ಜಿಲ್ಲಾಧಿಕಾರಿ ಹಾಡಿಗೆ ಮಕ್ಕಳ ಕೇಕೆ...
- 15 Jan 2024 , 2:18 AM
- Belagavi
- 130
ಮಕ್ಕಳ ಹಾಡು, ನೃತ್ಯಗಳಿಗೆ ಮನಸೋತ ಜಿಲ್ಲಾಧಿಕಾರಿಗಳು ಮೈಕು ಹಿಡಿದು ಹಾಡಲು ಆರಂಭಿಸುತ್ತಿದ್ದಂತೆ ಎಲ್ಲೆಡೆ ಚಪ್ಪಾಳೆಗಳ ಕರತಾಡನ...ಮಕ್ಕಳ ಕೇಕೆ ಮುಗಿಲು ಮುಟ್ಟಿತು! ಬೈಲವಾಡ ಗ್ರಾಮದ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿನ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳು ಹಾಡಿದರು.

ಮೈ ಶಾಹೀರ್ ತೋ ನಹೀ.. ಮಗರ್... ಎಂದು ಹಾಡಿದಾಗ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಪುಳಕಗೊಂಡರು. ಇದರಿಂದ ಉತ್ತೇಜನಗೊಂಡು "ಕನ್ನಡವೆಂದರೆಕುಣಿಯುವೇನು...ಕನ್ನಡವೆಂದರೆಮಣಿಯುವೇನು.... ಧೈರ್ಯವಕೆಡಿಸುವಹೇಡಿಯನು..ನಂಬಿಕೆನಶಿಸುವಛಾಡಿಯನು...ಹೊಣೆಅರಿಯದಹೊಣೆಗೇಡಿಯನ್ನುನಂಬದೇನಡಿಯುವೇನು."ಎಂದು ಹಾಡಿದಾಗ ನೆರೆದ ನೂರಾರು ಮಕ್ಕಳಿಂದ ಕೋರಸ್ ಕೇಳಿಬಂತು..











