಗ್ ಕಲಾವಿದರು ಮುಂದೆ ಬಂದು ತಮ್ಮ ಕಲೆಯನ್ನು ಪ್ರದರ್ಶನ ಮಾಡಬೇಕೆಂದು ಕರೆ ನೀಡಿದರು.

ನಾನಾ ಮಾದರಿ ಪೇಂಟಿಂಗ್‌ಗಳು ಸಾರ್ವಜನಿಕರ ಕಣ್ಮನ ಸೆಳೆದವು. ಮಕ್ಕಳು 3ಡಿ ಪೇಂಟಿಂಗ್ ನೋಡಿ ಸಂಭ್ರಮಿಸಬೇಕು ಅಂದಾಗ ಮಾತ್ರ ನಮ್ಮ ಪೇಂಟಿಂಗ್ ಗೆ ಒಂದು ಅರ್ಥ ಬರುತ್ತದೆ ಎಂದರು.
ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕಲೆ ಎನ್ನುವುದು ಕರಗತವಾಗಿರುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಪೇಂಟಿಂಗ್ ಮಾಡುವುದು ಒಂದು ಕನಸು ಅದನ್ನು ಅಂದವಾಗಿ ಬಿಡಿಸಿ ಜನರಿಗೆ ತೋರಿಸುವುದೇ ಒಂದು ಅಪರೂಪದ ಕೆಲಸವಾಗಿದೆ ಇದನ್ನು ಕಲಾವಿದರು ನಿರಂತರವಾಗಿ ಮಾಡಬೇಕೆಂದರು.
ಪೇಂಟಿಂಗ್ ಎಕ್ಸಿಬಿಷನ್ ನಲ್ಲಿ ಸುಮಾರು 46ಕ್ಕೂ ಅಧಿಕ ಕಲಾವಿದರು ಭಾಗವಹಿಸಿ ತಮ್ಮ ಚಿತ್ರಕಲೆಯನ್ನು ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.
ಜೆ.ಪಿ.ಪಾಡಕೆ, ವಿಶ್ವನಾಥ ಗುಗ್ಗರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










