ಪೇಟಾ ಇಂಡಿಯಾಗೆ ಖಡಕ್ ಉತ್ತರ ಕೊಟ್ಟ ಅಮುಲ

  • 15 Jan 2024 , 4:50 AM
  • Delhi
  • 137

ನವ ದೆಹಲಿ: ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಸ್ಯಾಹಾರಿ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತಾಯ ನೀಡಲು ಅಮುಲ ಮಿಲ್ಕ್ಸ್ ಅವರನ್ನು ಕೇಳಿದೆ.

promotions

ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿಗೆ ಪೇಟಾ ಪತ್ರ ಬರೆದಿದ್ದು ಡೈರಿ ಸಹಕಾರಿ ಸಂಘಗಳು ಸಸ್ಯಾಹಾರಿ ಆಹಾರ ಮತ್ತು ಸಸ್ಯಾಹಾರಿ (ವೇಗಾನ್) ಹಾಲಿನ ಮಾರುಕಟ್ಟೆಯಿಂದ ಹಚ್ಚಿನ ಲಾಭ ಪಡೆಯಬೇಕು ಎಂದು ಹೇಳಿದೆ.

ಹೆಚ್ಚುತ್ತಿರುವ ಸಸ್ಯಾಹಾರಿ ಆಹಾರ ಮತ್ತು ಹಾಲಿನ ಮಾರುಕಟ್ಟೆಯಿಂದ ಹೆಚ್ಚಿನ ಲಾಭ ಪಡೆಯಲು ಮತ್ತೆ ಅಮುಲ್ ಅವರನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ ಎಂದು ಪೇಟಾ ಹೇಳಿದೆ.

ಇದಕ್ಕೆ ಉತ್ತರ ನೀಡಿದ ಆರ್ ಎಸ್ ಸುದಿ (ಮ್ಯಾನೇಜಿಂಗ್ ಡೈರೆಕ್ಟರ ಅಮುಲ್ ) ಬಡ ರೈತರ ಜೀವನೋಪಾಯವನ್ನು ಕಸಿದುಕೊಂಡು ಮತ್ತು ರೈತರನ್ನು ಬೀದಿಗೆ ತರಲು ಪೆಟಾ ಬಯಸಿದೆ ಮತ್ತು ಶ್ರೀಮಂತ ಎಂಎನ್‌ಸಿಯ ಜೆನಿಟಿಕೇಲಿ ಮಾರ್ಪಡಿಸಿದ ಸೋಯಾವನ್ನು ಅತಿಯಾದ ಬೆಲೆಯಲ್ಲಿ ಮಾರುಕಟ್ಟೆಗೆ ತರಲು ಬಯಸುತ್ತಿದೆ ಮತ್ತು ಇದು ಕೆಳ ಮತ್ತು ಮಧ್ಯಮ ವರ್ಗದವರಿಗೆ ಅತ್ಯಂತ ದುಬಾರಿ ಬೆಲೆಯಲ್ಲಿ ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

Read More Articles