ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

  • 15 Jan 2024 , 3:56 AM
  • Haveri
  • 100

ಹಾವೇರಿ: ರಾಣಿಬೆನ್ನೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಇಂದು ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು. ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಭೂದಾನ ಮಾಡಿದ ಗ್ರಾಮದ ಧರ್ಮಪ್ಪ ಚೌಡಣ್ಣನವರ ಅವರನ್ನು ಇಂದು ಶಾಸಕ ಅರುಣಕುಮಾರ ಪೂಜಾರ ಸನ್ಮಾನಿಸಿದರು. ಹಾಗೂ ತಾಲೂಕಿನ ಮುಷ್ಟೂರ ಗ್ರಾಮದಲ್ಲಿ ನಿರ್ಮಿಸಿದ ಶುದ್ಧಕುಡಿವ ನೀರಿನ ಘಟಕವನ್ನು ಶುಕ್ರವಾರ ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸಿದರು. ಹಾಗೂ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಕಚೇರಿ ಕಟ್ಟಡ ಕಾಮಗಾರಿಗೆ ಶಾಸಕ ಅರುಣಕುಮಾರ ಪೂಜಾರ ಭೂಮಿಪೂಜೆ ನೆರವೇರಿಸಿದರು.

promotions

promotions

Read More Articles