ಸಾಹಸ ಮೆರೆದ ಕೆಡೆಟ್ ಅಮಿತ್ ರಾಜ್
- 15 Jan 2024 , 12:37 AM
- Bihar
- 167
ನಳಂದ :ಪುರುಲಿಯಾದ ಸೈನಿಕ ಶಾಲೆಯ ಕೆಡೆಟ್ ಸಾಹಸದಿಂದ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದ ಮೂರು ಜೀವಗಳನ್ನು ಉಳಿಸಿ ಸಾಧನೆ ಮಾಡಿದ್ದಾರೆ. ಅಮಿತ್ ರಾಜ್ ಸೈನಿಕ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಅವರ ಉರು ನಳಂದದಲ್ಲಿದ್ದಾಗ ಅವರ ನೆರೆಹೊರೆಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಧೈರ್ಯವನ್ನು ತೋರಿಸಿ 3 ಮಕ್ಕಳು ಮತ್ತು ಬೆಂಕಿಯಿಂದ ಉರಿಯುತ್ತಿರುವ ಮನೆಗೆ ಒಳಗೆ ಪ್ರವೇಶಿಸಿ ಬೆಂದು ಹೋಗಬೇಕಿದ್ದ ಜೀವಗಳನ್ನು ರಕ್ಷಿಸಿದ್ದಾರೆ.

ವೈಯಕ್ತಿಕ ಸುರಕ್ಷತೆ ಸಂಪೂರ್ಣವಾಗಿ ಕಡೆಗಣಿಸಿ ಅವರು 3 ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಿದರು.ಅಮಿತ್ ಅವರ ಸುಟ್ಟ ದೇಹವನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅಂತಿಮವಾಗಿ ಡಿಸೆಂಬರ್ 13 ರಂದು ಅವರು ಬೆಂಕಿಗಾಯ ಗಳಿಂದ ಮರಣ ಹೊಂದಿದರು.

ಕೆಡೆಟ್ ಅಮಿತ್ ರಾಜ್ ಅವರ ಧೀರ ಕಾರ್ಯವು ಮುಂದಿನ ತಲೆಮಾರಿನ ಕೆಡೆಟ್ ಗಳಿಗೆ ಪ್ರೇರಣೆ ನೀಡುತ್ತದೆ.ಅವರ ವಯಸ್ಸು ಮತ್ತು ನಿರೀಕ್ಷೆಗಳಿಗಿಂತ ಎತ್ತರಕ್ಕೆ ಏರಲು ಪ್ರೇರೇಪಿಸುತ್ತದೆ.










