ಭಾರತ-ಯುಎಇ ನಡುವಿನ ವಿಮಾನ ಸಂಚಾರ ರದ್ದು
- shivaraj bandigi
- 18 Apr 2024 , 10:17 AM
- Belagavi
- 300
ನವ ದೆಹಲಿ: ಸಾಮಾನ್ಯವಾಗಿ ಏಪ್ರಿಲ್ ವೇಳೆಯಲ್ಲಿ ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಯುಎಇ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಗಲ್ಫ್ ರಾಷ್ಟ್ರಗಳ ಪ್ರಮುಖ ಆರ್ಥಿಕ ಕೇಂದ್ರವಾದ ದುಬೈನಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ದುಬೈ ವಿಮಾನ ನಿಲ್ದಾಣ ಬಹುತೇಕ ಮುಳುಗಡೆ ಆಗಿದ್ದು ಪ್ರಯಾಣಿಕರು ಭಾರೀ ಮಳೆಯ ನಡುವೆ ಯುಎಇಯಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.












