ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿಯವರಿಗೆ ಸನ್ಮಾನ
- 14 Jan 2024 , 11:36 PM
- Belagavi
- 130
ಯಮಕನಮರಡಿ: ಬೆಳಗಾವಿ ಜಿಲ್ಲಾ ಮದ್ಯವರ್ತಿ ಸಹಕಾರಿ ಬ್ಯಾಂಕಿನ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಮೇಶ ಕತ್ತಿಯವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ರಮೇಶ ಕತ್ತಿ ಅಭಿಮಾನಿ ಬಳಗದವರು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ ಮೊರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ ಹಿಡಕಲ್ ಡ್ಯಾಂ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಮರನಾಥ ಮಹಾಜನಶೆಟ್ಟಿ, ಹುಕ್ಕೇರಿ ತಾ.ಪಂ. ಮಾಜಿ ಅಧ್ಯಕ್ಷ ಅಡಿವೆಪ್ಪ ಜಿಂಡ್ರಾಳಿ, ಗುರುಸಿದ್ದ ಪಾಯನ್ನವರ, ಹುಕ್ಕೇರಿ ಪಿ.ಎಲ್.ಡಿ. ಬ್ಯಾಂಕ ಉಪಾಧ್ಯಕ್ಷ ದುರದುಂಡಿ ಪಾಟೀಲ, ಸದಾಶಿವ ಮಠದ, ಯಲ್ಲಪ್ಪ ಜಿರಳಿ, ಸಿದ್ದಲಿಂಗ ಸಿದ್ದಗೌಡರ, ನವೀನ ಕಡೇಲಿ, ಬಸರವಾಜ ಕರಡಿ, ಕೆ.ಡಿ.ಪಾಟೀಲ, ನಿಂಗಪ್ಪ ದಾಸ, ಶಿವಪ್ಪ ಡೊನ್ನಪಾಟೀಲ, ಯಲ್ಲಪ್ಪಾ ಪಾಟೀಲ, ಯಲ್ಲಪ್ಪ ಗಡಕರಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.












