ಸಿಎಂ ಆಲೋಚನೆ ಮಾಡಿ ಮಾತಾಡ್ತಾರೆ : ಹಿಜಬ್ ವಿಚಾರಕ್ಕೆ ಲಕ್ಷ್ಮಣ ಸವದಿ ಪ್ರತಿಕ್ರಿಯೆ
- shivaraj bandigi
- 14 Jan 2024 , 12:06 PM
- Belagavi
- 362
ಅಥಣಿ : ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ಹಿಜಬ್ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಅವರು ಗ್ರಾಮದಲ್ಲಿ ಸುಮಾರು ೩.೫ ಕೋಟಿ ರರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜಲ್ ಜೀವನ್ ಯೋಜನೆಯ ಭೂಮಿ ಪೂಜೆ ನೆರವೇರಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

ಹಿಜಬ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನವರು ಆಲೋಚನೆ ಮಾಡಿ ಮಾತಾಡ್ತಾರೆ ಯಾವುದಕ್ಕು ಕಾನೂನು ಬದ್ದವಾಗಿ ಏನೇನು ಕಾರ್ಯವನ್ನು ಮಾಡಬೇಕು ಅದನ್ನ ಮಾಡುತ್ತಾರೆ ಅದರ ಬಗ್ಗೆ ಚರ್ಚೆ ಮಾಡುವುದು ಅನವಶ್ಯಕ ಎಂದು ಹೇಳಿದರು.










